ದುಬಾರಿ ಕಾರುಗಳ ಒಡೆಯ ಖ್ಯಾತ ಬಾಲಿವುಡ್ ಸಿಂಗರ್ ಗುರು ರಾಂಧವ..!

ಬಾಲಿವುಡ್ ಖ್ಯಾತ ಸಿಂಗರ್ ಗುರು ರಾಂಧವ ಸೋಮವಾರ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಬಾಲಿವುಡ್ ಖ್ಯಾತ ಸಿಂಗರ್ ಗುರು ರಾಂಧವ(Guru Randhawa) ಸೋಮವಾರ(ಆಗಸ್ಟ್ 30) 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ-ನಟಿಯರು ಸೇರಿದಂತೆ ಅನೇಕ ಗಣ್ಯರು ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಪಂಜಾಬಿ ಮತ್ತು ಬಾಲಿವುಡ್ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ತನ್ನದೇಯಾದ ಹವಾ ಸೃಷ್ಟಿಸಿರುವ ಗುರು ರಾಂಧವ ಸದ್ಯ ಬ್ಯುಸಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಹಿಟ್ ಟ್ರ್ಯಾಕ್‌ಗಳಿಗೆ ಧ್ವನಿ ನೀಡಿರುವ ಈ ಗಾಯಕ ‘ಪಟೋಲಾ’ ಮೂಲಕ ಖ್ಯಾತಿ ಗಳಿಸಿದ್ದರು. ಇವರಿಗೆ ಆರಂಭಿಕ ದಿನಗಳಲ್ಲಿ ರ‍್ಯಾಪರ್ ಬೊಹೆಮಿಯಾ ಸಹಾಯ ಮಾಡಿದ್ದರು.

ಬಾಲಿವುಡ್ ನ ಜನಪ್ರಿಯತೆಯ ಉತ್ತುಂಗದಲ್ಲಿರುವ ಗುರು ರಾಂಧವ ತಮ್ಮ ವಿಶಿಷ್ಟ ಹಾಡುಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಮ್ಯೂಸಿಕ್ ನಿಂದಲೇ ಕೋಟಿ ಕೋಟಿ ರೂ. ವರಮಾನ ಹೊಂದಿರುವ ಈ ಗಾಯಕ(Bollywood Singer) ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ತಮ್ಮ ಬಳಿ ಅನೇಕ ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /6

ಬಾಲಿವುಡ್ ಸಿಂಗರ್ ಗುರು ರಾಂಧವ ಅವರು ಹಳದಿ ಬಣ್ಣದ Mercedes C Classನ  ಹೆಮ್ಮೆಯ ಮಾಲೀಕರಾಗಿದ್ದು, ಇದರ ಬೆಲೆ 50 ಲಕ್ಷ ರೂ. ನಿಂದ 1.4 ಕೋಟಿ ರೂ. ವಿಶೇಷವೆಂದರೆ ಇದೇ ಗುರು ರಾಂಧವ ಅವರು ಖರೀದಿಸಿದ್ದ ಮೊದಲ ಕಾರು ಆಗಿದೆ.

2 /6

ಗುರು ರಾಂಧವ ಅವರು ಅದ್ಭುತವಾಗಿರುವ ಕಪ್ಪು ಬಣ್ಣದ(matte black) Lamborghini Gallardo ಹೊಂದಿದ್ದು, ಇದನ್ನು ಈ ಹಿಂದೆ ಕಿತ್ತಳೆ ಬಣ್ಣದಲ್ಲಿ ಚಿತ್ರಿಸಲಾಗಿತ್ತು. ಈ ಕಾರಿನ ಉತ್ಪಾದನೆ ಈಗ ಸ್ಥಗಿತವಾಗಿದ್ದು, ಬೆಲೆ ಸುಮಾರು 2.1 ಕೋಟಿ ರೂ. ಎಂದು ಹೇಳಲಾಗಿದೆ.

3 /6

ಗುರು ರಾಂಧವ ಅವರ ಗ್ಯಾರೇಜ್‌ನಲ್ಲಿರುವ ಮತ್ತೊಂದು ಐಷಾರಾಮಿ ಕಾರು ಎಂದರೆ ಅದು Range Rover Evoque. ಇದರ ಬೆಲೆ ಸುಮಾರು 66.60 ಲಕ್ಷ ರೂ. ಆಗಿದೆ. ಬಾಲಿವುಡ್ ಸೆಲೆಬ್ರೆಟಿಗಳಾದ ಅಮಿತಾಬ್ ಬಚ್ಚನ್, ಆಲಿಯಾ ಭಟ್, ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅನೇಕರು ಇದೇ ರೇಂಜ್ ರೋವರ್‌ ಕಾರಿನಲ್ಲಿ ಮುಂಬೈ ಸುತ್ತುತ್ತಾರೆ.    

4 /6

ಗುರು ರಾಂಧವ BMW 3 series GT ಅನ್ನು ಹೊಂದಿದ್ದು, ಈ ಸೆಡಾನ್ ಕಾರಿನ ಬೆಲೆ 42.50 ಲಕ್ಷ ರೂ.ನಿಂದ  50.70 ಲಕ್ಷ ರೂ.ವರೆಗೆ ಇದೆ.   

5 /6

Dodge challenger SRT ಕಾರು ಕೂಡ ಗಾಯಕ ಗುರು ರಾಂಧವ ಸಂಗ್ರಹದಲ್ಲಿದೆ. ಎಸ್‌ಆರ್‌ಟಿ ಎಂದರೆ ಸ್ಟ್ರೀಟ್ ಮತ್ತು ರೇಸಿಂಗ್ ಟೆಕ್ನಾಲಜಿ ಎಂದರ್ಥ. ಈ ಕಾರಿನ ಬೆಲೆ ಸುಮಾರು 45 ಲಕ್ಷ ರೂ. ನಿಂದ 50 ಲಕ್ಷ ರೂ. ಇದೆ.

6 /6

ಸಿಂಗರ್ ಗುರು ರಾಂಧವ Cadillac ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಕಾರಿನ ಬೆಲೆ ಸುಮಾರು 1.2 ಕೋಟಿ ರೂ. ಇದೆ.