ಇನ್ನೆರಡು ತಿಂಗಳಲ್ಲಿ ಈ ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗ ! ಉಕ್ಕಿ ಬರುವುದು ಧನ

ಇನ್ನೆರಡು ತಿಂಗಳು ಕಳೆದರೆ ಗುರು ಗ್ರಹದ ಕೃಪೆಯಿಂದ ಈ ರಾಶಿಯವರ ಜೀವನದಲ್ಲಿ ಎಲ್ಲವೂ ಸುಗಮವಾಗಿ ನಡೆಯುವುದು. 

ಬೆಂಗಳೂರು : ಮೇಷ ರಾಶಿಯಲ್ಲಿರುವ ಗುರು ಸೆಪ್ಟೆಂಬರ್ 11 ರಿಂದ ಡಿಸೆಂಬರ್ 20 ರವರೆಗೆ ವಕ್ರ ನಡೆ ಆರಂಭಿಸುತ್ತಾನೆ. ಹೀಗಾಗಿ ಕೆಲವು ರಾಶಿಯವರಿಗೆ ಕೋಟ್ಯಾಧಿಪತಿ ಯೋಗ ಮತ್ತು ಸುವರ್ಣಾವಕಾಶಗಳು ಲಭಿಸಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /13

ಗುರು ಸೆಪ್ಟೆಂಬರ್ 11 ರಿಂದ ಡಿಸೆಂಬರ್ 20 ರವರೆಗೆ ವಕ್ರವಾಗಿ ಅಥವಾ ಹಿಮ್ಮುಖವಾಗಿ ಚಲನೆ ಆರಂಭಿಸಲಿದ್ದಾನೆ. ಗುರುವಿನ ಹಿಮ್ಮುಖ ಚಲನೆ  ಕೆಲವು ರಾಶಿಯವರ ಜಾತಕದಲ್ಲಿ ಕೋಟ್ಯಾಧಿಪತಿಯಾಗುವ ಯೋಗವನ್ನು ಉಂಟು ಮಾಡುತ್ತದೆ. ಈ ನಾಲ್ಕು ತಿಂಗಳುಗಳ ಗುರು ಗ್ರಹದ ಕೃಪೆಯಿಂದ ಈ ರಾಶಿಯವರ ಜೀವನದಲ್ಲಿ ಎಲ್ಲವೂ ಸುಗಮವಾಗಿ ನಡೆಯುವುದು. 

2 /13

ಮೇಷ: ಯಶಸ್ಸು ನಿಮ್ಮ ಕೈಸೇರಲಿದೆ. ನೀವು ಮಾಡಬೇಕು ಅಂದುಕೊಳ್ಳುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೊಸ ಉದ್ಯೋಗಕ್ಕೆ ಕೈ ಹಾಕಿದರೆ ಅಲ್ಲಿಯೂ  ಯಶಸ್ಸು ನಿಮ್ಮದಾಗಲಿದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಸಿಗಲಿದೆ. 

3 /13

ವೃಷಭ: ಕಚೇರಿಯಲ್ಲಿ ನಿಮ್ಮ ಕಾರ್ಯವೈಖರಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ಆತಂಕ ನಿಮ್ಮಲ್ಲಿದೆ. ಆದರೆ, ನೀವು ಮಾಡುವ ಕೆಲಸಕ್ಕೆ ಉತ್ತಮ ಫಲ ಸಿಗಲಿದೆ.  ನಿರಾತಂಕವಾಗಿ ಕೆಲಸದಲ್ಲಿ ಮುಂದುವರೆಯಿರಿ. ಗುರುವಿನ ಕೃಪೆ ನಿಮ್ಮ ಮೇಲಿರಲಿದೆ

4 /13

ಮಿಥುನ: ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕಚೇರಿಯಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಬಡ್ತಿಯ ಜೊತೆಗೆ ಸಂಬಳವೂ ಹೆಚ್ಚುತ್ತದೆ.   

5 /13

ಕರ್ಕ: ವ್ಯರ್ಥ ತಿರುಗಾಟ ಬರಲಿದೆ. ಕಚೇರಿಯಲ್ಲಿ ನಿಮಗೆ ಹೆಚ್ಚಿನ ಕೆಲಸದ ಹೊರೆ ಇರುತ್ತದೆ.  ಕೋಪದಿಂದ ನೀವಾಡುವ ಮಾತಿನಿಂದಲೇ ಅವಮಾನ ಎದುರಿಸಬೇಕಾಗುತ್ತದೆ. ಕಚೇರಿಯಲ್ಲಿ ಏನಾಗುತ್ತದೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ದೈಹಿಕ ಆರೋಗ್ಯ ಹದಗೆಡುತ್ತದೆ. 

6 /13

ಸಿಂಹ: ಮುಂದೂಡಲಾಗಿದ್ದ ಶುಭ ಕಾರ್ಯಗಳು ನೆರವೇರುವ ಕಾಲ. ಕೆಲಸದಲ್ಲಿ ಬಡ್ತಿ ಪಡೆದು ವೇತನ ಕೂಡಾ ಹೆಚ್ಚಾಗುವುದು. ನಿಮ್ಮ ಮನೆಯಲ್ಲಿ ಹಣದ ಮಳೆಯಾಗುತ್ತದೆ. ಅನಿರೀಕ್ಷಿತ ಆದಾಯ ಬರುವ ಸಾಧ್ಯತೆ ಇದೆ. ಪ್ರಭಾವ ಮತ್ತು ವಾಕ್ಚಾತುರ್ಯ ಹೆಚ್ಚಾಗುತ್ತದೆ. 

7 /13

ಕನ್ಯಾ: ಕುಟುಂಬದಲ್ಲಿ ಬಂಧುಗಳ ಜೊತೆ ಜಗಳವಾಗುವುದಕ್ಕಿಂತ ಸ್ವಲ್ಪ ಅನುಸರಿಸಿಕೊಂಡು ಹೋಗುವುದು ಒಳ್ಳೆಯದು. ಪತಿ-ಪತ್ನಿಯರ ನಡುವಿನ ಅನಗತ್ಯ ಜಗಳಗಳು ಮಾಯವಾಗುತ್ತವೆ. ಕಚೇರಿಯಲ್ಲಿ ನಿಮ್ಮ ಪ್ರತಿಭೆಗೆ ಬೆಲೆ ಸಿಗುತ್ತದೆ. ನಿರೀಕ್ಷಿತ ಬಡ್ತಿ ದೊರೆಯಲಿದೆ.

8 /13

ತುಲಾ: ಗುರು ಗ್ರಹ ವಕ್ರ ನಡೆಯಲ್ಲಿ ಸಂಕ್ರಮಿಸುವ ಈ ಅವಧಿಯಲ್ಲಿ ಮನಸ್ಸಿನ  ಆತಂಕ ದೂರವಾಗುವುದು. ನಿಮ್ಮ ಯೋಜನೆಗಳಿಗೆ ಸ್ಪಷ್ಟ ರೂಪು ರೇಷೆ ಸಿಗುವುದು. ಜೀವನದಲ್ಲಿ ನೆಮ್ಮದಿ ಮತ್ತು ಸಂತೋಷ ಹೆಚ್ಚಾಗುತ್ತದೆ. ರೋಗಗಳು ಮಾಯವಾಗಿ ಆರೋಗ್ಯ ವೃದ್ಧಿಯಾಗುತ್ತದೆ. 

9 /13

ವೃಶ್ಚಿಕ: ನಿಮ್ಮ ಬುದ್ಧಿಶಕ್ತಿ ಹೆಚ್ಚಲಿದೆ. ಹೊಸ ಉದ್ಯೋಗ ಪಡೆಯುವುದು ಸಾಧ್ಯವಾಗುವುದು. ಮಹಿಳೆಯರಿಗೆ ಚಿನ್ನ ಅಥವಾ ನಿಮಗೆ ಇಷ್ಟವಾದ ದುಬಾರಿ ವಸ್ತು ಖರೀದಿಸುವ ಯೋಗವಿದೆ. ಗೃಹ, ವಾಹನ ಖರೀದಿ ಯೋಗವೂ  ಇದೆ. 

10 /13

ಧನು  : ಗುರುವೀಣೆ ಹಿಮ್ಮುಖ ಚಲನೆ ವೇಳೆ  ಧನು ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಧನು ರಾಶಿಯವರಿಗೆ ಗುರುವಿನ ಆಶೀರ್ವಾದದಿಂದ  ನಿರೀಕ್ಷಿತ ಬಡ್ತಿ ದೊರೆಯಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

11 /13

ಮಕರ: ಮಕರ ರಾಶಿಯವರು ಈ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಗರ್ಭಿಣಿಯರು ಉತ್ತಮ ಬಟ್ಟೆ ಧರಿಸಬೇಕು. ಆರೋಗ್ಯ ವೆಚ್ಚವೂ ಹೆಚ್ಚಾಗಲಿದೆ. 

12 /13

ಕುಂಭ: ಕುಂಭ ರಾಶಿಯವರಿಗೆ ವಕ್ರ ಗುರುವಿನ ಸಂಕ್ರಮಣದಿಂದ ಹಠಾತ್ ಖರ್ಚುಗಳು ಹೆಚ್ಚಾಗುವುದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. 

13 /13

Pisces ಮೀನ: ಮೀನ ರಾಶಿಯವರು ಯಾವುದೇ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿರುತ್ತಾರೆ. ನಿಂತು ಹೋಗಿರುವ ಮದುವೆ ಕಾರ್ಯಗಳು ಮತ್ತೆ ನೆರವೇರುವ ಸಮಯ ಕೂಡಿ ಬರಲಿದೆ.