2024ರ ಆರಂಭವಾಗುತ್ತಿದ್ದಂತೆಯೇ ಈ ರಾಶಿಯವರಿಗೆ ಗುರು ದೆಸೆ ! ಸಂಪತ್ತಿಗೆ ಇರುವುದಿಲ್ಲ ಕೊರತೆ ! ಕೈ ಹಿಡಿದು ನಡೆಸುವಳು ಮಹಾಲಕ್ಷ್ಮೀ

ವೈದಿಕ ಗ್ರಂಥಗಳ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ  ರಾಶಿಯನ್ನು ಬದಲಾಯಿಸುತ್ತದೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. 

ಬೆಂಗಳೂರು : ಐಶ್ವರ್ಯ, ಹೆಮ್ಮೆ, ಸಮೃದ್ಧಿ, ಲೌಕಿಕ ಭೋಗ ಇತ್ಯಾದಿ ಅಂಶಗಳಿಗೆ ಕಾರಣನಾದ ಗುರು ತನ್ನ ವಕ್ರ ನಡೆಯನ್ನು ಕೊನೆಗೊಳಿಸಲಿದ್ದಾನೆ.   ರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 31 ರಂದು ವಕ್ರನಡೆಯಿಂದ ನೇರ ನಡೆಗೆ ಮರಳಲಿದ್ದಾನೆ.  ಗುರುವಿನ ನಡೆಯಲ್ಲಿನ ಈ ಬದಲಾವಣೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮೂರು ರಾಶಿಯವರಿಗೆ ಇದು ಹೆಚ್ಚು ಲಾಭದಾಯಕವಾಗಿರುತ್ತದೆ. ಈ ಮೂರು ರಾಶಿಚಕ್ರದವರು ಹೊಸ ವರ್ಷದ ಆರಂಭದಿಂದಲೇ ಗುರುವಿನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಗುರು  ಗ್ರಹ ಎಂದರೆ ಸಂತೋಷ, ಸಂಪತ್ತು, ಹೆಮ್ಮೆ ಮತ್ತು ಸಮೃದ್ಧಿಯ ಪ್ರತೀಕ. ಯಾರ ಮೇಲೆ ಗುರು ಗ್ರಹದ ಅನುಗ್ರಹವಿರುವುದೋ ಅವರು ಜೀವನದಲ್ಲಿ ಬಹಳ ಎತ್ತರಕ್ಕೆ ಏರುವುದು ಸಾಧ್ಯವಾಗುತ್ತದೆ. 

2 /6

ರಾಶಿಯವರ ಮೇಲೆ ಪರಿಣಾಮ : ಗುರು ಹಿಮ್ಮುಖ ನಡೆಯನ್ನು ಕೊನೆಗೊಳಿಸುತ್ತಿರುವುದು ಎಲ್ಲಾ ರಾಶಿಯವರ ಮೇಲೇ ಪರಿಣಾಮ ಬೀರುತ್ತದೆ.  ಆದರೆ ಕೆಲವು ರಾಶಿಯವರು ಅದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯುತ್ತಾರೆ.   

3 /6

ಮೇಷ ರಾಶಿ :  ಹೊಸ ವರ್ಷ ಅಂದರೆ 2024 ಆರಂಭವಾಗುತ್ತಿದ್ದಂತೆಯೇ ಮೇಷ ರಾಶಿಯವರ ಬಾಳಲ್ಲಿ ಎಲ್ಲವೂ ಶುಭಾವಾಗಿರಲಿದೆ. ಮೇಷ ರಾಶಿಯವರ ಮೇಲೆ ಗುರು ಗ್ರಹದ ವಿಶೇಷ ಅನುಗ್ರಹವಿರುತ್ತದೆ.  ಅವರ ಗೌರವ, ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಗುರು ಲಗ್ನದ ಮನೆಗೆ ಪ್ರವೇಶಿಸುವುದರಿಂದ ಅವಿವಾಹಿತರಿಗೆ ವೈವಾಹಿಕ ಯೋಗ ಕೂಡಿ ಬರುತ್ತದೆ. ಅನಿರೀಕ್ಷಿತ ಹಣ ಹರಿದು ಬರುವುದು.

4 /6

ಸಿಂಹ ರಾಶಿ : 2024 ರಲ್ಲಿ, ಸಿಂಹ ರಾಶಿಯವರು ವೃತ್ತಿ ಮತ್ತು ವ್ಯಾಪಾರ ಎರಡರಲ್ಲೂ ಯಶಸ್ವಿ ಕಾಣುತ್ತಾರೆ. ಗುರು ಗ್ರಹದ ಅನುಗ್ರಹದಿಂದ ಸಿಂಹ ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಇವರದ್ದೇ ಮೇಲು ಗೈ. ಕೈ ಹಾಕಿದ ಪ್ರತಿ ಕೆಲಸವೂ ಕೈ ಗೂಡುವುದು. 

5 /6

ಧನು ರಾಶಿ : 2024 ರಲ್ಲಿ, ಧನು ರಾಶಿಯ ಮಕ್ಕಳಿಗೆ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಪ್ರೀತಿ ಪ್ರೇಮದಲ್ಲಿದ್ದವರಿಗೆ ವಿವಾಹವಾಗುವ ಸಾಧ್ಯತೆ ಇದೆ. ಈ ರಾಶಿಯವರು 2024ರಲ್ಲಿ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಅವರಿಗೆ ಸಕಲ ಸೌಕರ್ಯಗಳೂ ಸಿಗುತ್ತವೆ. ಧನು ರಾಶಿಯವರು ಕೆಲವು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು.

6 /6

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.