ಬೆಳ್ಳಿ ತೆರೆಯಲ್ಲಿ ಹೆಸರು ಗಳಿಸಿದ ಮಲಯಾಳಂ ನಟಿಯರಿವರು..ಪೋಟೋಸ್‌ ನೋಡಿ

Sandalwood Actreses : ಪ್ರತಿ ವರ್ಷ ಒಂದಲ್ಲಾ ಒಂದು ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಲೇ ಇರುತ್ತಾರೆ. ಅದರಲ್ಲಿಯೂ ನಟಿಯರೇ ಹೆಚ್ಚು. ಬೆಳ್ಳಿತೆರೆಯಲ್ಲಿ ಹಿಂದಿ, ತಮಿಳು, ತೆಲಗು, ಮಲಯಾಳಂ ಮುಂತಾದ ಭಾಷೆಗಳಿಂದ ಬಂದು ಗುರುತಿಸಿಕೊಂಡ ಸಾಕಷ್ಟು ನಟಿಯರಿದ್ದಾರೆ. ಅವರೆಲ್ಲರ ಬಗೆಗಿನ ಸಣ್ಣ ಮಾಹಿತಿ ಇಲ್ಲಿದೆ ನೋಡಿ..
 

1 /6

ಭಾವನಾ ಮೆನನ್‌ : ಜಾಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಭಾವನಾ ಮೆನನ್‌ ಯಾರೇ ಕೂಗಾಡಲಿ, ರೋಡ್ ರೋಮಿಯೋ, ಬಚ್ಚನ್ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದರು.  

2 /6

ಭಾಮ : ಮೊದಲಾ ಸಲ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ನಂತರ ಶೈಲೂ, ಅಟೋ ರಾಜಾ, ಬರ್ಫಿ ಮುಂತಾದ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.  

3 /6

ಪಾರ್ವತಿ ಮೆನನ್ : ಮಿಲನ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದರು. ನಂತರ ಮಳೆ ಬರಲಿ ಮಂಜು ಇರಲಿ, ಪೃಥ್ವಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  

4 /6

ಮೀರಾ ಜಾಸ್ಮಿನ್ : ಮೀರಾ ಜಾಸ್ಮಿನ್ 2004 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ ಮೌರ್ಯ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ನಂತರ ಅರಸು, ದೇವರು ಕೊಟ್ಟ ತಂಗಿ ಮುಂತಾದ ಚಿತ್ರಗಳಲ್ಲಿ ಅಭಿನಹಿಸಿದ್ದಾರೆ.  

5 /6

ನವ್ಯ ನಾಯರ್ : ದರ್ಶನ್ ಅಭಿನಯದ ಗಜ ಚಿತ್ರದ ಮೂಲಕ ನವ್ಯಾ ನಾಯರ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ವಿಷ್ಣುವರ್ಧನ್ ರ ವರ ನಮ್ಮೆಜಮಾನ್ರು, ಶಿವಣ್ಣ ನವರ ಭಾಗ್ಯದ ಬಳೆಗಾರ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  

6 /6

ನಯನತಾರ : ಕೇರಳದ ಮೂಲದ ಕುಟುಂಬದಲ್ಲಿ ಜನಿಸಿದ ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಯನತಾರಾ ಕನ್ನಡದಲ್ಲಿ `ಸೂಪರ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.