Rachita Ram: ಫಸ್ಟ್ ನೈಟ್​ನಲ್ಲಿ ಏನ್ಮಾಡ್ತೀರಿ ಎಂದ ರಚಿತಾ ರಾಮ್ ಬಗ್ಗೆ ನಿಮಗೆಷ್ಟು ಗೊತ್ತು..?

ಕನ್ನಡ ಕ್ರಾಂತಿ ದಳವು ನಟಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ಕನ್ನಡದ ಜನಪ್ರಿಯ ನಟಿ ರಚಿತಾ ರಾಮ್ ತಮ್ಮ ಮುಂಬರುವ ಚಿತ್ರ ‘ಲವ್ ಯು ರಚ್ಚು’ ಪತ್ರಿಕಾಗೋಷ್ಠಿಯ ವೇಳೆ ‘ಮೊದಲ ರಾತ್ರಿ’ ನೀವು ಏನ್ಮಾಡ್ತೀರಿ? ಅನ್ನೋ ಹೇಳಿಕೆ ಭಾರೀ ವಿವಾದವನ್ನು ಹುಟ್ಟುಹಾಕಿತ್ತು. ನಟಿಯ ಈ ಹೇಳಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗಿತ್ತು. ನಟಿಯ ಈ ಶಾಕಿಂಗ್ ಹೇಳಿಕೆ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಕ್ರಾಂತಿ ದಳವು ನಟಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ. ಕನ್ನಡ ಚಿತ್ರರಂಗದಿಂದ ಈ ನಟಿಯನ್ನು ನಿಷೇಧಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಸಂಸ್ಥೆ ಮನವಿ ಮಾಡಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ, ರಚಿತಾ ಅವರ ಹೇಳಿಕೆಗಳು ನೆಲದ ಸಂಸ್ಕೃತಿಗೆ ವಿರುದ್ಧವಾಗಿದ್ದು, ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತಂದಿವೆ’ ಅಂತಾ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಟಿ ರಚಿತಾ ರಾಮ್ ಅವರ ನಿಜವಾದ ಹೆಸರು ಬಿಂಧಿಯಾ ರಾಮು. ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ರಚಿತಾ ರಾಮ್ ಕನ್ನಡ ಧಾರವಾಹಿ ‘ಅರಸಿ’ಯಲ್ಲಿ ಕಾಣಿಸಿಕೊಂಡಿದ್ದರು.

2 /5

ನಟಿ ರಚಿತಾ ರಾಮ್ 2013ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ ‘ಬುಲ್‌ಬುಲ್‌’ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ದಿಲ್ ರಂಗೀಲಾ, ಅಂಬರೀಶ್, ರನ್ನ, ರಥಾವರ, ಚಕ್ರವ್ಯೂಹ, ಭರ್ಜರಿ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.   

3 /5

‘ಡಿಂಪಲ್ ಕ್ವೀನ್’ ಎಂದೇ ಜನಪ್ರಿಯವಾಗಿರುವ ನಟಿ ರಚಿತಾ ರಾಮ್ ಇತ್ತೀಚೆಗಷ್ಟೇ ‘ಲವ್ ಯೂ ರಚ್ಚು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ಉಪೇಂದ್ರ ಜೊತೆಗೆ ‘ಐ ಲವ್ ಯೂ’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಬಳಿಕ ತಾವು ಮತ್ತೆ ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ನಟಿ ಹೇಳಿದ್ದರು. ಇದೀಗ ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಏಕ್ ಲವ್ ಯಾ’ ಹಾಗೂ ‘ಲವ್ ಯೂ ರಚ್ಚು’ ಸಿನಿಮಾದಲ್ಲಿಯೂ ರಚಿತಾ ರಾಮ್ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದನ್ನೇ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ್ದ ರಚಿತಾ ರಾಮ್ ‘ನೀವು ಫಸ್ಟ್ ನೈಟ್ ನಲ್ಲಿ ಏನು ಮಾಡುತ್ತೀರಿ?’ ಎಂಬ ಹೇಳಿಕೆ ನೀಡಿದ್ದರು. ನಾನು ಸಿನಿಮಾದ ಕಥೆಗೆ ಹೊಂದುವಂತಹ ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿರುವುದಾಗಿ ನಟಿ ಸ್ಪಷ್ಟನೆ ನೀಡಿದ್ದರು.  

4 /5

ಅಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟಿ ರಚಿತಾ ರಾಮ್, ‘ಮದುವೆಯಾದವರು ಇಲ್ಲಿ ತುಂಬಾ ಜನ ಇದ್ದಾರೆ. ಯಾರನ್ನೂ ಮುಜುಗರಕ್ಕೀಡು ಮಾಡುವ ಉದ್ದೇಶ ನನಗಿಲ್ಲ. ಸಾಮಾನ್ಯವಾಗಿ ಮದುವೆಯ ಬಳಿಕ ಏನು ಮಾಡುತ್ತಾರೆ..? ರೋಮ್ಯಾನ್ಸ್ ತಾನೇ ಮಾಡೋದು… ನಾನು ಕೂಡ ಸಿನಿಮಾದ ಕಥೆಗೆ ತಕ್ಕಂತೆ ರೋಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಿದ್ದೇನೆ ಅಂತಾ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದರು.

5 /5

ನಟಿ ರಚಿತಾ ರಾಮ್ ತಮ್ಮ ಅಭಿನಯಕ್ಕಾಗಿ ಫಿಲ್ಮ್‌ ಫೇರ್ ಪ್ರಶಸ್ತಿ ಮತ್ತು 3 SIIMA ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.