Lucky Zodiac Sign In 2024: ಮುಂದಿನ ವರ್ಷ ಲಕ್ಷ್ಮಿ ದಯೆಯಿಂದ ಈ ರಾಶಿಯವರಿಗೆ ಧನ-ಸಂಪತ್ತು, ಕೀರ್ತಿ, ಪ್ರಗತಿ

Lucky Signs Of 2024: 2024 ರಲ್ಲಿ ಲಕ್ಷ್ಮಿ ದೇವಿಯು ಈ  ನಾಲ್ಕು ರಾಶಿಯ ಜನರ ಜೀವನವನ್ನು ಪ್ರತಿ ಹಂತದಲ್ಲೂ ಬೆಳಗಿಸಲಿದ್ದಾಳೆ. ಲಕ್ಷ್ಮಿ ಕೃಪೆಯಿಂದಾಗಿ ಈ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗಲಿದ್ದಾರೆ. ಜೊತೆಗೆ ಸಾಕಷ್ಟು ಖ್ಯಾತಿಯನ್ನೂ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /9

2023ರ ವರ್ಷ ಕೊನೆಗೊಳ್ಳಲು ಇನ್ನೂ ಮೂರು ತಿಂಗಳಷ್ಟೇ ಬಾಕಿ ಉಳಿದಿದೆ. ಹೊಸ ವರ್ಷವು ಪ್ರತಿಯೊಬ್ಬರ ಜೀವನದಲ್ಲಿಯೂ ಹೊಸ ಹುರುಪು, ಉಲ್ಲಾಸವನ್ನು ತರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ, ಹೊಸ ವರ್ಷದಲ್ಲಿ ಎಂದರೆ ನೂತನ ವರ್ಷದಲ್ಲಿ ಗ್ರಹಗಳ ಸ್ಥಾನದಲ್ಲಿನ ಬದಲಾವಣೆ, ಪ್ರಪಂಚದ ಜೀವ ರಾಶಿಗಳ ಮೇಲೆ ಅವುಗಳ ಶುಭ-ಅಶುಭ ಪರಿಣಾಮಗಳ ಬಗ್ಗೆ ಉಲ್ಲೇಖಿಸಲಾಗುತ್ತದೆ. 

2 /9

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಬರು ವರ್ಷವು ಕೆಲವು ರಾಶಿಚಕ್ರ ಚಿಹ್ನೆಯ ಜನರಿಗೆ ತುಂಬಾ ವಿಶೇಷ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2024ರಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಬಣ್ಣಿಸಲಾಗುತ್ತಿದೆ. 

3 /9

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಸಂಪತ್ತಿನ ದೇವತೆ ಮಾತೆ ಲಕ್ಷ್ಮಿಯು ಕೆಲವು ರಾಶಿಯವರ ಮೇಲೆ ದಯೆ ತೋರಲಿದ್ದಾಳೆ. ಇದರ ಪರಿಣಾಮವಾಗಿ, ಹೊಸ ವರ್ಷದಲ್ಲಿ ಎಂದರೆ 2024ರಲ್ಲಿ ಆ ರಾಶಿಯವರ ಜೀವನದಲ್ಲಿ ಅದೃಷ್ಟವೇ ಬದಲಾಗಿದ್ದು ಅವರು ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲ, ವೃತ್ತಿ-ವ್ಯವಹಾರದಲ್ಲಿಯೂ ಭಾರೀ ಪ್ರಗತಿಯನ್ನು ಕಾಣಲಿದ್ದಾರೆ ಎಂದು ಹೇಳಲಾಗುತ್ತಿದೆ. 

4 /9

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024 ರಲ್ಲಿ, ದ್ವಾದಶ ರಾಶಿಗಳಲ್ಲಿ  ನಾಲ್ಕು ರಾಶಿಯವರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಪಡೆಯಲಿದ್ದಾರೆ. 2024ರಲ್ಲಿ ಈ  ನಾಲ್ಕು ರಾಶಿಯವರಿಗೆ ಪ್ರತಿ ಹೆಜ್ಜೆಯಲ್ಲೂ ಲಕ್ಷ್ಮಿ ಕೈ ಹಿಡಿಯಲಿದ್ದಾಳೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ. 

5 /9

2024 ರಲ್ಲಿ, ಮೇಷ ರಾಶಿಯವರ ಮೇಲೆ ತಾಯಿ ಲಕ್ಷ್ಮಿ ವಿಶೇಷ ಆಶೀರ್ವಾದವನ್ನು ಕರುಣಿಸಲಿದ್ದಾಳೆ. ಇದರ ಪರಿಣಾಮವಾಗಿ ವೃತ್ತಿ-ವ್ಯವಹಾರದಲ್ಲಿ ಉತ್ತಮ ಲಾಭವಾಗಲಿದೆ. ಬಹಳ ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಉದ್ಯೋಗ ರಂಗದಲ್ಲಿ ಯಶಸ್ಸಿನ ಉತ್ತುಂಗವನ್ನು ಏರುವಿರಿ. ಒಟ್ಟಾರೆಯಾಗಿ ಹೊಸ ವರ್ಷದಲ್ಲಿ ನೀವು ಮನೆಯಲ್ಲಿ ಸುಖ-ಶಾಂತಿಯನ್ನು ಅನುಭವಿಸುವಿರಿ. 

6 /9

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷದಲ್ಲಿ ಕನ್ಯಾ ರಾಶಿಯವರ ಅದೃಷ್ಟ ಹೊಳೆಯಲಿದೆ. ಈ ವರ್ಷ ನಿಮ್ಮ ಗುರಿಗಳನ್ನು ಸಾಧಿಸಲು ನೀವು ಶ್ರಮಿಸುತ್ತೀರಿ. ಆದರೂ, ನಿಮ್ಮ ಕಷ್ಟಗಳಿಗೆ ತಕ್ಕ ಫಲ ದೊರೆಯುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದ್ದರೆ, ಸ್ವಂತ ಕೆಲಸವನ್ನು ಆರಂಭಿಸಲು ಯೋಚಿಸುತ್ತಿರುವವರಿಗೂ ಇದು ಮಂಗಳಕರ ಸಮಯ ಎಂದು ಸಾಬೀತುಪಡಿಸಲಿದೆ.  ಆರ್ಥಿಕ ಸ್ಥಿತಿಯು ತುಂಬಾ ಚೆನ್ನಾಗಿರಲಿದೆ.

7 /9

ಜ್ಯೋತಿಷ್ಯದ ದೃಷ್ಟಿಯಿಂದ 2024ರ ವರ್ಷವು ತುಲಾ ರಾಶಿಯವರಿಗೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ಉನ್ನತ ವಿದ್ಯಾಭ್ಯಾಸ, ಇಲ್ಲವೇ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ವರ್ಷ ಅದೃಷ್ಟ ಕೈ ಹಿಡಿಯಲಿದೆ. ಮುಂಬರುವ ವರ್ಷವು ನಿಮಗೆ ಬಹಳ ಫಲಪ್ರದವಾಗಿದ್ದು ಹೊಸ ಕಾರು ಅಥವಾ ಆಸ್ತಿಯನ್ನು ಸಹ ಖರೀದಿಸಬಹುದು. ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ. 

8 /9

2024ರ ವರ್ಷವು ವೃಶ್ಚಿಕ ರಾಶಿಯವರಿಗೆ ಹಲವು ಆಯಾಮಗಳಲ್ಲಿ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದ್ಲಲಿ ನಿಮ್ಮ ಮನೆಯಲ್ಲಿ ಕೆಲವು ಶುಭ ಸಮಾರಂಭಗಳು ನಡೆಯಲಿದ್ದು, ಆಹ್ಲಾದಕರ ವಾತಾವರಣವಿರುತ್ತದೆ. 2024 ರಲ್ಲಿ ನಿಮ್ಮೆಲ್ಲಾ ಸಮಸ್ಯೆಗಳು ಅಂತ್ಯ ಕಾಣಲಿದ್ದು, ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಉನ್ನತ ಹುದ್ದೆಯನ್ನು ಅಲಂಕರಿಸಬಹುದು. ಭೂಮಿ, ವಾಹನ ಖರೀದಿಸುವ ಯೋಗವಿದೆ. ಒಟ್ಟಾರೆಯಾಗಿ ಮುಂದಿನ ವರ್ಷ ವೃಶ್ಚಿಕ ರಾಶಿಯವರಿಗೆ ಸುವರ್ಣ ಸಮಯ ಎಂದು ಸಾಬೀತುಪಡಿಸಲಿದೆ. 

9 /9

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.