ಇಶಾ ಅಂಬಾನಿ ಐಷಾರಾಮಿ ಬಂಗಲೆ 500 ಕೋಟಿಗೆ ಮಾರಾಟ!12 ಬೆಡ್‌ರೂಮ್‌, 24 ಸ್ನಾನಗೃಹಗಳಿರುವ ಈ ಮನೆಯ ಹೊಸ ಮಾಲೀಕ ಯಾರು?

ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ತಮ್ಮ ಬಂಗಲೆಯನ್ನು ಮಾರಾಟ ಮಾಡಿದ್ದಾರೆ. ಐಷಾರಾಮಿ ಬಂಗಲೆಯ ಡೀಲ್ 508 ಕೋಟಿ ರೂ.ಗೆ ನಡೆದಿದೆ.  

Isha Ambani House: ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ತಮ್ಮ ಬಂಗಲೆಯನ್ನು ಮಾರಾಟ ಮಾಡಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್ ನಲ್ಲಿರುವ ಐಷಾರಾಮಿ ಬಂಗಲೆಯ ಡೀಲ್ 508 ಕೋಟಿ ರೂ.ಗೆ ನಡೆದಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ತಮ್ಮ ಬಂಗಲೆಯನ್ನು ಮಾರಾಟ ಮಾಡಿದ್ದಾರೆ.ಅಮೆರಿಕದ ಲಾಸ್ ಏಂಜಲೀಸ್ ನಲ್ಲಿರುವ  ಐಷಾರಾಮಿ ಬಂಗಲೆಯ ಡೀಲ್ 508 ಕೋಟಿ ರೂ.ಗೆ ನಡೆದಿದೆ.

2 /8

ಇಶಾ ಅಂಬಾನಿಯವರ ಈ ಮನೆಯು ಲಾಸ್ ಏಂಜಲೀಸ್‌ನ ಬೆವರ್ಲಿ ಹಿಲ್ಸ್‌ನ ಮಧ್ಯದಲ್ಲಿದೆ. 38,000 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಇದು ಐಷಾರಾಮಿ ಬಂಗಲೆ.  

3 /8

ಇಶಾ ಅವರ ಬಂಗಲೆಯು 12 ಮಲಗುವ ಕೋಣೆಗಳು ಮತ್ತು 24 ಸ್ನಾನಗೃಹಗಳನ್ನು ಹೊಂದಿದೆ. ಇಂಡೋರ್ ಪಿಕಲ್‌ಬಾಲ್ ಕೋರ್ಟ್, ಜಿಮ್, ಸಲೂನ್ ಮತ್ತು ಸ್ಪಾ, 155 ಅಡಿ ಉದ್ದದ ಇನ್‌ಫಿನಿಟಿ ಪೂಲ್, ಔಟ್ ಡೋರ್ ಕಿಚನ್ ಮತ್ತು ಹಲವಾರು ಹುಲ್ಲುಹಾಸುಗಳಿವೆ. ಮನೆಯ ಹೊರಗೆ ವಿಶಾಲವಾದ ಉದ್ಯಾನವಿದೆ. ಮನೆ ಒಳಾಂಗಣ ಮತ್ತು ಹೊರಾಂಗಣ ಈಜುಕೊಳಗಳನ್ನು ಹೊಂದಿದೆ.

4 /8

ಇಶಾ ಅಂಬಾನಿ ಅವರ ಈ ಹೊಸ ಮನೆಯನ್ನು ಹಾಲಿವುಡ್ ಗಾಯಕಿ ಜೆನ್ನಿಫರ್ ಲೋಪೆಜ್ ಮತ್ತು ಅವರ ಪತಿ ಬೆನ್ ಅಫ್ಲೆಕ್ ಖರೀದಿಸಿದ್ದಾರೆ.ಈ ಐಷಾರಾಮಿ ಮನೆ ಖರೀದಿಸಲು ಜೆನ್ನಿಫರ್ 508 ಕೋಟಿ ರೂ.ವ್ಯಯಿಸಿದ್ದಾರೆ.   

5 /8

ಜೆನ್ನಿಫರ್ ಲೋಪೆಜ್ 2022 ರಲ್ಲಿ ಬೆನ್ ಅಫ್ಲೆಕ್ ಅವರನ್ನು ನಾಲ್ಕನೇ ವಿವಾಹವಾದರು. ಜೆನ್ನಿಫರ್ ಸುಮಾರು 3332 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಡ್ಯಾನ್ಸರ್ ಆಗಿ ವೃತ್ತಿ ಜೀವನ ಆರಂಭಿಸಿದ ಜೆನ್ನಿಫರ್ ಭಾರತ ಸೇರಿದಂತೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.  

6 /8

2018 ರಲ್ಲಿ,ಆನಂದ್ ಪಿರಾಮಲ್ ಅವರನ್ನು ವಿವಾಹವಾದ ಇಶಾ ಅಂಬಾನಿಗೆ ಅವರ ಮಾವ ಮುಂಬೈನಲ್ಲಿ ಸೀ ವ್ಯೂ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದರು. 3ಡಿ ಡೈಮಂಡ್ ಥೀಮ್ ವಿನ್ಯಾಸದಲ್ಲಿ ನಿರ್ಮಾಣವಾಗಿರುವ ಈ ಮನೆಯ ಬೆಲೆ ಕೂಡಾ ಕೋಟಿಗಳಲ್ಲಿದೆ. 

7 /8

ಇಶಾ ಅಂಬಾನಿ ಅವರ ಮನೆಯ ಹೆಸರು ಗುಲಿತಾ, ಇದು ವಜ್ರದ ಆಕಾರದಲ್ಲಿದೆ. 50 ಸಾವಿರ ಚದರ ಅಡಿ ವಿಸ್ತಾರವಾಗಿರುವ ಈ ಬಂಗಲೆಯ ವೆಚ್ಚ 500 ಕೋಟಿ ರೂ. ಈ ಮನೆಯು ಮೂರು ನೆಲಮಾಳಿಗೆಗಳನ್ನು ಹೊಂದಿದೆ.ಇದಲ್ಲದೇ ಊಟದ ಕೋಣೆ ಮತ್ತು ಹೊರಾಂಗಣ ಈಜುಕೊಳ, ರಂಗಮಂದಿರ, ಸಭಾಂಗಣ ಮುಂತಾದ ಎಲ್ಲಾ ಸೌಲಭ್ಯಗಳಿವೆ.   

8 /8

ಇಶಾ ಅಂಬಾನಿ ಮುಕೇಶ್ ಅಂಬಾನಿಯ  ಪುತ್ರಿ. ರಿಲಯನ್ಸ್ ರಿಟೇಲ್‌ನ ಸಂಪೂರ್ಣ ಜವಾಬ್ದಾರಿಯನ್ನು ಇಶಾ ಅಂಬಾನಿ ಹೊಂದಿದ್ದಾರೆ. ಇಶಾ ಅವರ ನೇತೃತ್ವದಲ್ಲಿ ರಿಲಯನ್ಸ್‌ನ  ರಿಟೇಲ್ ಕ್ಷೇತ್ರವು ನಿರಂತರವಾಗಿ ಬೆಳೆಯುತ್ತಿದೆ.