Mars Transit In Gemini 2021: ರಾಹು ತೊರೆದು ಮಿಥುನ ತಲುಪಿದ ಮಂಗಳ, ಅಂಗಾರಕ ಯೋಗ ಅಂತ್ಯ, ಯಾವ ರಾಶಿಯ ಮೇಲೆ ಏನು ಪ್ರಭಾವ?

Mars Transit in Gemini 14 April 2021: ಸೌರಮಂಡಲದ ಸೇನಾಪತಿ ಮಂಗಳ ದೇವ (Mangal Dev) ವೃಷಭ ರಾಶಿಯನ್ನು (Taurus) ತೊರೆದು ಮಿಥುನ ರಾಶಿ (Gemini)ಯಲ್ಲಿ ಗೋಚರಿಸಿದ್ದಾನೆ. 

Mars Transit in Gemini 14 April 2021: ಸೌರಮಂಡಲದ ಸೇನಾಪತಿ ಮಂಗಳ ದೇವ (Mangal Dev) ವೃಷಭ ರಾಶಿಯನ್ನು (Taurus) ತೊರೆದು ಮಿಥುನ ರಾಶಿ (Gemini)ಯಲ್ಲಿ ಗೋಚರಿಸಿದ್ದಾನೆ. ಏಪ್ರಿಲ್ 14, 2021 ರ ಬೆಳಗ್ಗೆ 1 ಗಂಟೆ 14 ನಿಮಿಷಕ್ಕೆ ಮಂಗಳ ದೇವ ಮಿಥುನ ರಾಶಿ ಪ್ರವೇಶಿಸಿದ್ದಾನೆ. ಈ ರಾಶಿ ಪರಿವರ್ತನೆಯ ಜೊತೆಗೆ ರಾಹು-ಮಂಗಳನ ಯುತಿಯಿಂದ ನಿರ್ಮಾಣಗೊಂಡ ಅಂಗಾರಕ ಯೋಗ ಅಂತ್ಯವಾಗಿದೆ.

 

ಇದನ್ನೂ ಓದಿ- Unique Shiva Temple:ಇಲ್ಲಿ ನಡೆಯುತ್ತದೆ ಮಹಾದೇವನ ತುಂಡಾದ ತ್ರಿಶೂಲ ಪೂಜೆ, ದೇವಸ್ಥಾನದ ಇತರೆ ನಿಗೂಢ ರಹಸ್ಯಗಳ ಮಾಹಿತಿ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ವೃಷಭ ತೊರೆದು ಮಿಥುನ ರಾಶಿ ಪ್ರವೇಶಿಸಿದ ಮಂಗಳ - ಭೂಮಿಯ ರೀತಿಯೇ ಇದೆ ಎಂದು ಭಾವಿಸಲಾಗುವ ಭೂಮಿಯ ಹತ್ತಿರದ ಗ್ರಹ ಮಂಗಳದೇವ ಏಪ್ರಿಲ್ 14, 2021ರ ಬೆಳಗಿನ ಜಾವ 1 ಗಂಟೆ 14 ನಿಮಿಷಕ್ಕೆ ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಸೌರಮಂಡಲದಲ್ಲಿ ಕೆಂಪು ಗ್ರಹ ಹೇರರಿನಿಂದ ಖ್ಯಾತಿ ಪಡೆದ ಮಂಗಳ ಇದುವರೆಗೆ ವೃಷಭ ರಾಶಿಯಲ್ಲಿ ರಾಹುವಿನ ಜೊತೆಗೆ ಸಂಚರಿಸುತ್ತಿದ್ದ. ರಾಹು ಹಾಗೂ ಮಂಗಳನ ಈ ಯೋಗದಿಂದ ಅಂಗಾರಕ ಯೋಗ ನಿರ್ಮಾಣಗೊಂಡಿತ್ತು.

2 /5

2. ಅಂಗಾರಕ ಯೋಗದ (Angaraka Yog) ಪ್ರಭಾವ ಏನು  - ಅಂಗಾರಕ ಯೋಗ ಪ್ರಭಾವ ರಾಸಾಯನಿಕ ತತ್ವಗಳ ಮೇಲೆ ಸಕ್ರೀಯತೆಯನ್ನು ತರುತ್ತದೆ. ಜೋತಿಷ್ಯ ಲೆಕ್ಕಾದಾರದ ಪ್ರಕಾರ, ಪ್ರಸ್ತುತ ಸಾಂಕ್ರಾಮಿಕ ರೋಗ ಹರಡುವಲ್ಲಿ ಈ ಯೋಗವೇ ಕಾರಣ ಎಂದು ಭಾವಿಸಲಾಗಿದೆ. ಹೀಗಿರುವಾಗ ಮಂಗಳನ ಮಿಥುನ ರಾಶಿ ಗೋಚರ ರಾಸಾಯನಿಕ ಚಟುವಟಿಕೆಗಳಲ್ಲಿನ ಸಕ್ರಿಯತೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

3 /5

3. ಮಂಗಳನ ಈ ರಾಶಿ ಪರಿವರ್ತನೆ ಬೇರೆ ರಾಶಿಗಳ ಮೇಲೆ ಪ್ರಭಾವವೇನು? - ಮಂಗಳ ದೇವನ Astrology Predictions - ಪ್ರಭಾವದಿಂದ ಮೇಷ, ಸಿಂಹ, ಕನ್ಯಾ, ತುಲಾ, ಮಕರ ಹಾಗೂ ಕುಂಭ ರಾಶಿಯ ಜಾತಕದವರಿಗೆ ಲಾಭ ತರಲಿದೆ. ಈ ಆರು ರಾಶಿಗಳನ್ನು ಹೊರತುಪಡಿಸಿ, ಅನ್ಯರಾಶಿಗಳಿಗೆ ಮಂಗಳನ ಸಾಧಾರಣ ಅಥವಾ ನಿಮ್ನ ಪ್ರಭಾವ ಪ್ರಾಪ್ತಿಯಾಗಲಿದೆ.  

4 /5

4. ಮಂಗಳ ಪ್ರವೇಶಿಸುವ ಮುಂದಿನ ರಾಶಿ ಯಾವುದು? - ಮಂಗಳದೇವ ಜೂನ್ 2, 2021 ರ ಬೆಳಗ್ಗೆ 6 ಗಂಟೆ 51 ನಿಮಿಷಕ್ಕೆ ಮಿಥುನ ರಾಶಿಯನ್ನು ತೊರೆದು ಕರ್ಕ ರಾಶಿಗೆ ಪ್ರವೆಶಿಸಲಿದ್ದಾನೆ. ಆದರೆ, ಇಲ್ಲಿ ವಿಶೇಷತೆ ಎಂದರೆ ಕರ್ಕ ರಾಶಿ ಮಂಗಳನ ಪಾಲಿಗೆ ನೀಚ ರಾಶಿಯಾಗಿದೆ. ಅರ್ಥಾತ್, ಮಂಗಳನಿಗೆ ಸಂಬಂಧಿಸಿದ ಭೂಮಿ, ಭವನ, ವಾಹನ ಹಾಗೂ ಅಸ್ತ್ರಗಳಿಗೆ ಸಂಬಂಧಿಸಿದ ಕೆಲಸಗಳನ್ನು ಜೂನ್ 2 ರೊಳಗೆ ಪೂರ್ಣಗೊಳಿಸುವುದು ಉತ್ತಮ.

5 /5

5. ಮಂಗಳನ ಪ್ರಭಾವ ಹೆಚ್ಚಿಸಲು ಏನು ಮಾಡಬೇಕು -ಮಂಗಳದೇವನ ಪ್ರಭಾವವನ್ನು ಹೆಚ್ಚಾಗಿಸಲು ದೇವಾಧಿದೇವ ಶಿವನ ಅಂಶ ಎಂದೇ ಹೇಳಲಾಗುವ ಪವನಸುತ ಆಂಜನೇಯನ ಆರಾಧನೆ ಮಾಡಲಾಗುತ್ತದೆ. ಮಂಗಳವಾರ ಹನುಮನಿಗೆ ವಸ್ತ್ರ ಅರ್ಪಿಸಿ, ಬೆಳೆ-ಬೆಲ್ಲದ ಪ್ರಸಾದ ನೈವೇದ್ಯ ತೋರಿಸಿ. ಹವಳದ ಮಾಲೆ ಧರಿಸಿ, ಕೆಂಪುವಸ್ತ್ರ ಹಾಗೂ ಕೆಂಪು ವಸ್ತುಗಳ ದಾನ ಮಾಡಿ, ಹನುಮಾನ ಚಾಲಿಸಾ, ಬಜರಂಗ ಬಾಣ ಹಾಗೂ ಸುಂದರಕಂಡ ಪಠಿಸಿ, ಮಂಗಳವಾರ ಹನುಮನಿಗೆ ಗೋದಿ ರೊಟ್ಟಿ ತಯಾರಿಸಿ ಅರ್ಪಿಸಿ.