Jasprit Bumrah : ಮೈದಾನದಲ್ಲಿ ಬುಮ್ರಾ ಸೌಂಡ್ ಮಾಡಿದ್ರೆ, ಪತ್ನಿ 'ಕ್ರೀಡಾ ಆಂಕರ್' ಆಗಿ ಹವಾ!

ಸಂಜನಾ ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರು ಹಂಚಿಕೊಂಡಿರುವ ಕೆಲವು ಫೋಟೋಗಳ ಬಗ್ಗೆ ಮಾಹಿತಿ ಇಲ್ಲಿದೆ. 

ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅದೃಷ್ಟದ ಬಾಗಿಲು ತೆರೆದಾಗಿದೆ. ಇಂದು ಬುಮ್ರಾ ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನದ ಬಗ್ಗೆಯೆ ಮಾತು ಕೇಳಿ ಬರುತ್ತಿವೆ. ಈ ಮಧ್ಯ ಜಸ್ಪ್ರೀತ್ ಬುಮ್ರಾ ಪತ್ನಿ, ಆಂಕರ್ ಸಂಜನಾ ಗಣೇಶನ್ ಕೂಡ ಸುದ್ದಿಯಲ್ಲಿದ್ದಾರೆ. ಸಂಜನಾ ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರು ಹಂಚಿಕೊಂಡಿರುವ ಕೆಲವು ಫೋಟೋಗಳ ಬಗ್ಗೆ ಮಾಹಿತಿ ಇಲ್ಲಿದೆ. 

1 /5

ರೋಹಿತ್ ಶರ್ಮಾ ಕೊರೊನಾ ಪಾಸಿಟಿವ್ ಆದ ಕಾರಣ ಜಸ್ಪ್ರೀತ್ ಬುಮ್ರಾಗೆ ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ ಒಲಿಯಿತು. ಈ ಪಂದ್ಯದಲ್ಲಿ ಬುಮ್ರಾ ಅದ್ಭುತ ಪ್ರದರ್ಶನ ತೋರಿದ್ದಾರೆ. ಬುಮ್ರಾ ಸ್ಟುವರ್ಟ್ ಬ್ರಾಡ್ ಹಾಕಿದ ಒಂದು ಓವರ್‌ನಲ್ಲಿ 35 ರನ್ ಗಳಿಸಿ ದಾಖಲೆ ಬರೆದರೆ, ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಬುಮ್ರಾ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಂ ಇಂಡಿಯಾಗಾಗಿ ಆಡುತ್ತಿದ್ದಾರೆ. ಮೈದಾನದಲ್ಲಿ ಬುಮ್ರಾ ಅದ್ಭುತ ಪ್ರದರ್ಶನ ತೋರಿದರೆ. ಅವರ ಪತ್ನಿ ಆ್ಯಂಕರಿಂಗ್ ಮೂಲಕ ಎಲ್ಲರ ಮನ ಸೆಳೆಯುತ್ತಿಯುತ್ತಿದ್ದಾರೆ.

2 /5

2014 ರಲ್ಲಿ ಎಂಟಿವಿಯ ಪ್ರಸಿದ್ಧ ರಿಯಾಲಿಟಿ ಶೋ 'ಸ್ಪ್ಲಿಟ್ಸ್‌ವಿಲ್ಲಾ'ದಲ್ಲಿ ಸಂಜನಾ ಗಣೇಶನ್ ಕೂಡ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮದ ಮಧ್ಯದಲ್ಲಿ ಗಾಯಗೊಂಡ ಕಾರಣ ಅವರು ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ತೊರೆದರು. ಸಂಜನಾ ಗಣೇಶನ್ 6 ಮೇ 1991 ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು.

3 /5

ಸಂಜನಾ ಗಣೇಶನ್ ಯೋಗ ಮತ್ತು ಜಿಮ್ ಇಷ್ಟಪಡುತ್ತಾರೆ. ಇದರೊಂದಿಗೆ, ಟ್ರಾವೆಲ್ ಜೊತೆಗೆ ಪುಸ್ತಕ ಓದುವುದು ಕೂಡ ತುಂಬಾ ಇಷ್ಟ. ಸಂಜನಾ ಪುಣೆಯ ಪ್ರಸಿದ್ಧ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

4 /5

ಸಂಜನಾ ಗಣೇಶನ್ ಪ್ರಸಿದ್ಧ ಆಂಕರ್. ಇವರು ಅನೇಕ ಟಿವಿ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದ್ದಾರೆ. ಇವುಗಳಲ್ಲಿ 'ಮ್ಯಾಚ್ ಪಾಯಿಂಟ್', 'ಚೀಕಿ ಸಿಂಗಲ್ಸ್' ಮುಂತಾದವುಗಳು. ಸಂಜನಾ 2019 ರ ವಿಶ್ವಕಪ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಆಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಸಂಜನಾ ಗಣೇಶನ್ ಕೂಡ ಭಾಗವಹಿಸಿದ್ದರು.

5 /5

ಜಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್ 2021 ರಲ್ಲಿ ವಿವಾಹವಾದರು. ಸಂಜನಾ ಸ್ಟಾರ್ ಸ್ಪೋರ್ಟ್ಸ್‌ ಮತ್ತು ಐಪಿಎಲ್‌ನಲ್ಲೂ ಆಂಕರ್ ಕಾಣಿಸಿಕೊಂಡಿದ್ದಾರೆ. ಇವರು ಬರೀ ಆಂಕರ್ ಮಾತ್ರ ಅಲ್ಲ, ಸಂಜನಾ 2013 ರಲ್ಲಿ ಫೆಮಿನಾ ಗಾರ್ಜಿಯಸ್ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ.