ಜನ್ಮ ಕೊಟ್ಟ ತಂದೆಯನ್ನು "ನೀನು ಸತ್ತುಹೋಗು" ಎಂದ ಸ್ಟಾರ್‌ ನಟ..ನೋವು ತಾಳಲಾರದೇ ಪ್ರಾಣ ಬಿಟ್ಟ ತಂದೆ

Manoj Bajpayee: ತಂದೆ ಸಾಮಾನ್ಯವಾಗಿ ಬೆನ್ನೆಲುಬು ಇದ್ದಂತೆ. ಬೆನ್ನೆಲುಬು ಇಲ್ಲದೆ ನಾವು ನಿಲ್ಲಲು ಸಾಧ್ಯವಿಲ್ಲ. ತಂದೆಯ ಸ್ಥಾನವೂ ಅದೇ. ಅವನಿಲ್ಲದೆ ನಾವು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಅಪ್ಪನನ್ನು ಬದುಕಿರುವಾಗಲೇ ಸಾಯುವಂತೆ ಕೇಳಿದ ಸ್ಟಾರ್ ಹೀರೋ ಯಾರು ಎಂದು ನೀವೂ ಕೂಡ ತಿಳಿದುಕೊಳ್ಳಬೇಕಾ..?ಹಾಗಾದರೆ ಈ ಸ್ಟೋರಿ ಓದಿ...
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ತಂದೆ ಸಾಮಾನ್ಯವಾಗಿ ಬೆನ್ನೆಲುಬು ಇದ್ದಂತೆ. ಬೆನ್ನೆಲುಬು ಇಲ್ಲದೆ ನಾವು ನಿಲ್ಲಲು ಸಾಧ್ಯವಿಲ್ಲ. ತಂದೆಯ ಸ್ಥಾನವೂ ಅದೇ. ಅವನಿಲ್ಲದೆ ನಾವು ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಅಪ್ಪನನ್ನು ಬದುಕಿರುವಾಗಲೇ ಸಾಯುವಂತೆ ಕೇಳಿದ ಸ್ಟಾರ್ ಹೀರೋ ಯಾರು ಎಂದು ನೀವೂ ಕೂಡ ತಿಳಿದುಕೊಳ್ಳಬೇಕಾ..?ಹಾಗಾದರೆ ಈ ಸ್ಟೋರಿ ಓದಿ...

2 /6

ಮನೋಜ್ ಬಾಜಪೇಯಿ..ಈ ಹೆಸರಿಗೆ ಯಾವುದೇ ವಿಶೇಷ ಪರಿಚಯದ ಅಗತ್ಯವಿಲ್ಲ. ಭಾರತದ ಅತ್ಯಂತ ಪ್ರತಿಭಾವಂತ ನಟರ ಪಟ್ಟಿಯನ್ನು ಒಮ್ಮೆ ನೀವು ಕಣ್ಣಾಯಿಸಿದರೆ, ಈ ನಟನ ಹೆಸರು ಕೂಡ ಅದರಲ್ಲಿ ಖಂಡಿತವಾಗಿಯೂ ಪ್ರಮುಖ ಸ್ಥಾನ ಪಡೆದಿದೆ. ಮನೋಜ್ ಬಾಜಪೇಯಿ ಅಂತಹ ಶ್ರೇಷ್ಠ ನಟರಲ್ಲಿ ಒಬ್ಬರು.  

3 /6

ಹೆಸರಿಗೆ ಹಿಂದಿ ನಟನಾದರೂ ತೆಲುಗಿನಲ್ಲೂ ಫುಲ್ ಪಾಪ್ಯುಲಾರಿಟಿ ಹೊಂದಿದ್ದಾರೆ. ಹಿಂದಿಯಲ್ಲಿ ತಯಾರಾದ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯು ಈ ನಟನಿಗೆ ತಡೆಯಲಾಗದ ಕ್ರೇಜ್ ಅನ್ನು ತಂದು ಕೋಟ್ಟಿತು. ಈ ಒಂದೇ ಸರಣಿಯು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮನೋಜ್‌ಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಸದ್ಯ ಮನೋಜ್ ಒಂದು ಕಡೆ ಸಿನಿಮಾ, ಇನ್ನೊಂದು ಕಡೆ ವೆಬ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ.  

4 /6

ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ಈ ಹೀರೋ ತನ್ನ ತಂದೆ ಬದುಕಿರುವಾಗಲೇ ಸಾಯುವಂತೆ ಹೇಳಿದ್ದೆ ಎಂದು ಹೇಳಿಕೊಂಡು ತಮ್ಮ ದುಖಃ ಹೊರಹಾಕಿದ್ದಾರೆ. ಮನೋಜ್ ಅಭಿನಯದ 'ಕಿಲ್ಲರ್ ಸೂಪ್' ವೆಬ್ ಸೀರೀಸ್ ಚಿತ್ರೀಕರಣದ ವೇಳೆ ಮನೋಜ್ ಸಹೋದರಿ ತಂದೆಗೆ ಹುಷಾರಿಲ್ಲ ಎಂದು ನಟನಿಗೆ ಹೇಳಿದ್ದರಂತೆ.  

5 /6

ಡಾಕ್ಟರ್‌ ಅಪ್ಪ ಬದುಕುವುದು ಕಷ್ಟ, ಕೆಲವೇ ಸಮಯದ ಕಾಲ ನಿಮ್ಮ ತಂದೆ ಬದುಕಲು ಸಾಧ್ಯ ಆದರೆ ಬದುಕಿರುವಷ್ಟು ಕಾಲ ನೋವಿನಿಂದ ನರಳಬೇಕು ಎಂದಿದ್ದರಂತೆ. ಅದನ್ನು ಮನೋಜ್‌ಗೆ ಅವರ ಸಹದರಿ ದೂರವಾಣಿ ಮೂಲಕ ತಿಳಿಸಿದ್ದರಂತೆ.   

6 /6

ಆದ್ದರಿಂದ ಮನೋಜ್ ತಕ್ಷಣ ತನ್ನ ಕ್ಯಾರವಾನ್‌ಗೆ ಹೋಗಿ ಅವರ ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದರು. ನೋವು ಸಾಕು ಅಪ್ಪಾ, ಎಲ್ಲರನ್ನು ಬಿಟ್ಟು ಹೋಗುವ ಸಮಯ ಬಂದಿದೆ. ದಯವಿಟ್ಟು ಇಹಲೋಕ ತ್ಯಜಿಸಿ ಎಂದು ಹೇಳಿ ಫೋನ್ ಕಟ್ ಮಾಡಿ ಮನಬಿಚ್ಚಿ ಅಳತೊಡಗಿದರಂತೆ. ಮರುದಿನ ತಂದೆ ಇಹಲೋಕ ತ್ಯಜಿಸಿದ್ದು, ಅವರ ಸಾವು ಬದುಕಿನ ಅತ್ಯಂತ ದುಃಖಕರ ಘಟನೆ ಎಂದು ಮನೋಜ್ ವಾಜಪೇಯಿ ಭಾವುಕರಾಗಿದ್ದಾರೆ.