Jabardasth Ritu Chaudhary : ತಮ್ಮ ನಿರೂಪಣೆ ಮತ್ತು ನಟನೆ ಮೂಲಕ ಗಮನ ಸೆಳೆದಿರುವ ಈ ಸುಂದರಿಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಚಾರ ತಿಳಿದು ಈಕೆಯ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಲ್ಲದೆ, ಗಂಡನ ಫೊಟೋ ನೋಡಿ ಶಾಕ್ ಆಗಿದ್ದಾರೆ.. ಅಸಲಿಗೆ ಯಾರು ಈ ಆ್ಯಂಕರ್.. ಬನ್ನಿ ನೋಡೋಣ..
ತೆಲುಗು ಕಾಮಿಡಿ ಶೋ ಜಬರ್ದಸ್ತ್ ಮೂಲಕ ಅನೇಕ ಕಲಾವಿದರು ಗಮನ ಸೆಳೆದಿದ್ದಾರೆ. ಲೈಮ್ ಲೈಟ್ ಗೆ ಬಂದ ಹಲವರು ಈಗ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇನ್ನು ಕೆಲವರು ನಿರೂಪಕರಾಗಿ ಕಿರುತೆರೆಯನ್ನು ಆನಂದಿಸುತ್ತಿದ್ದಾರೆ.. ಈ ಪೈಕಿ ರಿತು ಚೌಧರಿ ಕೂಡ ಒಬ್ಬರು..
ರಿತು ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಗಮನ ಸೆಳೆದ ಚೆಲುವೆ.. ಈ ಶೋ ನಂತರ ಹಲವು ಸಿನಿಮಾ, ವೆಬ್ ಸಿರೀಸ್ ಹಾಗೂ ಹಲವು ಶೋಗಳಿಗೆ ಹೋಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವೇಳೆ.. ಇತ್ತೀಚಿಗೆ ಈ ಚೆಲುವೆ ದೊಡ್ಡ ಹಗರಣದಲ್ಲಿ ಸಿಕ್ಕಿಬಿದ್ದಿರುವುದಾಗಿ ವರದಿ ಆಗಿತ್ತು..
ಆಂಧ್ರಪ್ರದೇಶದ ವಿಜಯವಾಡ ಮತ್ತು ಇಬ್ರಾಹಿಂಪಟ್ಟಣ ಪ್ರದೇಶಗಳಿಗೆ ಸಂಬಂಧಿಸಿದ 700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಗರಣದಲ್ಲಿ ರಿತು ಚೌಧರಿ ಹೆಸರು ಕೂಡ ಹೊರಹೊಮ್ಮುತ್ತಿದ್ದು, ಇದೀಗ ಬೆಳ್ಳಿತೆರೆಯಲ್ಲಿ ಸಂಚಲನ ಮೂಡಿಸುತ್ತಿದೆ. ಈ ಭೂ ಹಗರಣದಲ್ಲಿ ಈಕೆಯೂ ಆರೋಪಿಯಾಗಿದ್ದಾಳೆ ಎಂದು ವರದಿಯಾಗಿದೆ.
700 ಕೋಟಿ ಮೌಲ್ಯದ ಈ ಭೂ ಹಗರಣದಲ್ಲಿ ಭಾಗಿಯಾದ ಚೀಮಕುರ್ತಿ ಶ್ರೀಕಾಂತ್ ಎಂಬುವವರನ್ನು ರಿತು ಚೌಧರಿ ಈ ಹಿಂದೆ ಮದುವೆಯಾಗಿದ್ದರು ಎಂದು ಗೊತ್ತಾಗಿದೆ. ಅಷ್ಟೇ ಅಲ್ಲ, ನೂರಾರು ಕೋಟಿ ಮೌಲ್ಯದ ಭೂಮಿಯನ್ನು ರಿತು ಚೌಧರಿ ಹೆಸರಿಗೆ ರಿಜಿಸ್ಟರ್ ಮಾಡಿಕೊಂಡಿದ್ದ ಶ್ರೀಕಾಂತ್... ಇದಕ್ಕೆ ಸಂಬಂಧಿಸಿದ ದಾಖಲೆಗಳೂ ವೈರಲ್ ಆಗುತ್ತಿವೆ.
ಇಲ್ಲಿ ಇನ್ನೊಂದು ತಿರುವು ಏನೆಂದರೆ, ರಿತು ಚೌಧರಿ ಅವರ ಫೋಟೋ, ಸಹಿ ಮತ್ತು ಬೆರಳಚ್ಚು ಈ ದಾಖಲೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದಲ್ಲದೆ, ಈ ಭೂಮಾಫಿಯಾದಲ್ಲಿ ಅನೇಕ ದೊಡ್ಡ ಮಂದಿ ಕೈವಾಡವಿದೆ ಎಂದು ವರದಿಯಾಗಿದೆ. ಅದರಲ್ಲೂ ವೈಎಸ್ ಜಗನ್ ಸಹೋದರ ವೈಎಸ್ ಸುನೀಲ್ ಹಾಗೂ ಜಗನ್ ಅವರ ಖಾಸಗಿ ಸಹಾಯಕ ನಾಗೇಶ್ವರ್ ರೆಡ್ಡಿ ಹೆಸರು ಕೂಡ ಚರ್ಚೆಗೆ ಗ್ರಾಸವಾಗಿದೆ.
ಈ ಹಗರಣದ ಬಗ್ಗೆ ಇತ್ತೀಚೆಗೆ ರಿತು ಚೌಧರಿ ಪ್ರತಿಕ್ರಿಯಿಸಿದ್ದಾರೆ. ಕಳೆದೊಂದು ವರ್ಷದಿಂದ ಶ್ರೀಕಾಂತ್ನಿಂದ ದೂರ ಉಳಿದಿದ್ದೇನೆ ಎಂದಿದ್ದಾಳೆ. ಈಗ ಅವನೊಂದಿಗೆ ಯಾವುದೇ ಸಂಬಂಧವಿಲ್ಲ... ಒಂಟಿಯಾಗಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಶ್ರೀಕಾಂತ್ ಜೊತೆಗಿರುವಾಗ ಸಹಿ ಮಾಡುವಂತೆ ಕೇಳಿದರೆ ಮಾಡಿದ್ದೆ. ಆದರೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನುಗಳ ಬಗ್ಗೆ ನನಗೆ ತಿಳಿದಿಲ್ಲ. ನನಗೆ ಗೊತ್ತಿಲ್ಲದ ವಿಷಯಗಳಿಗೆ ತನ್ನನ್ನು ಏಕೆ ಎಳೆದು ತರಲಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ರೀತು ಮಾಜಿ ಪತಿಯ ಫೊಟೋ ನೋಡಿ ಈಕೆಯ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ..