ಇನ್ನೊಂದು ವಾರದಲ್ಲಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು ! ಸೇರಿ ಹರಸುವುದು ಮೂರು ಗ್ರಹಗಳು

ಗ್ರಹಗಳ ಬದಲಾವಣೆಯಿಂದ ಎಲ್ಲಾ ರಾಶಿಯವರ ಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಸಾಗುತ್ತವೆ.
 

ಬೆಂಗಳೂರು : ಎರಡು ಅಥವಾ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿದ್ದಾಗ, ವಿವಿಧ ರೀತಿಯ ಯೋಗಗಳು ರೂಪುಗೊಳ್ಳುತ್ತವೆ. ಇವುಗಳಿಂದ ಶುಭ ಮತ್ತು ಅಶುಭ ಫಲಗಳು ಉಂಟಾಗುತ್ತವೆ. ಸೆಪ್ಟೆಂಬರ್ 17 ರಂದು, ಸೂರ್ಯನು ಕನ್ಯಾರಾಶಿಗೆ ಸಾಗುತ್ತಾನೆ. ಮಂಗಳ ಈಗಾಗಲೇ ಅದೇ ರಾಶಿಯಲ್ಲಿದ್ದಾನೆ.. ಮಂಗಳ ಸೂರ್ಯ ಶನಿಯೊಡನೆ ಸೇರಿಕೊಂಡು ಷಡಾಷ್ಟಕ ಯೋಗ ನಿರ್ಮಾಣವಾಗುತ್ತದೆ. ಈ ಯೋಗದಿಂದ ಕೆಲವರಿಗೆ ಶುಭಫಲವಾದರೆ ಇನ್ನು ಕೆಲವರಿಗೆ ಸಮಸ್ಯೆ. ಈ ಯೋಗದ ಸಂಪೂರ್ಣ ಜಾತಕಫಲವನ್ನು ಇಲ್ಲಿ ನೋಡೋಣ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /12

ಮೇಷ: ಮಕ್ಕಳ ಮೂಲಕ ಶುಭ ಸುದ್ದಿ ಬರಲಿದೆ. ಹಣದ ಹರಿವು ಅಧಿಕವಾಗಿರುತ್ತದೆ. ಮನೆ, ವಾಹನ ಖರೀದಿ ಯೋಗ ಕೂಡಿ ಬರಲಿದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ.   

2 /12

ವೃಷಭ: ಸಮಾಜದಲ್ಲಿ ಗೌರವ ಹೆಚ್ಚುವುದು. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ವೇತನ ಹೆಚ್ಚಳ ಮತ್ತು ಬಡ್ತಿ ದೊರೆಯುತ್ತದೆ. ಪ್ರಯಾಣಕ್ಕೆ ಅವಕಾಶವಿರುತ್ತದೆ.

3 /12

ಮಿಥುನ: ಕೌಟುಂಬಿಕ ವ್ಯವಹಾರಗಳಲ್ಲಿ ಸುಧಾರಣೆ ಕಂಡುಬರಲಿದೆ. ಸಂಪತ್ತು ವೃದ್ಧಿಯಾಗಲಿದೆ. ಶೌರ್ಯ ಮತ್ತು ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ಚಟುವಟಿಕೆಗಳಲ್ಲಿ ಸುಧಾರಣೆ ಕಂಡುಬರಲಿದೆ. 

4 /12

ಕರ್ಕ:- ಆರ್ಥಿಕ ಚಟುವಟಿಕೆಗಳು ಮತ್ತು ಹಣ ಸಂಬಂಧಿತ ಕೆಲಸಗಳಲ್ಲಿ ಸುಧಾರಣೆ ಕಂಡುಬರುವುದು. ಕುಟುಂಬದ ಕಾರ್ಯದಲ್ಲಿ ಸುಧಾರಣೆ. ಧೈರ್ಯ, ಸಾಮಾಜಿಕ ಪ್ರತಿಷ್ಠೆ ಮತ್ತು ಕಾರ್ಯ ದಕ್ಷತೆ ಹೆಚ್ಚಾಗುತ್ತದೆ. ಹೊಟ್ಟೆ ಮತ್ತು ಕಾಲಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 

5 /12

ಸಿಂಹ:- ಸರ್ಕಾರಿ ವಲಯದ ಜನರಿಗೆ ಇದು ಶುಭ ಸಮಯವಾಗಿರುತ್ತದೆ. ಜಂಟಿ ಕೆಲಸದಲ್ಲಿ ಸುಧಾರಣೆ ಕಂಡುಬರಲಿದೆ. ದೈನಂದಿನ ಆದಾಯದ ಮೂಲಗಳಲ್ಲಿ ಸುಧಾರಣೆ ಇರುತ್ತದೆ. ಐಶಾರಾಮಿ ವಿಚಾರಗಳಿಗೆ ಖರ್ಚು ಹೆಚ್ಚಾಗಬಹುದು.

6 /12

ಕನ್ಯಾ:- ಹಠಾತ್ ಧನಲಾಭವಾಗುವುದು. ಪ್ರಯಾಣ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೋಪ ಹೆಚ್ಚುತ್ತದೆ. ಮಾತಿನ ತೀವ್ರತೆ ಹೆಚ್ಚುತ್ತದೆ.

7 /12

ತುಲಾ :- ಮಕ್ಕಳಿಂದ ಶುಭ ವಾರ್ತೆ ಬರಲಿದೆ. ಆದಾಯದ ಮೂಲಗಳಲ್ಲಿ ಸುಧಾರಣೆ ಮತ್ತು ಬದಲಾವಣೆ ಸಾಧ್ಯ. ಸಂಗಾತಿಗಾಗಿ ಖರ್ಚು ಮಾಡುವ ಅವಕಾಶವಿದೆ. 

8 /12

ವೃಶ್ಚಿಕ :- ಸಾಮಾಜಿಕ ಸ್ಥಾನಮಾನ ಬದಲಾಗುವುದು. ಗೌರವ ಹೆಚ್ಚುವುದು.  ಹಣಕಾಸಿನ ವಿಚಾರದಿಂದ ಸಂತೋಷವಾಗಿರುತ್ತೀರಿ. ಪ್ರೇಮ ಸಂಬಂಧಗಳಲ್ಲಿ ಸುಧಾರಣೆ ಕಂಡುಬರಲಿದೆ. 

9 /12

ಧನು:- ಸಹೋದರರು, ಸ್ನೇಹಿತರು ಮತ್ತು ಬಂಧುಗಳಿಂದ ಬೆಂಬಲ  ಸಿಗುವುದು. ನೀವು ಮಾಡುವ ಕೆಲಸದಲ್ಲಿ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಜೀವನ ಸಂಗಾತಿಯೊಂದಿಗೆ ಸಹಕಾರ ಮತ್ತು ಪ್ರೀತಿಯ ಸಂಬಂಧಗಳಲ್ಲಿ ಸುಧಾರಣೆ ಇರುತ್ತದೆ.   

10 /12

ಮಕರ :- ಮಾತಿನ ತೀವ್ರತೆ ಹೆಚ್ಚಾಗುವುದು. ಕುಟುಂಬ ವ್ಯವಹಾರಗಳಲ್ಲಿ ಪ್ರಗತಿ ಮತ್ತು ಬದಲಾವಣೆ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಆತಂಕ ಉಂಟಾಗಬಹುದು. ಕೋಪ ಹೆಚ್ಚುತ್ತದೆ. ಪ್ರೇಮ ಸಂಬಂಧಗಳಲ್ಲಿ ಸುಧಾರಣೆ ಮತ್ತು ವೈವಾಹಿಕ ಜೀವನದಲ್ಲಿ ಮಧುರತೆ ಇರುತ್ತದೆ.   

11 /12

ಕುಂಭ :- ಮನೋಬಲ ಹೆಚ್ಚಾಗುವುದು. ಸಾಮಾಜಿಕ ಸ್ಥಾನಮಾನ, ಗೌರವಕ್ಕೆ ಸಂಬಂಧಿಸಿದಂತೆ ಸಣ್ಣ ಘರ್ಷಣೆಗಳು ಸಾಧ್ಯ. ಸಣ್ಣ ಅಡೆತಡೆಗಳೊಂದಿಗೆ ಆರ್ಥಿಕ ಚಟುವಟಿಕೆಗಳು ಸುಧಾರಿಸುತ್ತವೆ.     

12 /12

ಮೀನ :- ಮಕ್ಕಳ ಮನಸ್ಸಿನಲ್ಲಿ ಅತೃಪ್ತಿ ಉಂಟಾಗುವುದು. ದಂತ ಮತ್ತು ಕಣ್ಣಿನ ಸಮಸ್ಯೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಹಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಸುಧಾರಣೆ ಕಂಡುಬರಲಿದೆ. ಉದ್ಯಮ ಮತ್ತು ವ್ಯಾಪಾರದಲ್ಲಿ ಏರುಪೇರಾಗಲಿದೆ.