ಹಳೆ ಕಾರು ಖರೀದಿಸುವ ಮುನ್ನ ಈ ಐದು ವಿಷಯಗಳು ತಿಳಿದಿರಲಿ

ಸೆಕೆಂಡ್ ಹ್ಯಾಂಡ್ ಕಾರಿಗೆ ಸಾಲ ಪಡೆಯುವುದು ಕೂಡ ಈಗ ಸುಲಭ. ಆದ್ದರಿಂದ, ನೀವು ಹಳೆಯ ಕಾರುಗಳಲ್ಲಿ ಹೈ ಸೆಗ್ಮೆಂಟ್ ಕಾರನ್ನು ಖರೀದಿಸುವ ಬಗ್ಗೆ ಕೂಡ ಯೋಜಿಸಬಹುದು.
.

ನವದೆಹಲಿ :  ನೀವು ಸೆಕೆಂಡ್ ಹ್ಯಾಂಡ್ ಕಾರು ಅಥವಾ ಹಳೆ ಕಾರನ್ನು ಖರೀದಿಸುವುದಾದರೆ, ಅದಕ್ಕೂ ಮೊದಲು ಸ್ವಲ್ಪ ಹೋಂ ವರ್ಕ್ ಮಾಡಬೇಕಾಗುತ್ತದೆ. ಕಾರು ಖರೀದಿಸುವ ಮುನ್ನ ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.  ಮಾರುತಿ ಸುಜುಕಿಯ ಅಧಿಕೃತ ವೆಬ್‌ಸೈಟ್‌ marutisuzukitruevalue.com/ ಈ ಪ್ರಮುಖ ವಿಚಾರಗಳನ್ನು ತಿಳಿಸುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಸೆಕೆಂಡ್ ಹ್ಯಾಂಡ್ ಕಾರಿಗೆ ಸಾಲ ಪಡೆಯುವುದು ಕೂಡ ಈಗ ಸುಲಭ. ಆದ್ದರಿಂದ, ನೀವು ಹಳೆಯ ಕಾರುಗಳಲ್ಲಿ  ಹೈ ಸೆಗ್ಮೆಂಟ್ ಕಾರನ್ನು ಖರೀದಿಸುವ ಬಗ್ಗೆ ಕೂಡ ಯೋಜಿಸಬಹುದು. 5 ವರ್ಷಗಳವರೆಗಿನ pre owned ಕಾರು ಖರೀದಿಸುವುದಾದರೆ ಸುಲಭವಾಗಿ ಸಾಲ ಪಡೆಯಬಹುದು.  4-6 ಲಕ್ಷ ರೂಗಳ ಬಜೆಟ್ ನಿಮಗೆ ಹ್ಯಾಚ್ ಬ್ಯಾಕ್, ಕಾಂಪ್ಯಾಕ್ಟ್ ಎಸ್ ಯುವಿ, ಕಾಂಪ್ಯಾಕ್ಟ್ ಸೆಡಾನ್ ಅನ್ನು ಖರೀದಿಸಬಹುದು. 

2 /5

ನೀವು ಯಾವ ರೀತಿಯ ಹಳೆಯ ಕಾರನ್ನು ಖರೀದಿಸಲು ಬಯಸುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ. ಇದು ಹಲವು ಪ್ಯಾರಾ ಮೀಟರ್ ಗಳನ್ನೂ  ಹೊಂದಿದೆ. ಬಾಡಿ ಟೈಪ್, ಫ್ಯುಯೆಲ್ ಟೈಪ್ ನಿಂದ ಹಿಡಿದು, ಪರ್ಸನಲ್, ಫ್ಯಾಮಿಲಿ, ಅಡ್ವೆಂಚರ್ ಟ್ರಿಪ್,  ಹೀಗೆ ಯಾವ ರೀತಿಯ ಕಾರು ಬೇಕು ಎನ್ನುವುದನ್ನು ನಿರ್ಧರಿಸಬೇಕು.   

3 /5

ಬಜೆಟ್ ಮತ್ತು ಕಾರನ್ನು ನಿರ್ಧರಿಸಿದ ನಂತರ, ಎಷ್ಟು ಹಳೆಯ ಕಾರನ್ನು ಖರೀದಿಸಬೇಕು ಎಂಬುದನ್ನು ಈಗ ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, 3-5 ಲಕ್ಷ ರೂಪಾಯಿಗಳ ಬಜೆಟ್ ನಲ್ಲಿ, 2-3 ವರ್ಷದೊಳಗಿನ ಹ್ಯಾಚ್ ಬ್ಯಾಕ್ ಮತ್ತು 4-5 ವರ್ಷದೊಳಗಿನ ಸೆಡಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಕೆಲವು ಮೆಟ್ರೋ ನಗರಗಳು ಭವಿಷ್ಯದಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಕಾರುಗಳ ಬಳಕೆಯನ್ನು ನಿಷೇಧಿಸಬಹುದಾದ್ದರಿಂದ, ಡೀಸೆಲ್ ಕಾರುಗಳನ್ನು ಖರೀದಿಸುವುದನ್ನು ಆದಷ್ಟು ತಪ್ಪಿಸಿ.   

4 /5

ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರುವ ಪ್ರತಿಯೊಂದು ಸೆಕೆಂಡ್ ಹ್ಯಾಂಡ್ ಕಾರು ಒಬ್ಬ ವ್ಯಕ್ತಿಗೆ ಸೇರಿದ್ದಾಗಿದ್ದು, ಈ ಮಾರಾಟಗಾರರಲ್ಲಿ ಹೆಚ್ಚಿನವರು ಖರೀದಿದಾರರೊಂದಿಗೆ ನೇರವಾಗಿ ಮಾತುಕತೆ ನಡೆಸಲು ಪ್ರಯತ್ನಿಸುತ್ತಾರೆ. ಇದರ ಪ್ರಯೋಜನವೆಂದರೆ, ಯಾವುದೇ ಏಜೆಂಟ್ ಅಥವಾ ಮೂರನೇ ವ್ಯಕ್ತಿ ಇರುವುದಿಲ್ಲವಾದ್ದರಿಂದ ಹಣವನ್ನು ಉಳಿಸಬಹುದು.

5 /5

ನೀವು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಹೋದಾಗಲೆಲ್ಲ, ನೀವು ದಾಖಲೆಗಳು ಸಂಪೂರ್ಣ ಮತ್ತು ಅಪ್ಡೇಟೆಡ್ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಈ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ. ಅಗತ್ಯವಿರುವ ದಾಖಲೆಗಳಲ್ಲಿ ಆರ್‌ಸಿ ವರ್ಗಾವಣೆ, ವಿಮೆಯ ಹೆಸರು ಬದಲಾವಣೆ, ನಕಲಿ ಕೀಗಳು ಸೇರಿವೆ. ಕಾರನ್ನು ಯಾವುದೇ ಬ್ಯಾಂಕ್‌ಗೆ ಅಡಮಾನ ಇಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.