ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಹೀಗಾದಾಗ ನಡೆದಾಡಲು ಕೂಡಾ ಕಷ್ಟವಾಗುತ್ತದೆ.
ಬೆಂಗಳೂರು : ದೇಹದಲ್ಲಿ ಹೆಚ್ಚಾಗಿರುವ ಯೂರಿಕ್ ಆಸಿಡ್ ಅನ್ನು ಕಿಡ್ನಿ ದೇಹದಿಂದ ಹೊರ ಹಾಕುವುದು ಸಾಧ್ಯವಾಗದೇ ಹೋದಾಗ ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೀಲುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಗಂಟುಗಳು ಊದಿಕೊಳ್ಳಲು ಕಾರಣವಾಗುತ್ತದೆ.ಇದು ವಿಪರೀತ ನೋವನ್ನು ಉಂಟು ಮಾಡುತ್ತದೆ. ಅಲ್ಲದೆ ಕಿಡ್ನಿ ಸ್ಟೋನ್ ಅಪಾಯ ಕೂಡಾ ಹೆಚ್ಚಾಗುತ್ತದೆ.
ಯೂರಿಕ್ ಆಸಿಡ್ ಕರಗಿಸಲು ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಮನೆ ಮದ್ದು ಎಂದರೆ ಅದು ನಿಂಬೆ ರಸ. ನಿಂಬೆ ರಸ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ಕರಗಿಸುತ್ತದೆ.
ಒಂದು ಲೋಟ ನೀರಿಗೆ 10ರವರೆಗೆ ಪುದಿನಾ ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರಿಗೆ ಒಂದೆರಡು ಹನಿ ನಿಂಬೆ ರಸ ಬೆರೆಸಿ ಸೇವಿಸಿಬೇಕು.
ನಿಂಬೆ ಮತ್ತು ಪುದಿನಾ ಎರಡೂ ನಿರ್ವಿಶೀಕರಣ ಮತ್ತು ಮೂತ್ರವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿದೆ.ಹಾಗಾಗಿ ಯೂರಿಕ್ ಆಸಿಡ್ ಕರಗಿ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗುತ್ತದೆ.ಮಾತ್ರವಲ್ಲ ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ದೇಹದಿಂದ ಹಿರ ಬೀಳುತ್ತದೆ.
ನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುತ್ತಾ ಬಂದರೆ ದೇಹದ ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುವುದರಲ್ಲಿ ಸಂದೇಹವೇ ಬೇಡ.
ಸೂಚನೆ: ಪ್ರಿಯ ಓದುಗರೇ,ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.