ದೇಶದಲ್ಲಿ ಕರೋನಾ ಇನ್ನಿಲ್ಲದಂತೆ ಹರಡುತ್ತಿದೆ. ಮನೆಯಿಂದ ಹೊರಗೆ ಹೊರಡುವುದೆಂದರೆ ಆಪಾಯವನ್ನು ಆಹ್ವಾನಿಸಿದಂತೆಯೇ. ಹಾಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಂಡು ಮನೆಯಲ್ಲಿರುವುದು ಅತ್ಯುತ್ತಮ.
ನವದೆಹಲಿ : ದೇಶದಲ್ಲಿ ಕರೋನಾ (Coronavirus) ಇನ್ನಿಲ್ಲದಂತೆ ಹರಡುತ್ತಿದೆ. ಮನೆಯಿಂದ ಹೊರಗೆ ಹೊರಡುವುದೆಂದರೆ ಆಪಾಯವನ್ನು ಆಹ್ವಾನಿಸಿದಂತೆಯೇ. ಹಾಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಂಡು ಮನೆಯಲ್ಲಿರುವುದು ಅತ್ಯುತ್ತಮ. ಆರೋಗ್ಯ (Health) ದೃಷ್ಟಿಯಿಂದ ತುಂಬಾ ಒಳ್ಳೆಯದು. ಈ ಹೊತ್ತಿನಲ್ಲಿ ಕರೋನಾ ಕಾಲದಲ್ಲಿ ಮನೆಯಲ್ಲಿಟ್ಟುಕೊಳ್ಳಲೇ ಬೇಕಾದ ಕೆಲವೊಂದು ಮೆಡಿಕಲ್ ಉಪಕರಣಗಳ ಬಗ್ಗೆ ಹೇಳುತ್ತೇವೆ. ಈ ಉಪಕರಣಗಳು ಮನೆಯಲ್ಲಿದ್ದರೆ ಕರೋನಾ ಕಾಲದಲ್ಲಿ ಆಸ್ಪತ್ರೆಗೆ ಅಲೆಯುವ ತಾಪತ್ರಯ ಬಹುತೇಕ ಇಲ್ಲವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮೊದಲು ಬಿಪಿ ಚೆಕ್ ಮಾಡಲು ಡಾಕ್ಟರ್ ಬಳಿ ಹೋಗಲೇ ಬೇಕಾದ ಅಗತ್ಯ ಇತ್ತು. ಇವತ್ತು ಕೆಲವೊಂದು ಉಪಕರಣಗಳ ನೆರವಿನಿಂದ ಮನೆಯಲ್ಲಿದ್ದುಕೊಂಡು ನಿಮ್ಮ ಹಾಗೂ ನಿಮ್ಮ ಪರಿವಾರದ ಆರೋಗ್ಯದ ಕಾಳಜಿ ಮಾಡಬಹುದಾಗಿದೆ. ನಿಮ್ಮ ಮನೆಯಲ್ಲಿ ಯಾರಾದರೂ ಹೈ ಅಥವಾ ಲೋ ಬಿಪಿಯಿಂದ ಬಳಲುತಿದ್ದರೆ, ಖಂಡಿತಾ ಮನೆಯಲ್ಲೊಂದು ಅಟೋಮ್ಯಾಟಿಕ್ ಎಲೆಕ್ಟ್ರಾನಿಕ್ ಬ್ಲಡ್ ಪ್ರೆಶರ್ ಮಾನಿಟರ್ ಇರಲೇಬೇಕು. ಇದರಿಂದ ನೀವೆ ಖುದ್ದು ಬಿಪಿ ಚೆಕ್ ಮಾಡಿಸಿಕೊಳ್ಳಬಹುದು.
ಕರೋನಾ ಕಾಲದಲ್ಲಿ ಆಕ್ಸಿಮೀಟರ್ ಮನೆಯಲ್ಲಿರಲೇ ಬೇಕಾದ ಅಗತ್ಯ ಉಪಕರಣ. ಅಕ್ಸಿಮೀಟರ್ ರಕ್ತದಲ್ಲಿರುವ ಅಕ್ಸಿಜನ್ ಪ್ರಮಾಣವನ್ನು ಕೆಲವೇ ಸೆಕೆಂಡುಗಳಲ್ಲಿ ಹೇಳಿ ಬಿಡುತ್ತದೆ. ಇದರಿಂದ ಆಮ್ಲಜನಕದ ಮಟ್ಟದ ಮಾಹಿತಿ ಅತ್ಯಂತ ಸುಲಭದಲ್ಲಿ ಸಿಕ್ಕಿಬಿಡುತ್ತದೆ. ಇದರಿಂದ ಮನೆಯಲ್ಲಿದ್ದುಕೊಂಡೇ ನಿಮ್ಮ ಮತ್ತು ನಿಮ್ಮ ಪರಿವಾರದ ಆರೋಗ್ಯದ ಕಾಳಜಿ ಮಾಡಿಕೊಳ್ಳಬಹುದು.
ಶುಗರ್ ಇರುವವರಿಗೆ ಗ್ಲುಕೋಮೀಟರ್ ಇರಬೇಕು. ಇದರಿಂದ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಸುಲಭದಲ್ಲಿ ಪತ್ತೆ ಮಾಡಬಹುದು. ವೈದ್ಯರ ಸಲಹೆಯಂತೆ ಗ್ಲುಕೋಮೀಟರ್ ಖರೀದಿಸಬಹುದು.
ದೇಹದ ತಾಪಮಾನ ಅಳೆಯಲು ಬಯಸುವ ಅತ್ಯಂತ ಮುಖ್ಯ ಮೆಡಿಕಲ್ ಉಪಕರಣ ಇದು. ಮೈಗೆ ಮುಟ್ಟಿಸದೇ ಕೇವಲ ಇನ್ಫ್ರಾರೆಡ್ ಮೂಲಕವೇ ಇದು ದೇಹದ ತಾಪಮಾನ ಅಳೆಯುತ್ತದೆ. ವೈದ್ಯರ ಸಲಹೆಯಂತೆ ಈ ಉಪಕರಣದ ಉಪಯೋಗ ಪಡೆಯಬಹುದು.
ಇಸಿಜಿಗಾಗಿ ಇನ್ನು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಇಸಿಜಿ ಮಾನಿಟರ್ ಇದ್ದರೆ ಮನೆಯಲ್ಲಿದ್ದುಕೊಂಡೇ ಇಸಿಜಿ ರಿಪೋರ್ಟ್ ತೆಗಿಸಬಹುದು. ಈಗ, ಸ್ಮಾರ್ಟ್ ವಾಚ್್ ಗಳಲ್ಲಿಯೂ ನೀವು ಇಸಿಜಿ ನೋಡಬಹುದಾಗಿದೆ.