ಆ ಅದ್ಭುತ ಶಕ್ತಿಯ ಕಾರಣದಿಂದ ಮಯಾಂಕ್‌ ಸ್ಪೀಡ್‌ ಬೌಲಿಂಗ್‌ ಮಾಡ್ತಾರೆ..! ಬೆಚ್ಚಿ ಬೀಳಿಸುವ ವಿಚಾರ ಬಿಚ್ಚಿಟ್ಟ ಕ್ರಿಕೆಟಿಗನ ತಾಯಿ

Mayank Yadav diet : ಮಯಾಂಕ್‌ ವಿಶೇಷವಾದ ದಾಲ್, ರೊಟ್ಟಿ, ಅನ್ನ, ಹಾಲು, ತರಕಾರಿಗಳು ಹೊರತು ಮಾಂಸಾಹಾರ ಸೇವಿಸುವುದಿಲ್ಲ. ಇದಕ್ಕೆ ಕಾರಣ.. ಕ್ರಿಕೆಟಿಗನ ಹಿಂದಿನ ದೈವಿಕ ಶಕ್ತಿಯ ರಹಸ್ಯವನ್ನು ಬಿಚ್ಚಿ ಮಮತಾ ಯಾದವ್‌.. ಈ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ ನೋಡಿ..
 

1 /4

ಲಕ್ನೋ ಸೂಪರ್ ಜೈಂಟ್ಸ್ (LSG) ವೇಗಿ ಮಯಾಂಕ್ ಯಾದವ್ ತಮ್ಮ ವೇಗದ ಬೌಲಿಂಗ್‌ನಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2024 ) ಅಬ್ಬರಿಸುತ್ತಿದ್ದಾರೆ. ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಕ್ರಿಕೆಟಿಗನ ವೇಗದ ಹಿಂದಿನ ರಹಸ್ಯವನ್ನು ಇದೀಗ ಅವರ ತಾಯಿ ಬಹಿರಂಗ ಪಡಿಸಿದ್ದಾರೆ.   

2 /4

ಮಯಾಂಕ್ ಈಗಷ್ಟೇ ಸಸ್ಯಾಹಾರಿಯಾಗಿದ್ದಾನೆ. ಮೊದಲು ಅವರು ಮಾಂಸಾಹಾರವನ್ನು ಸೇವಿಸುತ್ತಿದ್ದರು. ಕಳೆದ 2 ವರ್ಷಗಳಿಂದ ಸಸ್ಯಾಹಾರಿಯಾಗಿದ್ದಾನೆ. ಅವರ ಡಯಟ್ ಚಾರ್ಟ್ ಆಧರಿಸಿ, ನಾವು ಅವನಿಗೆ ಆಹಾರ ತಯಾರಿಸುತ್ತೇವೆ ಅಂತ ಮಯಾಂಕ್‌ ಅಮ್ಮ ಮಮತಾ ಯಾದವ್‌ (Mayank's mother Mamta) ಅವರು ಆಜ್‌ ತಕ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.  

3 /4

ಮಯಾಂಕ್‌ ವಿಶೇಷವಾದ ದಾಲ್, ರೊಟ್ಟಿ, ಅನ್ನ, ಹಾಲು, ತರಕಾರಿಗಳು ಹೊರತು ಮಾಂಸಾಹಾರ ಸೇವಿಸುವುದಿಲ್ಲ. ಇದಕ್ಕೆ ಕಾರಣ ಶ್ರೀಕೃಷ್ಣನ ಮೇಲೆ (Mayank Yadav Lord Krishna belief and vegetarianism) ಅವನಿಗಿರುವ ಅಪಾರವಾದ ನಂಬಿಕೆ, ಎರಡನೆಯದಾಗಿ ಮಾಂಸಾಹಾರವು ತನ್ನ ದೇಹಕ್ಕೆ ಸರಿಹೊಂದುವುದಿಲ್ಲ ಅಂತ ಅವನು ಭಾವಿಸಿರಬೇಕು ಎಂದು ಮಮತಾ ಅವರು ತಿಳಿಸಿದರು.  

4 /4

ಇದೀಷ್ಟು ನಮಗೆ ಗೊತ್ತಿರುವ ವಿಚಾರ ಆದ್ರೆ, ಇದುವರೆಗೂ ಮಯಾಂಕ್‌ ತಾನು ಮಾಂಸಾಹಾರವನ್ನು ಏಕೆ ತ್ಯಜಿಸಿದರು ಅಂತ ನಮ್ಮ ಮುಂದೆ ಹೇಳಿಲ್ಲ. ಅವನ ಆಟ ಮತ್ತು ಅವನ ದೇಹಕ್ಕೆ ಏನು ಒಳ್ಳೆಯದು ಅಂತ ಅವನಿಗೆ ತಿಳಿದಿದೆ ಹೀಗಾಗಿ ಹೆಚ್ಚಾಗಿ ಒತ್ತಾಯ ಮಾಡಲ್ಲ ಅಂತ ಮಯಾಂಕ್ ಅವರ ತಾಯಿ ಬಹಿರಂಗಪಡಿಸಿದರು.