ಬುಧದ ಸ್ಥಾನದಲ್ಲಿನ ಈ ಬದಲಾವಣೆಗಳು ಕೆಲವು ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಇವರು ಜೀವನದಲ್ಲಿ ಬಹಳಷ್ಟು ಯಶಸ್ಸು ಮತ್ತು ಸಂಪತ್ತನ್ನು ಗಳಿಸುವುದು ಸಾಧ್ಯವಾಗುತ್ತದೆ.
ಬೆಂಗಳೂರು : ಜ್ಯೋತಿಷ್ಯದ ವಿಷಯದಲ್ಲಿ ಡಿಸೆಂಬರ್ ತಿಂಗಳ ಕೊನೆಯ ದಿನಗಳು ಪ್ರಾಮುಖ್ಯತೆ ಪಡೆದಿವೆ. ಈ ಹೊತ್ತಿನಲ್ಲಿ ಸ್ಥಾನ ಬದಲಾಯಿಸುವ ಬುಧ ಮಕರ ರಾಶಿಯನ್ನು ಪ್ರವೇಶಿಸುತ್ತದೆ. ಇದಾದ ನಂತರ ಬುಧ ಗ್ರಹ ಡಿಸೆಂಬರ್ 31 ರಂದು ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತದೆ. ಬುಧದ ಸ್ಥಾನದಲ್ಲಿನ ಈ ಬದಲಾವಣೆಗಳು ಕೆಲವು ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಇವರು ಜೀವನದಲ್ಲಿ ಬಹಳಷ್ಟು ಯಶಸ್ಸು ಮತ್ತು ಸಂಪತ್ತನ್ನು ಗಳಿಸುವುದು ಸಾಧ್ಯವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ : ಬುಧ ಸಂಚಾರವು ಮೇಷ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡುತ್ತದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ವ್ಯಾಪಾರ ವಹಿವಾಟು ಚುರುಕುಗೊಳ್ಳಲಿದೆ. ನೀವು ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ಯಶಸ್ಸು ಸಿಗಲಿದೆ. ಉತ್ತಮ ಅವಕಾಶಗಳು ಎದುರಾಗಲಿವೆ. ಉದ್ಯೋಗ ಬದಲಾವಣೆಯ ಪ್ರಯತ್ನಗಳು ಯಶಸ್ವಿಯಾಗುತ್ತವೆ.
ವೃಷಭ ರಾಶಿ : ಬುಧನ ರಾಶಿ ಬದಲಾವಣೆಯಿಂದ ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುವುದು ಸಾಧ್ಯವಾಗುತ್ತದೆ. ಹೊಸ ಕೆಲಸಕ್ಕೆ ಸೇರಬಹುದು. ವಿದೇಶಿ ಕಂಪನಿಯಿಂದ ಉದ್ಯೋಗದ ಆಫರ್ ಬರಬಹುದು.
ಕಟಕ ರಾಶಿ :ಬುಧ ಸಂಕ್ರಮಣವು ಕರ್ಕಾಟಕ ರಾಶಿಯವರ ದಾಂಪತ್ಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅನುಕೂಲವಾಗಲಿದೆ. ಆದರೆ ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು.
ಕನ್ಯಾರಾಶಿ : ಕನ್ಯಾ ರಾಶಿಯವರಿಗೆ ಬುಧ ಸಂಕ್ರಮಣವು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ಸಮಯದಲ್ಲಿ ದೊಡ್ಡ ಕೆಲಸವೊಂದು ಆರಂಭವಾಗಬಹುದು. ಪ್ರೇಮ ಜೀವನ ಚೆನ್ನಾಗಿರುತ್ತದೆ. ಪ್ರೇಮ ವಿವಾಹ ಮಾಡಿಕೊಳ್ಳಬೇಕು ಎಂದಿರುವವರ ಆಸೆ ಈಡೇರುತ್ತದೆ.
ಧನು ರಾಶಿ : ಬುಧ ಸಂಕ್ರಮಣವು ಧನು ರಾಶಿಯವರಿಗೆ ಅನಿರೀಕ್ಷಿತ ಲಾಭವನ್ನು ನೀಡುತ್ತದೆ. ಆದಾಯದ ಮೂಲ ಹೆಚ್ಚಾಗುತ್ತವೆ. ಹೊಸ ಮನೆ ಅಥವಾ ನಿವೇಶನ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಮಾತೇ ನಿಮಗೆ ವರವಾಗಲಿದೆ.
ಮಕರ ರಾಶಿ : ಬುಧ ರಾಶಿಯ ಬದಲಾವಣೆಯು ಮಕರ ರಾಶಿಯವರಿಗೆ ವರದಾನವಾಗಿ ಪರಿಣಮಿಸಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಗೌರವ ಹೆಚ್ಚಾಗಲಿದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)