Mangal Gochar 2023: ಮಿಥುನ ರಾಶಿಯಲ್ಲಿ ಪವರ್ಫುಲ್ 'ರಾಜಭಂಗ ಯೋಗ' ನಿರ್ಮಾಣ, ಧನಕುಬೇರ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ!

Rajbhang Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಮಿಥುನ ರಾಶಿಯಲ್ಲಿ ರಾಜಭಂಗ ರಾಜಯೋಗ ರಚನೆಯಾಗುತ್ತಿದೆ. ಇದು ಕೆಲ ರಾಶಿಗಳ ಜನರ ಮೇಲೆ ಭಾರಿ ಸಕಾರಾತ್ಮಕ ಪ್ರಭಾ ಬೀರಲಿದ್ದು, ಬಿಸ್ನೆಸ್ ನೌಕರಿಯಲ್ಲಿ ಅಪಾರ ಯಶಸ್ಸಿನ ಜೊತೆಗೆ ಭಾರಿ ಧನಲಾಭ ಯೋಗವನ್ನು ರೂಪಿಸುತ್ತಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಮಂಗಳ ಧನು ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇನ್ನೊಂದೆಡೆ ಶನಿ ಕೂಡ ತನ್ನ ದೃಷ್ಟಿಯನ್ನು ಮಂಗಳನ ಮೇಲಿಂದ ಸರೆದಿದೆ ಮತ್ತು ಪ್ರತಿಯೊಂದು ರಾಶಿಯಲ್ಲಿ ಆತ ಶುಭ ಫಲಗಳನ್ನು ನೀಡುತಿದ್ದಾನೆ. ಮಿಥುನ ಏಳನೇ ಭಾವದಲ್ಲಿ ಮಂಗಳ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಶನಿ ಹಾಗೂ ರಾಹು ಎರಡು ಗ್ರಹಗಳ ನವಮ ದೃಷ್ಟಿ ಮಂಗಳನ ಮೇಲೆ ಬೀಳುತ್ತಿದೆ. ಇದರಿಂದ ರಾಜಭಂಗ ಹೆಸರಿನ ರಾಜಯೋಗ ರಚನೆಯಾಗುತ್ತಿದ್ದು. ಇದು ಕೆಲ ರಾಶಿಗಳ ಜನರಿಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ. (Spiritual News In Kannada)

 

ಇದನ್ನೂ ಓದಿ-Sun-Saturn Naksthra Gochar 2024: ಶತಮಾನದ ಬಳಿಕ ಸೂರ್ಯ-ಶನಿಯಿಂದ ನಕ್ಷತ್ರ ಪರಿವರ್ತನೆ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ರಾಜಭಂಗ ರಾಜಯೋಗ ಮಂಗಳನ ರಾಶಿ ಪರಿವರ್ತನೆಯ ಜೊತೆಗೆ ಅಂತ್ಯವಾಗಲಿದೆ, ಮಂಗಳ ಫೆಬ್ರುವರಿ 5, 2024 ರಂದು ಮಕರ ರಾಶಿಗೆ ಪರಿವೇಶಿಸಲಿದ್ದಾನೆ. ಅರ್ಥಾತ್ ಈ ಯೋಗ ಕೂಡ ಫೆಬ್ರುವರಿ 5ರವರೆಗೆ ಇರಲಿದೆ.   

2 /5

ಮಿಥುನ ರಾಶಿ: ನಿಮ್ಮ ಜಾತಕದ ಏಳನೇ ಬಾವದಲ್ಲಿ ಮಂಗಳ ವಿರಾಜಮಾನನಾಗಿದ್ದಾನೆ. ಮಂಗಳ ಗುರುವಿನ ರಾಶಿಗೆ ಪ್ರವೇಶಿಸಿರುವ ಕಾರಣ ನಿಮಗೆ ಮಂಗಳನ ಜೊತೆಗೆ ಗುರುವಿನ ಅಪಾರ ಕೃಪೆ ಕೂಡ ಪ್ರಾಪ್ತಿಯಾಗಲಿದೆ. ಇದರಿಂದ ನಿಮಗೆ ಸಾಲ ಬಾಧೆಯಿಂದ ಮುಕ್ತಿ ಸಿಗಲಿದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಡೆದುಕೊಂಡು ಬಂದ ಅಡೆತಡೆಗಳು ನಿವಾರಣೆಯಾಗಲಿವೆ. ಸಾಹಸ ಪರಾಕ್ರಮ ಹಾಗೂ ಉತ್ಸಾಹ ಹೆಚ್ಚಾಗಲಿದೆ. ಇದರಿಂದ ನೌಕರ ವರ್ಗದ ಜನರಿಗೆ ಭಾರಿ ಲಾಭ ಸಿಗಲಿದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ.   

3 /5

ಸಿಂಹ ರಾಶಿ: ಮಂಗಳನ ಈ ಗೋಚರದಿಂದ ಮಿಮ್ಮ ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪುನಃ ಆರಂಭಗೊಳ್ಳಲಿವೆ. ಬಿಸ್ನೆಸ್ ನಲ್ಲಿ ಉಂಟಾಗುತ್ತಿರುವ ಸತತ ಹಾನಿಗೆ ಬ್ರೇಕ್ ಬೀಳಲಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಲಾಭ ಸಿಗಲಿದೆ. ಮಕ್ಕಳ ಕಡೆಯಿಂದ ಸಂತಸದ ಸುದ್ದಿ ಸಿಗಲಿದೆ. ಉನ್ನತ ಅಧಿಕಾರಿಗಳ ಜೊತೆ ಸಂಬಂಧ ಸುಧಾರಣೆಯಾಗುವ ಕಾರಣ ವೃತ್ತಿ ಜೀವನದಲ್ಲಿ ಕೂಡ ಅದರ ಲಾಭ ನಿಮ್ಮದಾಗಲಿದೆ. ಗುರುವಿನ ದೃಷ್ಟಿ ನಿಮ್ಮ ಲಗ್ನ ಭಾವದ ಮೇಲೆ ಬೀಳುತ್ತಿರುವ ಕಾರಣ, ಅರಿಯದ ಆತಂಕ, ಭಯದಿಂದ ಮುಕ್ತಿ ಸಿಗಲಿದೆ.   

4 /5

ಕರ್ಕ ರಾಶಿ: ನಿಮ್ಮ ಜೀವನದ ಮೇಲೆ ಮಂಗಳನ ಈ ರಾಜಯೋಗದ ಸಕಾರಾತ್ಮಕ ಪ್ರಭಾವ ಬೀಳಲಿದೆ. ದೀರ್ಘಾವಧಿಯಿಂದ ನಿಂತು ಹೋದ ಕೆಲಸಗಳು ಪೂರ್ಣಗೊಲ್ಲಳಿವೆ, ಸ್ಪಾರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಜನರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಮಂಗಳ ನಿಮ್ಮಲ್ಲಿ ಸಾಹಸ-ಪರಾಕ್ರಮ ಮತ್ತು ಉತ್ಸಾಹವನ್ನು ಹೆಚ್ಚಿಸಲಿದ್ದಾನೆ. ಭಾಗ್ಯದ ಸಂಪೂರ್ಣ ಬೆಂಬಲ ಇರುವ ಕಾರಣ ಹೊಸ ವ್ಯಾಪಾರ, ಹೊಸ ನೌಕರಿಯನ್ನು ನೀವು ಆರಂಭಿಸಬಹುದು. ಮಂಗಳನ ದೃಷ್ಟಿ ನಿಮ್ಮ ಜಾತಕದ ದ್ವಾದಶ ಭಾವದ ಮೇಲೆ ನೆಟ್ಟಿರುವ ಕಾರಣ ವಿದೇಶ ವ್ಯಾಪಾರದಿಂದ ನಿಮಗೆ ಭಾರಿ ಲಾಭ ಮತ್ತು ಧನ ಪ್ರಾಪ್ತಿಯಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)