Bollywood Actress Malaika Arora: ಬಾಲಿವುಡ್ ಫಿಟ್ನೆಸ್ ಬೆಡಗಿ ಮಲೈಕಾ ಅರೋರಾ, ವಯಸ್ಸು 50 ದಾಟಿದರೂ, ಇಪ್ಪತ್ತರ ಯುವತಿಯರು ನಾಚುವಂತೆ ಕಾಣುತ್ತಾರೆ. ಈ ನಟಿ ಜಿಮ್ನಲ್ಲಿ ದೇಹವನ್ನು ದಂಡಿಸಿ, ಆಹಾರದಲ್ಲಿ ಕಟ್ಟು ನಿಟ್ಟು ಅನುಸರಿಸುವ ಇವರ ಫಿಟ್ ಬಾಡಿ ನೋಡಿ ಕೋಟ್ಯಾಂತರ ಮಂದಿ ಫಿದಾ ಆಗಿದ್ದಾರೆ. ಸದ್ಯ ಈ ಸುಂದರಿ ತಮ್ಮ ಫಿಟ್ನೆಸ್ ಹಾಗೂ ಡಯೆಟ್ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಬಾಲಿವುಡ್ ತಾರೆ ಮಲೈಕಾ ಅರೋರ ತಮ್ಮ ಫಿಟ್ನೆಸ್ಗಾಗಿ ಸಕತ್ ಪಾಪ್ಯೂಲರ್ ಆಗಿದ್ದು, ದಶಕಗಳಿಂದ ಒಂದು ದಿನವೂ ಜಿಮ್ನ ಮಿಸ್ ಮಾಡದ ಬಾಲಿವುಡ್ನ ಸೆಲಬ್ರಿಟಿಗಳಲ್ಲಿ ಮಲೈಕಾ ಕೂಡ ಒಬ್ಬರು.
ನಟಿ ಮಲೈಕಾ ಅರೋರ ತಮ್ಮ ಫ್ಯಾನ್ಸ್ಗೂ ಆಗಾಗ್ಗೆ ಫಿಟ್ನೆಟ್ ಮತ್ತು ಡಯಟ್ ಟಿಪ್ಸ್ ನೀಡುತ್ತಾರೆ.
ಮಲೈಕಾ ಅರೋರ ಮುಖ್ಯವಾಗಿ ಕಾರ್ಡಿಯೋ, ತೂಕ , ಯೋಗ ಮತ್ತು ಪೈಲೇಟ್ಸ್ ಸೇರಿದಂತೆ ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ. ಕೆಲವು ದಿನಗಳಲ್ಲಿ HIIT (High-intensity interval training) ಕೂಡ ಮಾಡುತ್ತಾರೆ.
ಮಲೈಕಾ ತಮ್ಮ ದಿನವನ್ನು ಕಾರ್ಡಿಯೊದಿಂದ ಪ್ರಾರಂಭಿಸಿ, ಪ್ರತಿದಿನ ಯೋಗ ಮಾಡುತ್ತಾರೆ. ಯೋಗ ಎಲ್ಲಾ ವಯಸ್ಸಿನ ಜನರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎನ್ನುತ್ತಾರೆ
ಮಲೈಕಾ ಅರೋರ ಸಸ್ಯಾಹಾರಿಯಾಗಿ, ಎಲ್ಲಾ ಬಗೆಯ ಆಹಾರವನ್ನು ತಿನ್ನುವ ಆಕೆ ಜಂಕ್ ಫುಡ್ ತಿನ್ನುವುದನ್ನು ಬಿಟ್ಟಿದ್ದಾರೆ. ನಿಗದಿತ ಸಮಯದಲ್ಲಿ ಊಟ ಮಾಡಿ, ಅವರ ದಿನದ ಕೊನೆಯ ಊಟ ಅಂದರೆ ಡಿನ್ನರ್ ಸಂಜೆ 6:30 ಕ್ಕೆ ಮುಗಿಯುತ್ತದೆ.
ಮಲೈಕಾ ಬೆಳಗ್ಗೆ ತೆಂಗಿನ ಎಣ್ಣೆ, ಸ್ವಲ್ಪ ತುಪ್ಪ, ಜೀರಿಗೆ ನೀರು ಮತ್ತು ಒಂದು ಲೋಟ ನಿಂಬೆ ರಸವನ್ನು ಕುಡಿಯುತ್ತಾರೆ. ಬೆಳಗಿನ ಉಪಹಾರಕ್ಕೆ ಡ್ರೈ ಸೀಡ್ಸ್ , ಡ್ರೈ ನಟ್ಸ್ ಬಳಸುತ್ತಾರೆ. ಇದು ಆಕೆಯ ದಿನವನ್ನು ಕಿಕ್ಸ್ಟಾರ್ಟ್ ಮಾಡಲು ಹೆಚ್ಚಿನ ಶಕ್ತಿ ನೀಡುತ್ತದೆ. ದಿನವಿಡೀ, ದೇಹಕ್ಕೆ ಬೇಕಾಗುವಷ್ಟು ನೀರು ಇದೆಯೇ ಎಂದು ಪದೇ ಪದೇ ನೀಎಉ ಕುಡಿಯುತ್ತಾರೆ. ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ಕೂಡ ಆರೋಗ್ಯಕರ ಕ್ರಮ
ಬಾಲಿವುಡ್ ಫಿಟ್ನೆಸ್ ಬೆಡಗಿ ಮಧ್ಯಾಹ್ನದ ಊಟಕ್ಕೆ, ಕಾರ್ಬೋಹೈಡ್ರೇಟ್ಗಳು, ಗುಡ್ ಫ್ಯಾಟ್ ಮತ್ತು ಪ್ರೋಟೀನ್ಗಳ ಬ್ಯಾಲೆನ್ಸ್ ಇರುವ ಆಹಾರ ತೆಗೆದುಕೊಳ್ಳುತ್ತಾರೆ. ಅನ್ನ, ಕೆಲವು ತರಕಾರಿಗಳು ಅಥವಾ ಧಾನ್ಯಗಳಿಂದ ಮಾಡಿ ಅಡುಗೆಯನ್ನು ಇಷ್ಟಪಡಿತ್ತಾರೆ.
ನಟಿ ಮಲೈಕಾ ಸಂಜೆ ಸ್ನ್ಯಾಕ್ಸ್ಗೆ ತುಂಬಾ ಆರೋಗ್ಯಕರ ತಿಂಡಿಯನ್ನು ತಿನ್ನುತ್ತಾರೆ. ತಮ್ಮ ದಿನದ ಕೊನೆಯ ಮೀಲ್ ಅಂದರೆ ಡಿನ್ನರ್ಗೆ ಮಲೈಕಾ ಅರೋರಾ ತರಕಾರಿಗಳು, ಸಲಾಡ್ ತಿನ್ನುತ್ತಾರೆ. ಮಾಂಸಾಹಾರಿಯಾಗಿರುವ ವ್ಯಕ್ತಿ ಮಾಂಸ, ಮೊಟ್ಟೆ, ಅಥವಾ ಸ್ವಲ್ಪ ದ್ವಿದಳ ಧಾನ್ಯಗಳನ್ನು ತಿನ್ನಬಹುದು. ರಾತ್ರಿಯ ಆರೋಗ್ಯಕರ ಊಟ ಮಾಡಲು ಪ್ರಯತ್ನಿಸಿ ಜೊತೆಗೆ ಸಂಜೆ 7 ರ ನಂತರ ಏನನ್ನೂ ತಿನ್ನಬೇಡಿ ಎನ್ನುತ್ತಾರೆ.