ಮನೆಯಲ್ಲಿ ಮಾಡುವ ಈ ಐದು ಸಣ್ಣ ಬದಲಾವಣೆಯಿಂದ ಯಶಸ್ಸು ದುಪ್ಪಟ್ಟಾಗುವುದು

ಮನಸ್ಸಿನ ಶಾಂತಿ, ಸಕಾರಾತ್ಮಕತೆ ಮತ್ತು ಪ್ರಗತಿಗಾಗಿ,  ದೇವರ  ಕೋಣೆ ಯಾವಾಗಲೂ ಮನೆಯ ಈಶಾನ್ಯ ದಿಕ್ಕಿನಲ್ಲಿರಬೇಕು. ಏಕೆಂದರೆ ಅದು ದೇವತೆಗಳ ಸ್ಥಳ.

ಬೆಂಗಳೂರು : ವಾಸ್ತು ಶಾಸ್ತ್ರದ ಕೆಲವು ನಿಯಮಗಳು ಸಂತೋಷ ಮತ್ತು ಸಮೃದ್ಧ ಜೀವನವನ್ನು ಪಡೆಯುವಲ್ಲಿ ಬಹಳ ಪರಿಣಾಮಕಾರಿ ಕೆಲಸ ಮಾಡುತ್ತದೆ. ಮನೆಯಲ್ಲಿ ವಾಸ್ತುವಿನ ಕೆಲವು ಮೂಲ ನಿಯಮಗಳನ್ನು ಪಾಲಿಸಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಮನೆಯಲ್ಲಿ ಧನಾತ್ಮಕ ಶಕ್ತಿ, ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಂತಹ ಕೆಲವು ಸರಳ ನಿಯಮಗಳ ಬಗ್ಗೆ ತಿಳಿಯೋಣ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ದೇವರ ಮನೆ :  ಮನಸ್ಸಿನ ಶಾಂತಿ, ಸಕಾರಾತ್ಮಕತೆ ಮತ್ತು ಪ್ರಗತಿಗಾಗಿ,  ದೇವರ  ಕೋಣೆ ಯಾವಾಗಲೂ ಮನೆಯ ಈಶಾನ್ಯ ದಿಕ್ಕಿನಲ್ಲಿರಬೇಕು. ಏಕೆಂದರೆ ಅದು ದೇವತೆಗಳ ಸ್ಥಳ. ಅಲ್ಲದೆ, ಪೂಜೆಯ ಮನೆಯ ಮೇಲೆ ಮತ್ತು ಕೆಳಗೆ ಏಣಿ, ಶೌಚಾಲಯ ಅಥವಾ ಅಡುಗೆಮನೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. 

2 /5

ಶುಚಿತ್ವ: ಮನೆಯಲ್ಲಿ ಯಾವಾಗಲೂ ಶುಚಿತ್ವವನ್ನು ಕಾಪಾಡಿಕೊಳ್ಳಿ. ಜೇಡರ ಬಲೆಗಳು, ಮನೆಯಲ್ಲಿನ ಧೂಳು ಮತ್ತು ಕೊಳಕು ಅನೇಕ ವಾಸ್ತು ದೋಷಗಳನ್ನು ಉಂಟುಮಾಡುತ್ತದೆ. ಮನೆಯ ಸ್ನಾನಗೃಹವನ್ನು ಯಾವಾಗಲೂ ಸ್ವಚ್ಛವಾಗಿಡಿ.   

3 /5

ಮನೆಯ ಮುಖ್ಯ ಬಾಗಿಲು: ಮನೆಯ ಮುಖ್ಯ ಬಾಗಿಲು ಯಾವಾಗಲೂ ಸ್ವಚ್ಛವಾಗಿರಬೇಕು, ಹಾಗೆಯೇ ಬಾಗಿಲುಗಳು ಸುಸ್ಥಿತಿಯಲ್ಲಿರಬೇಕು. ಅವುಗಳನ್ನು ತೆರೆಯುವಾಗ ಅಥವಾ ಮುಚ್ಚುವಾಗ ಯಾವುದೇ ಶಬ್ದ ಬರಬಾರದು. ಮುಖ್ಯ ದ್ವಾರದ ಬಣ್ಣ ಕೂಡಾ ಮಾಸಿರಬಾರದು.  

4 /5

ಕರ್ಪೂರ : ಬೆಳಿಗ್ಗೆ ಮತ್ತು ಸಂಜೆ ಕರ್ಪೂರವನ್ನು ಸುಡುವುದು: ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಕರ್ಪೂರವನ್ನು ಸುಡುವುದರಿಂದ ಅನೇಕ ವಾಸ್ತು ದೋಷಗಳು ನಾಶವಾಗುತ್ತವೆ. ಆದ್ದರಿಂದ ಪ್ರತಿದಿನ ಈ ಪರಿಹಾರವನ್ನು ಮಾಡಿ. ಇದು ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.   

5 /5

ಮಲಗುವ ದಿಕ್ಕು: ನಿಮ್ಮ ಪಾದಗಳನ್ನು ದಕ್ಷಿಣಕ್ಕೆ ಮುಖ ಮಾಡಿ ಮಲಗಬೇಡಿ. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದಕ್ಷಿಣ ದಿಕ್ಕಿಗೆ ತಲೆ ಇಡುವುದು ಒಳ್ಳೆಯದು.  (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)