ಚೇತನ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಇಶಾನ್ ನಾಯಕ

  • Jul 21, 2022, 19:08 PM IST

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ "ಜೇಮ್ಸ್".ಈ ಚಿತ್ರವನ್ನು ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಚೇತನ್ ಕುಮಾರ್ (ಬಹದ್ದೂರ್) ನಿರ್ದೇಶಿಸಿದ್ದರು.

1 /4

"ರೆಮೋ" ಚಿತ್ರದ ಬಿಡುಗಡೆ ನಂತರ ಈ ಚಿತ್ರ ಆರಂಭವಾಗಲಿದೆ. ಶೀಘ್ರದಲ್ಲೇ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಚೇತನ್ ಕುಮಾರ್ ತಿಳಿಸಿದ್ದಾರೆ.

2 /4

ಸದ್ಯದಲ್ಲೇ ಚೇತನ್ ಕುಮಾರ್ ನಿರ್ದೇಶನದ ಚಿತ್ರವೊಂದು ಆರಂಭವಾಗಲಿದೆ. "ರೆಮೋ" ಚಿತ್ರದ ಹಾಡುಗಳು, ಟೀಸರ್  ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿರುವ ಸುರದ್ರೂಪಿ ನಟ ಇಶಾನ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. 

3 /4

"ಜೇಮ್ಸ್" ನಂತರ ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು.ಆ ಕುತೂಹಲ ಕ್ಕೆ ಈಗ ತೆರೆ ಬಿದ್ದಿದೆ. 

4 /4

 " ಜೇಮ್ಸ್" ಸಿನಿಮಾವನ್ನು ಪುನೀತ್ ರಾಜಕುಮಾರ್  ಅವರ ಅಭಿಮಾನಿಗಳು ದೊಡ್ಡಮಟ್ಟದ ಯಶಸ್ಸು ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ.