ಮೊಸರನ್ನು ಸಕ್ಕರೆ ಜೊತೆ ತಿನ್ನಬೇಕೇ ಅಥವಾ ಉಪ್ಪಿನ ಜೊತೆಗೆ ? ಆರೋಗ್ಯಕ್ಕೆ ಲಾಭ ಯಾವುದು ?

Curd with sugar or salt :ಕೆಲವರು ಉಪ್ಪನ್ನು ಬೆರೆಸಿ ಮೊಸರು ತಿನ್ನುತ್ತಾರೆ, ಇನ್ನು ಕೆಲವರಿಗೆ ಸಕ್ಕರೆ ಬೆರೆಸಿ ಮೊಸರು ತಿನ್ನುವ ಅಭ್ಯಾಸ ಇರುತ್ತದೆ.ನಾವಿಲ್ಲಿ ಮೊಸರು ಸೇವಿಸುವ ಆರೋಗ್ಯಕರ ವಿಧಾನದ ಬಗ್ಗೆ ತಿಳಿಸಲಿದ್ದೇವೆ.  

Curd with sugar or salt : ಮೊಸರು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಮೊಸರು ತಿನ್ನುವ ವಿಧಾನ ಸರಿಯೋ ತಪ್ಪೋ ಎಂದು ಯಾವತ್ತಾದರೂ ಯೋಚಿಸಿದ್ದೀರಾ?  ಕೆಲವರು ಉಪ್ಪನ್ನು ಬೆರೆಸಿ ಮೊಸರು ತಿನ್ನುತ್ತಾರೆ, ಇನ್ನು ಕೆಲವರಿಗೆ ಸಕ್ಕರೆ ಬೆರೆಸಿ ಮೊಸರು ತಿನ್ನುವ ಅಭ್ಯಾಸ ಇರುತ್ತದೆ. ಆದರೆ ಇವೆರಡರಲ್ಲಿ ಆರೋಗ್ಯಕರ ವಿಧಾನ ಯಾವುದು ಎಂದು ಕೇಳಿದರೆ ಹೆಚ್ಚಿನವರಲ್ಲಿ ಉತ್ತರ ಇರಲಿಕ್ಕಿಲ್ಲ. ನಾವಿಲ್ಲಿ ಮೊಸರು ಸೇವಿಸುವ ಆರೋಗ್ಯಕರ ವಿಧಾನದ ಬಗ್ಗೆ ತಿಳಿಸಲಿದ್ದೇವೆ.   

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆಯುರ್ವೇದದ ಪ್ರಕಾರ, ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿನ್ನುವುದರಿಂದ ಮೆದುಳಿಗೆ ಗ್ಲೂಕೋಸ್ ಪೂರೈಕೆ ಹೆಚ್ಚಾಗುತ್ತದೆ. ಅಲ್ಲದೆ, ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಮತ್ತು ದಿನವಿಡೀ ದೇಹದಲ್ಲಿ ನೀರಿನ ಪ್ರಮಾಣ ಹಾಗೆಯೇ ಉಳಿಯುತ್ತದೆ. ಸಕ್ಕರೆ ಮತ್ತು ಮೊಸರಿನ ಈ ಸಂಯೋಜನೆಯು ಹೊಟ್ಟೆಯಾ ಆರೋಗ್ಯಕ್ಕೂ ಒಳ್ಳೆಯದು. ಇದು ಪಿತ್ತ ದೋಷ, ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. 

2 /5

ಆದರೆ ಮೊಸರಿನೊಂದಿಗೆ ಸಕ್ಕರೆ ಬೆರೆಸಿ ತಿಂದರೆ ಅದರಿಂದ ಆಗುವ ಅನಾನುಕೂಲಗಳು ಕೂಡಾ ಇವೆ. ಇವೆರಡೂ ಹೆಚ್ಚಿನ ಕ್ಯಾಲೋರಿಯನ್ನು ಹೊಂದಿವೆ. ಇದರಿಂದಾಗಿ ದೇಹ ತೂಕ ಹೆಚ್ಚಾಗಬಹುದು. ಇದಲ್ಲದೆ, ಮಧುಮೇಹಿಗಳು ಮತ್ತು ಹೃದ್ರೋಗಿಗಳು ಮೊಸರು ಸಕ್ಕರೆಯನ್ನು ತಿನ್ನುವುದನ್ನು ನಿಷೇಧಿಸಲಾಗಿದೆ.

3 /5

ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಮೊಸರಿಗೆ ಸ್ವಲ್ಪ ಉಪ್ಪು ಸೇರಿಸಿ. ಉಪ್ಪಿಗೆ ಆಹಾರವನ್ನು ರುಚಿಯನ್ನಾಗಿ ಮಾಡುವ ಸಾಮರ್ಥ್ಯವಿದೆ. ಹಾಗೆಯೇ ಮೊಸರಿನಲ್ಲಿ ವಿಟಮಿನ್ ಸಿ ಇರುವುದರಿಂದ ಅಸಿಡಿಟಿ ಸಮಸ್ಯೆ ಇರುವವರು ಉಪ್ಪಿನೊಂದಿಗೆ ಸೇವಿಸಬೇಕು. ಇದಲ್ಲದೆ, ಮಧುಮೇಹಿಗಳು ಮೊಸರನ್ನು ಉಪ್ಪಿನೊಂದಿಗೆ ತಿನ್ನಬೇಕು.  ಇನ್ನು ರಾತ್ರಿ ಹೊತ್ತು ಮೊಸರು ಸೇವಿಸುತ್ತಿದ್ದರೆ, ಉಪ್ಪು ಬೆರೆಸಿ ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ 

4 /5

ಉಪ್ಪು ಬ್ಯಾಕ್ಟೀರಿಯಾ ವಿರೋಧಿ ಎಂದು ನಂಬಿರುವುದರಿಂದ, ಇದು ಮೊಸರಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಯಾವ ಬ್ಯಾಕ್ಟೀರಿಯಾಗಳು  ಪ್ರೋಬಯಾಟಿಕ್‌ಗಳಾಗಿ ಕಾರ್ಯನಿರ್ವಹಿಸುತ್ತದೆ ಆ ಬ್ಯಾಕ್ಟೀರಿಯಾಗಳನ್ನು ಉಪ್ಪು ಕೊಲ್ಲುತ್ತದೆ.  ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಇದು ಬಿಪಿಯನ್ನು ಹೆಚ್ಚಿಸುತ್ತದೆ. ಇದು ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಬುದ್ಧಿಮಾಂದ್ಯತೆ ಮತ್ತು ಇತರ ಹೃದಯ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

5 /5

ಮೊಸರು ತಿನ್ನಲು ಆರೋಗ್ಯಕರ ವಿಧಾನವೆಂದರೆ  ಸಾದಾ ಮೊಸರನ್ನು ತಿನ್ನುವುದು. ಹಾಗೆಯೇ ಇದರ ರುಚಿಯನ್ನು ಹೆಚ್ಚಿಸಬೇಕೆಂದರೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ. ಬೆಳಗಿನ ಉಪಾಹಾರದ ಸಮಯವಾಗಿದ್ದರೆ, ಮೊಸರು ಸಕ್ಕರೆಯನ್ನು ತಿನ್ನಿರಿ ಮತ್ತು ಮಧ್ಯಾಹ್ನ ಮತ್ತು ರಾತ್ರಿ ಮೊಸರು ಉಪ್ಪನ್ನು ತಿನ್ನಿರಿ ಎಂಬುದನ್ನು ನೆನಪಿನಲ್ಲಿಡಿ. ಇದಲ್ಲದೇ ಮಧುಮೇಹದ ಸಮಸ್ಯೆ ಇದ್ದರೆ ಮೊಸರಿಗೆ ಕಪ್ಪು ಉಪ್ಪು ಹಾಕಿ ತಿನ್ನಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.