ಈಗಿನ ಯುವತಿಯರು ಕಲಿಯಬೇಕಿದೆ ʼಲಕ್ಷ್ಮಿʼ ಉಡುಗೆ-ತೊಡುಗೆಯ ಕಲೆ..! ಸೀರೆ ನೀರೆಯ ಸೌಂದರ್ಯದ ಪ್ರತಿಬಿಂಬ..

Minister Lakshmi hebbalkar : "ಭಾರತೀಯ ಸಂಸ್ಕೃತಿ" ಅಂದಾಕ್ಷಣ ಥಟ್‌ ಅಂತ ಎಲ್ಲರ ನೆನಪಿಗೆ ಬರುವವಳೇ ಸೀರೆಯುಟ್ಟ ನಾರಿ... ಸೀರೆ ನಮ್ಮ ದೇಶೀಯ ಸಂಸ್ಕೃತಿಯ ಜೀವಾಳ.. ಆದರೆ ಇಂದು ಅದೇಕೋ ಅದೇಷ್ಟೋ ಯುವತಿಯರು ಸೀರೆಯನ್ನು ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮುಖ ಮಾಡುತ್ತಿದ್ದಾರೆ.. ಇದರ ನಡುವೆ ಎಲ್ಲರ ಗಮನ ಸೆಳೆಯುತ್ತಿದೆ.. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಉಡುಗೆ ತೊಡುಗೆಯ ಸಂಸ್ಕೃತಿ..

1 /6

ಸಮಾಜದಲ್ಲಿ ಸೀರೆಗೆ ಅದರದ್ದೇ ಆದ ಗೌರವಗಳಿವೆ. ಸುಂದರಿಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಸೀರೆಗೆ ಮತ್ತು ಸೀರೆಯುಡುವ ಶೈಲಿಗೆ ವಿದೇಶಿಯರೂ ಇಂದು ಮನಸೋತಿದ್ದಾರೆ.. ಆದರೆ ನಮ್ಮ ಹೆಣ್ಣುಮಕ್ಕಳೇ ಇದರಿಂದ ದೂರ ಹೋಗಿ ತುಂಡು ಬಟ್ಟೆ ತೊಡುತ್ತಿದ್ದಾರೆ.. ಇವರ ನಡುವೆ ಇಂತಹವರಿಗೆ ಮಾದರಿಯಾಗಿದ್ದಾರೆ.. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.  

2 /6

ಹೌದು.. ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳಲ್ಲಿಯೇ ಅತ್ಯಂತ ಪುರಾತನ ಉಡುಗೆ ಸೀರೆ.. ಅನಾದಿ ಕಾಲದಿಂದ ಸೀರೆಯು ನಮ್ಮ ದೇಶದ ಮಹಿಳೆಯರ ಪ್ರಮುಖ ಉಡುಗೆ.. ವಿಪರ್ಯಾಸ ಅಂದ್ರೆ ಇಂದು ಇದು ಕಣ್ಮರೆಯಾಗುತ್ತಿದೆ..   

3 /6

ಅಯ್ಯೋ.. ಸೀರೆಯುಟ್ಟು ಎಲ್ಲಾ ಕಡೆ ನಡೆಯೋಕೆ ಆಗಲ್ಲ, ತುಂಬಾ ಕಷ್ಟ ಎಂದು ಜಾರಿಕೊಳ್ಳುವ ಇತ್ತೀಚಿನ ಯುವತಿಯರು ಒಮ್ಮೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೋಡಿ ಕಲಿಯಬೇಕಿದೆ.. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಾ.. ಯಾವುದೇ ಸಭೆ ಸಮಾರಂಭ ಇರಲಿ ಸೀರೆಯುಟ್ಟು ಹೋಗಬಹುದು ಅಂತ ತೋರಿಸಿಕೊಡುತ್ತಿದ್ದಾರೆ..   

4 /6

ಕರ್ನಾಟಕದ ಶೈಲಿ, ಕೂರ್ಗಿ ಶೈಲಿ, ಆಂಧ್ರಾ ಶೈಲಿ,  ನೀವಿ ಶೈಲಿ, ಗುಜರಾತಿ ಶೈಲಿ, ಬೆಂಗಾಲಿ ಶೈಲಿ, ಮರಾಠಿ ಶೈಲಿ, ಕೇರಳದ ಶೈಲಿ ಹೀಗೆ ಭಾರತದಲ್ಲಿಯೇ ವಿಭಿನ್ನವಾದ ಸೀರೆಯ ಶೈಲಿಗಳಿವೆ. ಇಡೀ ಭಾರತವೇ ಸೀರೆಯನ್ನು ಒಪ್ಪಿಕೊಂಡಿದೆ, ಅಪ್ಪಿಕೊಂಡಿದೆ.. ವಿದೇಶಿಗರಿಗೆ ಸೀರೆಯುಡಲು ಇಷ್ಟವಾಗುತ್ತಿದೆ.. ಹೀಗಿರುವಾ ನಮ್ಮ ಯವತಿಯರಿಗೆ ತುಂಡು ಬಟ್ಟೆಯ ಮೇಲೆ ವ್ಯಾಮೋಹ ಹೆಚ್ಚಾಗುತ್ತಿದೆ..  

5 /6

ಹಿಂದೂ ದೇವತೆಗಳ ಉಡುಪು ಕೂಡ ಸೀರೆಯೇ.. ದೇವತೆಗಳನ್ನು ನಾವು ಎಂದಿಗೂ ಪಾಶ್ಚಿಮಾತ್ಯ ಉಡುಗೆಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗೇ ಸೀರೆ ಹೆಣ್ಣನ್ನು ದೇವತೆಯ ರೀತಿ ಕಾಣುವಂತೆ ಮಾಡುತ್ತದೆ.. ಸೌಂದರ್ಯವನ್ನೂ ಹೆಚ್ಚುಸುತ್ತದೆ..   

6 /6

ಸದಾ ಸೀರೆಯುಟ್ಟು ಸಂಪ್ರದಾಯಿಕವಾಗಿ ಕಾಣಿಸಿಕೊಳ್ಳುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೀರೆ ಉಡುವ ಶೈಲಿ ಬಹಳ ಸೊಗಸು.. ನೀವು ಸಹ ಸೀರೆಯುಟ್ಟು ಸಭೆ ಸಮಾರಂಭಕ್ಕೆ ಹೋಗಿ ನೋಡಿ.. ಅಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲೆ ಇರುತ್ತದೆ.. ಕೆಟ್ಟದೃಷ್ಟಿಯಿಂದ ಅಲ್ಲ, ಗೌರವಯುತವಾಗಿ..