ವಿಚಿತ್ರ ಆಚರಣೆ: ಈ ಧಾರ್ಮಿಕ ಸ್ಥಳದಲ್ಲಿ ಜೀವಂತ ಮಕ್ಕಳನ್ನು ಕತ್ತಿನವರೆಗೂ ಮಣ್ಣಿನಲ್ಲಿ ಹೂಳುತ್ತಾರೆ..!

ಜನರು ನಂಬಿಕೆಯ ಕಾರಣದಿಂದ ವಿಚಿತ್ರ ಸಂಪ್ರದಾಯಗಳನ್ನು ಅನುಸರಿಸುತ್ತಾರೆ, ಹೀಗೆ ಮಾಡುವುದರಿಂದ ದೇವರು ಅವರ ಇಷ್ಟಾರ್ಥ ಪೂರೈಸುತ್ತಾನೆ ಎಂಬ ನಂಬಿಕೆ ಇದೆ.

ಜಗತ್ತಿನಲ್ಲಿ ವಿಚಿತ್ರ ನಂಬಿಕೆಗಳಿಗೆ ಕೊರತೆಯಿಲ್ಲ. ನಂಬಿಕೆ ಮತ್ತು ಮೂಢನಂಬಿಕೆ ನಡುವೆ ಭಾರತೀಯ ಜನರು ಹಲವಾರು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ದೇವರ ನಂಬಿಕೆ ವಿಚಾರವಾಗಿ ಇಲ್ಲಿನ ಜನರು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಕೆಲವು ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ವಿಚಿತ್ರ ಆಚರಣೆಗಳನ್ನು ನೋಡಿದರೆ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ದೇಶದಲ್ಲಿ ಅಂತಹ ಕೆಲವು ಧಾರ್ಮಿಕ ಸ್ಥಳಗಳಿವೆ. ಇಲ್ಲಿ ಜನರು ನಂಬಿಕೆಯ ಕಾರಣದಿಂದ ವಿಚಿತ್ರ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಹೀಗೆ ಮಾಡುವುದರಿಂದ ದೇವರು ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ನಂಬಿಕೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಜಲಂಧರ್‌ನ ಹಳ್ಳಿಯಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರದಲ್ಲಿ ಜನರು ಆಟಿಕೆ ವಿಮಾನಗಳನ್ನು ನೀಡುತ್ತಾರೆ. ಹೀಗೆ ಮಾಡುವುದರಿಂದ ವೀಸಾ ಬೇಗ ಸಿಗುತ್ತದೆ ಮತ್ತು ವಿದೇಶಕ್ಕೆ ಹೋಗುವ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ.

2 /5

ಪೂಜೆ ಮಾಡುವ ಸ್ಥಳವು ಮನೆಯಲ್ಲಿರಲಿ ಅಥವಾ ದೇವಾಲಯದಲ್ಲಿರಲಿ ಅದನ್ನು ಯಾವಾಗಲೂ ಅತ್ಯಂತ ಸ್ವಚ್ಛವಾಗಿ ಇಡಲಾಗುತ್ತದೆ. ಪೂಜಾ ಸ್ಥಳದಲ್ಲಿ ಪೊರಕೆ ಇಟ್ಟುಕೊಳ್ಳುವುದು ಕಷ್ಟ, ಆದರೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಪಾತಾಳೇಶ್ವರ ಮಹಾದೇವ ದೇವಸ್ಥಾನದಲ್ಲಿ ಶಿವನಿಗೆ ಪೊರಕೆ ಅರ್ಪಿಸಲಾಗುತ್ತದೆ. ಶಿವನಿಗೆ ಪೊರಕೆ ಅರ್ಪಿಸಲು ದೂರದೂರುಗಳಿಂದ ಜನ ಇಲ್ಲಿಗೆ ಬರುತ್ತಾರೆ. ಹೀಗೆ ಮಾಡುವುದರಿಂದ ಚರ್ಮರೋಗಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

3 /5

ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಕರ್ಣಿ ಮಾತಾ ದೇವಸ್ಥಾನದಲ್ಲಿ ಇಲಿಗಳಿಗೆ ದೇವತೆಯ ಸ್ಥಾನಮಾನವನ್ನು ನೀಡಲಾಗಿದೆ. ಇಲ್ಲಿ ಕಪ್ಪು ಇಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಕ್ತರು ಅವುಗಳಿಗೆ ಹಾಲು ಉಣಿಸುತ್ತಾರೆ. ಇಲ್ಲಿ ಇಲಿಯ ಪಾದದ ಕೆಳಗೆ ಬರುವುದು ಅಶುಭವೆಂದು ಪರಿಗಣಿಸಲಾಗಿದೆ.

4 /5

ಗುಲ್ಬರ್ಗಾದ ಮೋಮಿನ್‌ಪುರದ ಸೆವೆನ್ ಗುಂಬಜ್ ಮಸೀದಿ ಬಹಳ ವಿಶಿಷ್ಟವಾಗಿದೆ. ಇಲ್ಲಿ ಚಿಕ್ಕ ಮಕ್ಕಳನ್ನು ಕತ್ತಿನವರೆಗೂ ಮಣ್ಣಿನಲ್ಲಿ ಹೂಳಲಾಗುತ್ತದೆ. ಇಲ್ಲಿನ ಮಣ್ಣಿನಲ್ಲಿ ವಿಶೇಷ ಮಕ್ಕಳನ್ನು ಕೊರಳಿನವರೆಗೂ ಹೂತುಹಾಕಿದರೆ ಅವರು ಸಾಮಾನ್ಯರಂತೆ ಆಗುತ್ತಾರೆಂಬ ವಿಶೇಷ ನಂಬಿಕೆ ಇದೆ.

5 /5

ಉಜ್ಜಯಿನಿಯ ಕಾಲಭೈರವ ದೇವಾಲಯದಲ್ಲಿ ಮದ್ಯವನ್ನು ದೇವರಿಗೆ ಪ್ರಸಾದವಾಗಿ ಅರ್ಪಿಸಲಾಗುತ್ತದೆ. ಅಷ್ಟೇ ಅಲ್ಲ ಪ್ರಸಾದದ ಮದ್ಯವನ್ನು ಭಕ್ತರಿಗೆ ಹಂಚಲಾಗುತ್ತದೆ. ಹೀಗೆ ಮಾಡುವುದರಿಂದ ಕಾಲಭೈರವ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. (ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)