ITR Filing: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಈ 5 ತಪ್ಪು ಮಾಡಬೇಡಿ…

ಯಾವುದೇ ಸಂದರ್ಭದಲ್ಲಿ ನೀವಾಗಿಯೇ ಆದಾಯ ತೆರಿಗೆ ಸಲ್ಲಿಸುವಾಗ ತಪ್ಪುಗಳನ್ನು ಮಾಡಬಾರದು, ಒಂದು ವೇಳೆ ಮಾಡಿದರೆ ನಿಮಗೆ ತೊಂದರೆ ತಪ್ಪಿದ್ದಲ್ಲ.

ಇತ್ತೀಚಿನ ದಿನಗಳಲ್ಲಿ ತೆರಿಗೆದಾರರ ಆರ್ಥಿಕ ಜ್ಞಾನ ಹೆಚ್ಚಾಗಿರುವುದರಿಂದ ಅನೇಕರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ತಾವಾಗಿಯೇ ಸಲ್ಲಿಸುತ್ತಾರೆ. ಆದರೆ ಅನೇಕ ಬಾರಿ ಆದಾಯ ತೆರಿಗೆ ಸಲ್ಲಿಸುವ ವೇಳೆ ಸಮಸ್ಯೆಯುಂಟಾಗುತ್ತದೆ. ಇದು ನಷ್ಟಕ್ಕೂ ಕಾರಣವಾಗಬಹುದು. ಆದ್ದರಿಂದ ಯಾವುದೇ ಸಂದರ್ಭದಲ್ಲಿ ನೀವಾಗಿಯೇ ಆದಾಯ ತೆರಿಗೆ ಸಲ್ಲಿಸುವಾಗ ತಪ್ಪುಗಳನ್ನು ಮಾಡಬಾರದು. ಒಂದು ವೇಳೆ ಮಾಡಿದರೆ ನಿಮಗೆ ತೊಂದರೆ ತಪ್ಪಿದ್ದಲ್ಲ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಆದಾಯ ತೆರಿಗೆ ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ಸಲ್ಲಿಸುವಾಗ ನೀವು ಈ 5 ತಪ್ಪುಗಳನ್ನು ಮಾಡಲೇಬಾರದು.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ತೆರಿಗೆದಾರರು ತೆರಿಗೆ ಕಡಿತಗಾರನ TAN ಸಂಖ್ಯೆಯ ಸರಿಯಾದ ವಿವರಗಳನ್ನು 26AS ನಮೂನೆಯಲ್ಲಿ ಹಂಚಿಕೊಳ್ಳಬೇಕು. ಅಲ್ಲದೆ ಅವರು ಬಯಸಿದ ಆದಾಯ ಪಡೆಯಲು ತಮ್ಮ ಐಟಿಆರ್ ಫೈಲಿಂಗ್‌ನಲ್ಲಿ ಚಲನ್ ಸಂಖ್ಯೆ ಮತ್ತು BSR ಕೋಡ್‌ನ ವಿವರಗಳನ್ನು ಎಚ್ಚರಿಕೆಯಿಂದ ತುಂಬಬೇಕು.

2 /5

ಆದಾಯ ತೆರಿಗೆ ಇಲಾಖೆಯು ನಿಮ್ಮ ಬ್ಯಾಂಕ್ ಖಾತೆಗೆ ಮರುಪಾವತಿಯನ್ನು ಜಮಾ ಮಾಡುತ್ತದೆ. ಆದ್ದರಿಂದ ನೀವು ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಅಥವಾ MICR ಕೋಡ್‌ನಂತಹ ಸರಿಯಾದ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಕು. ಇಲ್ಲದಿದ್ದರೆ ಐಟಿಆರ್ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.

3 /5

ಐಟಿಆರ್ ಸಲ್ಲಿಸುವಾಗ ಬಂಡವಾಳ ಗಳಿಕೆಯ ವಿವರಗಳನ್ನು ಹಂಚಿಕೊಳ್ಳುವುದು ಅತ್ಯಂತ ತ್ರಾಸದಾಯಕ ಕೆಲಸಗಳಲ್ಲಿ ಒಂದಾಗಿದೆ. ತೆರಿಗೆದಾರರು ತಮ್ಮ ಹೂಡಿಕೆಗಳ ವಿವಿಧ ಹಿಡುವಳಿ ಅವಧಿಯ ವಿವರಗಳನ್ನು ವಿವಿಧ ಹೂಡಿಕೆ ಸಾಧನಗಳಲ್ಲಿ ಹಂಚಿಕೊಳ್ಳಬೇಕು. ವಿವಿಧ ದೀರ್ಘಾವಧಿಯ ಮತ್ತು ಅಲ್ಪಾವಧಿ ಬಂಡವಾಳ ಗಳಿಕೆಗಾಗಿ ವಿವಿಧ ತೆರಿಗೆ ದರಗಳು ಪ್ರಕ್ರಿಯೆಯನ್ನು ತೊಡಕಾಗಿಸುತ್ತದೆ. ಆದ್ದರಿಂದ ರಿಟರ್ನ್ಸ್ ಸಲ್ಲಿಸುವಾಗ ನೀವು ಸರಿಯಾದ ವಿವರಗಳನ್ನು ಒದಗಿಸಬೇಕಾಗುತ್ತದೆ.

4 /5

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವೇಳೆ ವೈಯಕ್ತಿಕ ವಿವರಗಳನ್ನು ನೀಡುವಾಗ ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಐಟಿಆರ್ ಫೈಲಿಂಗ್‌ಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆಯು ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಬಯಸಿದಲ್ಲಿ ನೀವು ಸರಿಯಾದ ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯನ್ನು ಹಂಚಿಕೊಳ್ಳಬೇಕು. ಆನ್‌ಲೈನ್ ಪೋರ್ಟಲ್ ಬಳಸಿ ನೀವು ಫೋನ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಸುಲಭವಾಗಿ ಅಪ್‌ಡೇಟ್ ಮಾಡಬಹುದು.

5 /5

ಒಂದು ವೇಳೆ ನೀವು ವಿದೇಶಿ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರೆ ಐಟಿಆರ್ ಸಲ್ಲಿಸುವಾಗ ನೀವು ಅದರ ವಿವರಗಳನ್ನು ಹಂಚಿಕೊಳ್ಳಬೇಕು. ವಿವರಗಳನ್ನು ಹಂಚಿಕೊಳ್ಳಲು ತೆರಿಗೆದಾರರು ಐಟಿಆರ್ 2ರ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.