Guru Chandala Yoga: ಈ ರಾಶಿಯವರಿಗೆ ಕೆಟ್ಟ ಕಾಲ ಶುರು.. ತಪ್ಪಿದ್ದಲ್ಲ ಕಷ್ಟ, ಆರ್ಥಿಕ ನಷ್ಟ, ಮಾನ ಹಾನಿ!!

Guru Chandala Yoga: ಗುರು ರಾಹು ಸಂಯೋಗವು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ. ಗುರು-ರಾಹು ಸಂಯೋಜನೆಯನ್ನು ಗುರು ಚಂಡಾಲ ಯೋಗ ಎಂದು ಕರೆಯಲಾಗುತ್ತದೆ. ಈ ಸಂಯೋಗ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ತರುತ್ತದೆ. 

Guru Chandala Yoga: ಪ್ರಸ್ತುತ ರಾಹು ಮೇಷದಲ್ಲಿ ಕುಳಿತಿದ್ದಾನೆ. ಮತ್ತೊಂದೆಡೆ, ಏಪ್ರಿಲ್ 22, 2023 ರಂದು, ಗುರು ಮೇಷ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದಾಗಿ ಗುರು ಚಂಡಾಲ ಯೋಗ ನಿರ್ಮಾಣವಾಗಿದೆ. ಅಕ್ಟೋಬರ್ 30 ರಂದು ರಾಹು ವೃಷಭ ರಾಶಿಗೆ ಹೋಗುವವರೆಗೂ ಈ ಯೋಗವು ಕೆಲ ರಾಶಿಗಳ ಜನರನ್ನು ಕಾಡುತ್ತದೆ. ಗುರು - ರಾಹು ಸಂಯೋಗದಿಂದ ರೂಪುಗೊಂಡ ಈ ಯೋಗವು ಶಿಕ್ಷಣ, ಚಾರಿತ್ರ್ಯ ಮತ್ತು ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರಬಹುದು. ಗುರು ಚಂಡಾಲ ಯೋಗದ ಪ್ರಭಾವ ಎಲ್ಲ ರಾಶಿಯವರ ಮೇಲೂ ಕಂಡುಬರುತ್ತದೆ. ಆದರೆ ಈ 5 ರಾಶಿಗಳ ಮೇಲೆ ತುಂಬಾ ಕೆಟ್ಟ ದುಷ್ಪರಿಣಾಮ ಬೀರುತ್ತವೆ. 

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸಿಲ್ಲ.‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ : ಈ ರಾಶಿಯಲ್ಲಿ ಗುರು ಚಂಡಾಲ ಯೋಗ ಉಂಟಾಗುತ್ತದೆ. ಆದ್ದರಿಂದ ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ಸಣ್ಣ ಚರ್ಚೆಯೂ ದೊಡ್ಡ ವಿವಾದಕ್ಕೆ ಕಾರಣವಾಗಬಹುದು. ವಿವಾದಗಳಲ್ಲಿ ಭಾಗಿಯಾಗದಿರುವುದು ಉತ್ತಮ. ನೀವು ಕಚೇರಿಯಲ್ಲಿ ತುಂಬಾ ಜಾಗರೂಕರಾಗಿರಿ. ಅಕ್ಟೋಬರ್ 30 ರವರೆಗೆ ಬಹಳ ಜಾಗರೂಕರಾಗಿರಿ.

2 /5

ಮಿಥುನ ರಾಶಿ : ಈ ರಾಶಿಯವರಿಗೆ ಗುರು ಚಂಡಾಲ ಯೋಗವು 11ನೇ ಮನೆಯಲ್ಲಿ ರೂಪುಗೊಂಡಿರುವುದರಿಂದ ಈ ಸಮಯ ನಿಮಗೆ ಅಷ್ಟು ಒಳ್ಳೆಯದಲ್ಲ. ಹಣದ ನಷ್ಟ ಸಂಭವಿಸಬಹುದು. ದಾಂಪತ್ಯ ಜೀವನದಲ್ಲಿ ಗೊಂದಲ ಉಂಟಾಗಬಹುದು. ನೀವು ಕೆಲಸದಲ್ಲಿ ಅವಮಾನವನ್ನು ಎದುರಿಸಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ ಮುಂದುವರೆಯಿರಿ. 

3 /5

ಕನ್ಯಾ ರಾಶಿ : ಕನ್ಯಾ ರಾಶಿಯವರು ಹಠಾತ್ ಅಪಘಾತಗಳಿಗೆ ಗುರಿಯಾಗುತ್ತಾರೆ. ಈ ದೋಷ ಯೋಗವು ಎಂಟನೇ ಮನೆಯಲ್ಲಿರುವುದರಿಂದ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಉಂಟಾಗಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರುತ್ತವೆ. ಮನಸ್ಸಿನಲ್ಲಿ ವಿಚಿತ್ರ ಅಲೆದಾಟ ಇರುತ್ತದೆ. ನಿಮ್ಮ ನಾಲಿಗೆ ಮತ್ತು ಮನಸ್ಸನ್ನು ನಿಯಂತ್ರಿಸಿ. ಖರ್ಚಿನ ಜೊತೆಗೆ ಕೌಟುಂಬಿಕ ತೊಂದರೆಗಳೂ ಹೆಚ್ಚಾಗುತ್ತವೆ.  

4 /5

ಧನು ರಾಶಿ : ಗುರು ಚಂಡಾಲ ಯೋಗವು ಐದನೇ ಮನೆಯಲ್ಲಿ ರೂಪುಗೊಳ್ಳುತ್ತದೆ ಮತ್ತು ನಿಮ್ಮ ಕುಟುಂಬ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಖಿನ್ನತೆಯ ಭಾವನೆಗಳು ಕಾಡಬಹುದು. ಆದರೆ ಹತಾಶರಾಗುವ ಅಗತ್ಯವಿಲ್ಲ.   

5 /5

ಮೀನ ರಾಶಿ : ನಕಾರಾತ್ಮಕ ವಿಷಯಗಳು ನಿಮ್ಮನ್ನು ಕಾಡುತ್ತವೆ. ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ವ್ಯಾಪಾರದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೊಂಚ ಎಚ್ಚರದಿಂದ ಇರಿ.