ಇದೊಂದು ತರಕಾರಿ ಸಾಕು ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಲು! ನೀವೂ ಬಳಸಿ ನೋಡಿ !

Vegetable for High Uric Acid: ಈ ತರಕಾರಿಯನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಬಳಸಿದರೆ, ದೇಹದಲ್ಲಿ ಸಂಗ್ರಹವಾಗಿರುವ ಯೂರಿಕ್ ಆಮ್ಲವನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. 

Vegetable for High Uric Acid : ದೇಹದಲ್ಲಿ ಯೂರಿಕ್ ಆಮ್ಲ  ಹೆಚ್ಚಳವಾದಂತೆ ನಮ್ಮ ಕೀಲುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.ಈ ಕಾರಣದಿಂದಾಗಿ, ನಮ್ಮ ಕೀಲುಗಳಲ್ಲಿ ಊತ ಕಂಡು ಬರುತ್ತದೆ. ಕೀಲುಗಳಲ್ಲಿ ಯಾವಾಗಲೂ ನೋವು ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಲೇ ನಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಸಾಮಾನ್ಯವಾಗಿರಬೇಕು. ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಯೂರಿಕ್ ಆಸಿಡ್ ಮಟ್ಟವನ್ನು ಸಾಮಾನ್ಯಗೊಳಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

 

1 /6

ಯೂರಿಕ್ ಆಸಿಡ್ ಪರಿಹಾರಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದ್ದರೂ,ಈ ಒಂದು ತರಕಾರಿ ಕೂಡಾ ಯುರಿಕ್ ಆಸಿಡ್ ಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಹೌದು, ನಾವಿಲ್ಲಿ ತೊಂಡೆಕಾಯಿ ಬಗ್ಗೆ ಮಾತನಾಡುತ್ತಿದ್ದೇವೆ. ತೊಂಡೆಕಾಯಿ ಯೂರಿಕ್ ಆಸಿಡ್‌ಗೆ ಶಾಶ್ವತ ಪರಿಹಾರ ಕಲ್ಪಿಸುತ್ತದೆ. 

2 /6

ಕೆಲವರು ತೊಂಡೆಕಾಯಿ ಅಂದ ತಕ್ಷಣ ಮೂಗು ಮುರಿಯುತ್ತಾರೆ. ಆದರೆ ಇದರಲ್ಲಿ ಫೈಬರ್ , ಕ್ಯಾಲ್ಸಿಯಂ, ವಿಟಮಿನ್‌ಗಳು  ಮತ್ತು ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಕಂಡುಬರುತ್ತವೆ.ಈ ಎಲ್ಲಾ ಅಂಶಗಳು ದೇಹದಲ್ಲಿ ಸಂಗ್ರಹವಾಗಿರುವ ಯೂರಿಕ್ ಆಮ್ಲವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. 

3 /6

ತೊಂಡೆಕಾಯಿಯಲ್ಲಿ ಕಂಡು ಬರುವ ಪೋಷಕಾಂಶಗಳು ನಮ್ಮ ಚಯಾಪಚಯವನ್ನು ಹೆಚ್ಚಿಸುವುದರ ಜೊತೆಗೆ ಯೂರಿಕ್ ಆಮ್ಲವನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.   

4 /6

ಈ ತರಕಾರಿಯು ಹೇರಳವಾದ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಯೂರಿಕ್ ಆಮ್ಲದ ಕಾರಣದಿಂದಾಗಿ ಕೀಲುಗಳು ಊದಿಕೊಂಡಿದ್ದರೆ,  ಈ ತರಕಾರಿಯನ್ನು ನಿತ್ಯ ಬಳಸಬೇಕು.ಇದರಿಂದ ನಿಮ್ಮ ಕೀಲುಗಳಲ್ಲಿನ ಊತದಿಂದ ಪರಿಹಾರ ಸಿಗುತ್ತದೆ.

5 /6

ತೊಂಡೆಕಾಯಿ ಪಲ್ಯವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಅಲ್ಲದೆ, ಯೂರಿಕ್ ಆಸಿಡ್ ಹೋಗಲಾಡಿಸಲು ಇದರ ನೀರನ್ನು ಕೂಡಾ ಕುಡಿಯಬಹುದು. ಇದಕ್ಕಾಗಿ ತೆಳುವಾದ ತುಂಡುಗಳಾಗಿ ಕತ್ತರಿಸಿ ರಾತ್ರಿ ಇಡೀ ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.  ಸೂಚನೆ 

6 /6

ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.