Kalatmaka Rajyog 2024:ವರ್ಷದ ಬಳಿಕ ಶುಕ್ರ-ಚಂದ್ರರಿಂದ ಕಲಾತ್ಮಕ ರಾಜಯೋಗ ರಚನೆ, ಈ ಜನರ ಮನೆಯಲ್ಲಿ ಕುಣಿ-ನಲಿದಾಡಲಿದ್ದಾಳೆ ತಾಯಿ ಲಕುಮಿ!

Shukra Chandra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿಯಲ್ಲಿ ಶುಕ್ರ-ಚಂದ್ರರ ಸಂಯೋಜನೆಯಿಂದ ಕಲಾತ್ಮಕ ರಾಜಯೋಗ ರಚನೆಯಾಗುತ್ತಿದ್ದು, ಇದು ಕೆಲ ರಾಶಿಗಳ ಜನರ ಭಾಗ್ಯದ ಬಾಗಿಲನ್ನೇ ತೆರೆಯಲಿದೆ. ಈ ಜನರ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ಕುಣಿ-ನಲಿದಾಡಲಿದ್ದಾಳೆ. (Spiritual News In Kannada)
 

Kalatmaka Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹಗಳು ಕಾಲಕಾಲಕ್ಕೆ ಗೋಚರಿಸಿ ಇತರ ಗ್ರಹಗಳ ಜೊತೆಗೆ ಮೈತ್ರಿಯನ್ನು ಮಾಡಿಕೊಂಡು ಶುಭ ರಾಜಯೋಗಗಳನ್ನು ರಚಿಸುತ್ತವೆ ಮತ್ತು ಅದರ ಪ್ರಭಾವ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸುತ್ತದೆ. ಪ್ರಸ್ತುತ ಶುಕ್ರ ಧನು ರಾಶಿಯಲ್ಲಿ ಸಂಚರಿಸುತ್ತಿದ್ದು, ಇಂದು ಬೆಳಗ್ಗೆ ಚಂದ್ರ ಕೂಡ ಧನು ರಾಶಿಗೆ ಪ್ರವೇಶಿಸಿದ್ದಾನೆ, ಇದರಿಂದ ಧನು ರಾಶಿಯಲ್ಲಿ ಕಲಾತ್ಮಕ ರಾಜಯೋಗ ರಚನೆಯಾಗುತ್ತಿದೆ. ಈ ಯೋಗದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಶಾಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರ ಮೇಲೆ ಇದು ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಈ ರಾಶಿಗಳ ಜನರಿಗೆ ಜೀವನದಲ್ಲಿ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-Venus Transit 2024: ಮಾರ್ಚ್ ತಿಂಗಳಿನಲ್ಲಿ ಒಟ್ಟು 2 ಬಾರಿ ಶುಕ್ರ ಗೋಚರ, ಈ ಜನರಿಗೆ ಅಪಾರ ಸಿರಿ-ಸಂಪತ್ತು-ಕೀರ್ತಿ ಪ್ರಾಪ್ತಿ!

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Shukra Chandra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿಯಲ್ಲಿ ಶುಕ್ರ-ಚಂದ್ರರ ಸಂಯೋಜನೆಯಿಂದ ಕಲಾತ್ಮಕ ರಾಜಯೋಗ ರಚನೆಯಾಗುತ್ತಿದ್ದು, ಇದು ಕೆಲ ರಾಶಿಗಳ ಜನರ ಭಾಗ್ಯದ ಬಾಗಿಲನ್ನೇ ತೆರೆಯಲಿದೆ. ಈ ಜನರ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ಕುಣಿ-ನಲಿದಾಡಲಿದ್ದಾಳೆ. (Spiritual News In Kannada)  

2 /5

ಮೇಷ ರಾಶಿ: ಈ ಯುತಿ ನಿಮ್ಮ ಗೋಚರ ಜಾತಕದ ಭಾಗ್ಯ ಸ್ಥಾನದಲ್ಲಿ ರಚನೆಯಾಗುತ್ತಿದೆ. ಇದರಿಂದ ನಿಮಗೆ ಅದೃಷ್ಟದ ಅಪಾರ ಬೆಂಬಲ ಸಿಗಲಿದೆ. ಕುಟುಂಬ ಹಾಗೂ ಬಂಧು ಮಿತ್ರರ ಜೊತೆಗೂಡಿ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಇನ್ನೊಂದೆಡೆ ಹಳೆ ಸ್ನೇಹಿತನ ಆಗಮನ ನಿಮ್ಮ ಮನಸ್ಸಿಗೆ ಸಾಕಷ್ಟು ಖುಷಿ ನೀಡಲಿದೆ. ಈ ಅವಧಿಯಲ್ಲಿ ನಿಮ್ಮ ಸುಖ ಸೌಕರ್ಯಗಳಲ್ಲಿ ಅಪಾರ ವೃದ್ಧಿಯಾಗಲಿದೆ. ಇದಲ್ಲದೆ ಸಾಕಷ್ಟು ಹಣಗಳಿಕೆ ಮಾಡುವಲ್ಲಿಯೂ ಕೂಡ ನೀವು ಯಶಸ್ಸನ್ನು ಸಾಧಿಸುವಿರಿ. ವಿದ್ಯಾರ್ಥಿಗಳ ಪಾಲಿಗೆ ಸಮಯ ಸಾಕಷ್ಟು ಅನುಕೂಲಕರವಾಗಿದೆ.   

3 /5

ಮಿಥುನ ರಾಶಿ: ಈ ರಾಜಯೋಗ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ರಚನೆಯಾಗುತ್ತಿದೆ. ಇದರಿಂದ ವಿವಾಹಿತರ ದಾಮಪತ್ಯ ಜೀವನ ಸುಖಮಯವಾಗಲಿದೆ. ಪರಸ್ಪರರ ಮಧ್ಯೆ ಸಮತೋಲನ ಹೆಚ್ಚಾಗಲಿದೆ. ನಿಮ್ಮ ಮನಸ್ಸು ಪ್ರಸನ್ನವಾಗಿರಲಿದೆ. ಕೆಲಸ ಕಾರ್ಯಗಳಲ್ಲಿ ಉನ್ನತಿಯ ಯೋಗ ಇದೆ. ವ್ಯಾಪಾರಿಗಳ ಪಾಲಿಗೆ ಸಮಯ ಸಾಕಷ್ಟು ಉತ್ತಮವಾಗಿದೆ. ಅದರಲ್ಲಿಯೂ ವಿಶೇಷವಾಗಿ, ಕಲೆ, ಸಂಗೀತ, ಮಾಧ್ಯಮ ಅಥವಾ ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ಜನರಿಗೆ ದೊಡ್ಡ ಪ್ರಾಜೆಕ್ಟ್ ಕೈಸೇರುವ ಸಾಧ್ಯತೆ ಇದೆ.   

4 /5

ಸಿಂಹ ರಾಶಿ: ನಿಮ್ಮ ಜಾತಕದ ಸಂತಾನ ಹಾಗೂ ಆರ್ಥಿಕ ಭಾವದಲ್ಲಿ ಕಲಾತ್ಮಕ ರಾಜಯೋಗ ರಚನೆಯಾಗುತ್ತಿದೆ. ಇದು ನಿಮ್ಮ ಆರ್ಥಿಕ ಸ್ಥಿತಿಗತಿಯ ದೃಷ್ಟಿಯಿಂದ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಈ ಮೈತ್ರಿ ನಿಮ್ಮ ಜಾತಕದ ಪಂಚಮ ಭಾವದಲ್ಲಿ ರಚನೆಯಾಗುತ್ತಿರುವ ಕಾರಣ ಪ್ರೇಮಿಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಕೆಲಸ ಕಾರ್ಯಗಳಲ್ಲಿ ಲಾಭ ಸಿಗಲಿದೆ. ಸೃಜನಾತ್ಮಕ ಕ್ಷೇತ್ರಗಳಾದ ಮಾಧ್ಯಮ, ಸಂಗೀತ ಅಥವಾ ಇತರ ಕ್ಷೇತ್ರಗಳಿಗೆ ಸಂಬಂಧಿಸಿದರೆ ನಿಮಗೆ ಸಾಕಷ್ಟು ಜನಪ್ರೇಯತೆ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನ ಪ್ರಾಪ್ತಿಯ ಯೋಗಗಳು ನಿರ್ಮಾಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮ್ಮ ಮಕ್ಕಳ ಉನ್ನತಿಯಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)