JIO In-Flight Connectivity Plans: Jio ಗ್ರಾಹಕರಿಗೆ ಮೂರು ಜಬರ್ದಸ್ತ್ ಪ್ಲಾನ್ ಬಿಡುಗಡೆ, ವಿಶೇಷತೆ ಇಲ್ಲಿದೆ

JIO In-Flight Connectivity Plans - ರಿಲಯನ್ಸ್ (Reliance) ಜಿಯೋ (Jio) ಜಬರ್ದಸ್ತ್  ಯೋಜನೆಗಳನ್ನು (Jio IFCP) ಆರಂಭಿಸುವ ಮೂಲಕ ಇತರ ಟೆಲಿಕಾಂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ವಿಮಾನಯಾನದ ವೇಳೆ ಸಾಮಾನ್ಯವಾಗಿ ವಿಮಾನ ಏರಿದಾಕ್ಷಣ ನಮ್ಮ ಮೊಬೈಲ್ ನೆಟ್ವರ್ಕ್ ಹೋಗುತ್ತದೆ ಮತ್ತು ಸೇವೆ ಸ್ಥಗಿತಗೊಳ್ಳುವುದನ್ನು ನೀವು ಗಮನಿಸಿರಬಹುದು.

JIO In-Flight Connectivity Plans - ರಿಲಯನ್ಸ್ (Reliance) ಜಿಯೋ (Jio) ಜಬರ್ದಸ್ತ್  ಯೋಜನೆಗಳನ್ನು (Jio IFCP) ಆರಂಭಿಸುವ ಮೂಲಕ ಇತರ ಟೆಲಿಕಾಂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ವಿಮಾನಯಾನದ ವೇಳೆ ಸಾಮಾನ್ಯವಾಗಿ ವಿಮಾನ ಏರಿದಾಕ್ಷಣ ನಮ್ಮ ಮೊಬೈಲ್ ನೆಟ್ವರ್ಕ್ ಹೋಗುತ್ತದೆ ಮತ್ತು ಸೇವೆ ಸ್ಥಗಿತಗೊಳ್ಳುವುದನ್ನು ನೀವು ಗಮನಿಸಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ನಾವು ಫೋನ್ ಅನ್ನು ಆಫ್ ಮಾಡಬೇಕಾಗುತ್ತದೆ. ಹೀಗಿರುವಾಗ ಇಂದು ನಾವು ನಿಮಗೆ ರಿಲಯನ್ಸ್ ಜಿಯೋ ಕಂಪನಿ (Reliance Jio) ಬಿಡುಗಡೆ ಮಾದುರುವ ಮೂರು ಅದ್ಭುತ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದು, ಈ ಯೋಜನೆಗಳ ಸಹಾಯದಿಂದ ನೀವು ಫ್ಲೈಟ್ ನಲ್ಲಿಯೂ ಕೂಡ ಇಂಟರ್ನೆಟ್, ಕಾಲಿಂಗ್ ಹಾಗೂ SMS ಸೇವೆಗಳನ್ನು ಬಳಸಬಹುದು. ಜಿಯೋನ ಈ ಯೋಜನೆಗಳು ಫ್ರೀ ಇಂಟರ್ನ್ಯಾಷನಲ್ ರೋಮಿಂಗ್ ನೊಂದಿಗೆ ಬರುತ್ತವೆ.

 

ಇದನ್ನೂ ಓದಿ-Jio ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ Netflix, Amazon Prime, Disney+ Hotstar ಚಂದಾದಾರಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. ಅಂತಾರಾಷ್ಟ್ರೀಯ ಫ್ಲೈಟ್ ಗಳಲ್ಲಿ ನೀವು ಈ ಸೇವೆಯನ್ನು ಬಳಸಬಹುದು - JIO In-Flight Connectivity Plans ಗಳನ್ನು ನೀವು 22 ಅಂತಾರಾಷ್ಟ್ರೀಯ ಫ್ಲೈಟ್ ಗಳಲ್ಲಿ ಬಳಸಬಹುದು. ಈ ಪ್ಲಾನ್ ಗಳಲ್ಲಿ ನಿಮಗೆ ಇಂಟರ್ನೆಟ್ ಹಾಗೂ SMS ಸೌಲಭ್ಯಗಳು ಸಿಗುತ್ತವೆ. ಆದರೆ, ಕಾಲಿಂಗ್ ಸೇವೆಯನ್ನು ಕೇವಲ ಕೆಲವೇ ಏರ್ಲೈನ್ಸ್ ಗಳಲ್ಲಿ ಸಿಗಲಿದೆ. ಈ ಪ್ಲಾನ್ ಗಳ ಕುರಿತು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

2 /5

2. ರಿಲಯನ್ಸ್ ಜಿಯೋ ರೂ.499  In-Flight Connectivity Plan - 499 ರೂ.ಗಳ ಪ್ಲಾನ್ ಸಿಂಧುತ್ವ ಕೇವಲ 1 ದಿನ ಮಾತ್ರ ಇರಲಿದೆ. ಇದರಲ್ಲಿ ನೀವು 250 MB ಡೇಟಾವನ್ನು ಪಡೆಯುವಿರಿ. ಇದಲ್ಲದೆ, 100 ನಿಮಿಷಗಳು ಮತ್ತು 100 SMS ಗಳು ಲಭ್ಯವಿರುತ್ತವೆ. ಆದರೆ ಒಳಬರುವ ಕರೆಗಳ ಸೌಲಭ್ಯ ಇದರಲ್ಲಿ ಲಭ್ಯವಿಲ್ಲ. ಅಂದರೆ, ಈ ಪ್ಲಾನ್ ಅಡಿಯಲ್ಲಿ ನೀವು ಕೇವಲ ಕರೆಗಳನ್ನು ಮಾತ್ರ ಮಾಡಬಹುದು. ಆದರೆ, ಒಳಬರುವ ಕರೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ.

3 /5

3. ರಿಲಯನ್ಸ್ ಜಿಯೋ ರೂ.699  In-Flight Connectivity Plan - 699 ರೂ.ಗಳ ಪ್ಲಾನ್ ಸಿಂಧುತ್ವ ಕೂಡ ಕೇವಲ  1 ದಿನ ಮಾತ್ರ ಇರಲಿದೆ. ಇದರಲ್ಲಿ ನೀವು 500 MB ಡೇಟಾವನ್ನು ಪಡೆಯುವಿರಿ. ಇದಲ್ಲದೆ, 100 ನಿಮಿಷಗಳು ಮತ್ತು 100 SMSಗಳು ನಿಮಗೆ ಸಿಗಲಿವೆ. ಈ ಯೋಜನೆಯಲ್ಲಿಯೂ ಕೂಡ ನಿಮಗೆ ಕೇವಲ ಹೊರಹೋಗುವ ಕರೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಒಳಬರುವ ಕರೆಗಳ ಸೌಲಭ್ಯ ಸಿಗುವುದಿಲ್ಲ.

4 /5

4. ರಿಲಯನ್ಸ್ ಜಿಯೋ ರೂ.999  In-Flight Connectivity Plan - 999 ರೂಗಳ ಈ ಪ್ಲಾನ್‌ನ ಸಿಂಧುತ್ವ ಕೂಡ 1 ದಿನವಾಗಿರಲಿದೆ. ಇದರಲ್ಲಿ ನೀವು 1 GB ಡೇಟಾ, 100 ಹೊರಹೋಗುವ ನಿಮಿಷಗಳ ಕರೆಗಳು ಮತ್ತು 100 SMS ಗಳನ್ನು ಪಡೆಯುತ್ತೀರಿ. ಇದರಲ್ಲಿ ಕೂಡ ಒಳಬರುವ ಕರೆಗಳ ಸೌಲಭ್ಯ ಇರುವುದಿಲ್ಲ.

5 /5

5. Airline to Airline ಯೋಜನೆಗಳಲ್ಲಿ ಬದಲಾವಣೆ ಇದೆ - ಈ ಯೋಜನೆಗಳನ್ನು ಕೊಳ್ಳುವ ಮೊದಲು ವೈಸ್ ಹಾಗೂ ಡೇಟಾ ಸೌಲಭ್ಯ ಇದೆಯೋ ಅಥವಾ ಇಲ್ಲವೋ ಎಂಬುದನ್ನೊಮ್ಮೆ ಗಮನಿಸಿ. ಯಾವ ಏರ್ಲೈನ್ ಕಂಪನಿಯ ಮುಂದೆ ಆಲ್ ಸರ್ವಿಸ್ ಎಂದು ಸೂಚಿಸಲಾಗಿದೆಯೋ. ಆ ಏರ್ಲೈನ್ ವಿಮಾನಗಳಲ್ಲಿ ನಿಮಗೆ ಡೇಟಾ, ಕಾಲಿಂಗ್ ಹಾಗೂ SMS ಸೌಲಭ್ಯಗಳು ಸಿಗಲಿವೆ. ಇಂಟರ್ನೆಟ್ ಸ್ಪೀಡ್ ಕುರಿತು ಹೇಳುವುದಾದರೆ, ಅದೂ ಕೂಡ  Airline to Airline ಭಿನ್ನವಾಗಿರಲಿದೆ.