IPPB: ನೀವೂ ಪೋಸ್ಟ್ ಆಫೀಸ್ ನಲ್ಲಿ SB ಖಾತೆ ಹೊಂದಿದ್ದೀರಾ? ಹಾಗಾದ್ರೆ ಏಪ್ರಿಲ್ 1 ರಿಂದ ಇದನ್ನು ನೆನಪಿಡಿ

IPPB Transaction Charge: 1 ಏಪ್ರಿಲ್ 2021 ರಿಂದ ಹಣ ಠೇವಣಿ ಅಥವಾ ಹಣ ಹಿಂಪಡೆಯುವುದರ ಜೊತೆಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AEPS)ಗೆ ಶುಲ್ಖ ವಿಧಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಿರ್ಧರಿಸಿದೆ.

ನವದೆಹಲಿ: IPPB Transaction Charge - ಒಂದು ವೇಳೆ ನೀವೂ ಕೂಡ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB)ನಲ್ಲಿ ನಿಮ್ಮ ಖಾತೆ ತೆರೆದಿದ್ದರೆ, ಈ ಸುದ್ದಿಯನ್ನೊಮ್ಮೆ ತಪ್ಪದೆ ಓದಿ. 1 ಏಪ್ರಿಲ್ 2021 ರಿಂದ ಹಣ ಠೇವಣಿ ಅಥವಾ ಹಣ ಹಿಂಪಡೆಯುವುದರ ಜೊತೆಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AEPS)ಗೆ ಶುಲ್ಖ ವಿಧಿಸಲು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ನಿಮ್ಮ ಫ್ರೀ ಲಿಮಿಟ್ ಮುಕ್ತಾಯಗೊಂಡ ಬಳಿಕ ಮಾತ್ರ ನಿಮ್ಮಿಂದ ಈ ಶುಲ್ಕ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ, ಒಂದು ವೇಳೆ ನಿಮ್ಮ ಬಳಿ ಉಚಿತ ಟ್ರಾನ್ಸಾಕ್ಶನ್ ಲಿಮಿಟ್ ಮುಗಿದು ಹೋದರೆ ಮಾತ್ರ ನೀವು ಈ ಶುಲ್ಕ ಪಾವತಿಸಬೇಕು.

 

ಇದನ್ನೂ ಓದಿ- Bank Merger - ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಬೇಸಿಕ್ ಸೇವಿಂಗ್ ಅಕೌಂಟ್ - ಒಂದು ವೇಳೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ನೀವು ಬೇಸಿಕ್ ಸೇವಿಂಗ್ಸ್ ಅಕೌಂಟ್ ಹೊಂದಿದ್ದರೆ, ನೀವು ತಿಂಗಳಲ್ಲಿ 4 ಬಾರಿ ಉಚಿತ ಹಣ ಹಿಂಪಡೆಯಬಹುದು. ಅದಾದ ಬಳಿಕ ನೀವು ಪ್ರತಿ ಟ್ರಾನ್ಸಾಕ್ಶನ್ ಮೇಲೆ ರೂ.25 ಅಥವಾ ನಿಮ್ಮ ವಹಿವಾಟಿನ ಒಟ್ಟು ಮೊತ್ತದ ಶೇ.0.50ರಷ್ಟು ಶುಲ್ಕ ಪಾವತಿಸಬೇಕು. ಆದರೆ ಇದರಲ್ಲಿ ಹಣ  ಠೇವಣಿ ಮಾಡಲು ಯಾವುದೇ ರೀತಿಯ ಚಾರ್ಜ್ ವಿಧಿಸಲಾಗುವುದಿಲ್ಲ.

2 /4

2. ಸೇವಿಂಗ್ ಅಥವಾ ಕರೆಂಟ್ ಅಕೌಂಟ್ - ಪೋಸ್ಟ್ ಆಫೀಸ್ ನಲ್ಲಿ ಒಂದು ವೇಳೆ ನೀವು ಉಳಿತಾಯ ಖಾತೆ (ಬೇಸಿಕ್ ಸೇವಿಂಗ್ ಅಕೌಂಟ್ ಹೊರತುಪಡಿಸಿ) ಅಥವಾ ಕರೆಂಟ್ ಅಕೌಂಟ್ ಹೊಂದಿದ್ದರೆ. ನಿಮಗೆ ಒಂದು ತಿಂಗಳ ಅವಧಿಯಲ್ಲಿ ರೂ.25,000 ವರೆಗೆ ಉಚಿತವಾಗಿ ವಿಥ್ ಡ್ರಾ ಮಾಡಬಹುದು. ಈ ಲಿಮಿಟ್ ದಾಟಿದ ಬಳಿಕ ನೀವು ಹಿಂಪಡೆಯುವ ಒಟ್ಟು ಹಣದ ಶೇ.0.50 ರಷ್ಟು ಹಣವನ್ನು ಶುಲ್ಕವಾಗಿ ಪಾವತಿಸಬೇಕು ಅಥವಾ ರೂ.25 ಪ್ರತಿ ವಹಿವಾಟಿಗೆ ಪಾವತಿಸಬೇಕು. ಒಂದು ವೇಳೆ ನೀವು ಈ ಖಾತೆಯಲ್ಲಿ ನಾನಾ ಡೆಪಾಸಿಟ್ ಮಾಡಿದರೂ ಕೂಡ ಅದಕ್ಕೂ ಲಿಮಿಟ್ ಇದೆ. ಪ್ರತಿ ತಿಂಗಳು ನೀವು ಉಚಿತವಾಗಿ ರೂ.10000ವರೆಗೆ ಉಚಿತ ಡೆಪಾಸಿಟ್ ಮಾಡಬೇಕು. ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ಡಿಪಾಸಿಟ್ ಮಾಡಿದಾಗ ಅದಕ್ಕೂ ಕೂಡ ಮೇಲೆ ಸೂಚಿಸಲಾಗಿರುವಂತೆ ಶುಲ್ಕ ಪಾವತಿಸಬೇಕು

3 /4

3. AEPS ವಹಿವಾಟು - ಆಧಾರ್ ಆಧಾರಿಗ AEPS ವಹಿವಾಟುಗಳನ್ನು ನೀವು ಇಂಡಿಯಾ ಪೋಸ್ಟ್ ಆಫೀಸ್ ನಲ್ಲಿ ಅನಿಯಮಿತವಾಗಿ ಉಚಿತವಾಗಿ ಮಾಡಬಹುದು. - ನಾನ್-AEPS ನೆಟ್ವರ್ಕ್ ಮೇಲೆ ತಿಂಗಳಿಗೆ 3 ಉಚಿತ ವಹಿವಾಟು ನಡೆಸಬಹುದು. ಇದರಲ್ಲಿ ಹಣ ಜಮೆ, ಹಿಂಪಡೆಯುವಿಕೆ ಮಿನಿ ಸ್ಟೇಟ್ಮೆಂಟ್ ಕೂಡ ಶಾಮೀಲಾಗಿವೆ. - ಉಚಿತ ಲಿಮಿಟ್ ದಾಟಿದ ಬಳಿಕ ಹಣ ಠೇವಣಿಗೆ ರೂ.20 ಹಾಗೂ ಹಣ ಹಿಂಪಡೆಯಲು ರೂ.20 ಪಾವತಿಸಬೇಕು. - ಮಿನಿ ಸ್ಟೇಟ್ಮೆಂಟ್ ಪಡೆಯಲು ರೂ.5 ಪಾವತಿಸಬೇಕು. ಉಚಿತ ಲಿಮಿಟ್ ದಾಟಿದ ಬಳಿಕ ಫಂಡ್ ಟ್ರಾನ್ಸ್ಫರ್ ಮಾಡಿದಾಗ ಟ್ರಾನ್ಸ್ಫರ್ ಮಾಡಲಾಗಿರುವ ಒಟ್ಟು ಮೊತ್ತದ್ದ ಶೇ.1ರಷ್ಟು ಮತ್ತು ಗರಿಷ್ಟ ರೂ.20 ಪಾವತಿಸಬೇಕು. - ಯಾವುದೇ ಶುಲ್ಕಗಳು ಜಿಎಸ್ಟಿ ಒಳಗೊಂಡಿಲ್ಲ. ಅದನ್ನು ನೀವು ಪ್ರತ್ಯೇಕ ಭರಿಸಬೇಕು.

4 /4

4. ಈ ಸೌಲಭ್ಯ ಸಿಗುತ್ತದೆ - ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್ ATM ಕಾರ್ಡ್, ಫಂಡ್ ಟ್ರಾನ್ಸ್ಫರ್, ಬಿಲ್ ಪೇಮೆಂಟ್, ರಿಚಾರ್ಜ್, ನೆಟ್ ಬ್ಯಾಂಕಿಂಗ್ ಗಳಂತಹ ಆವಶ್ಯಕ ಸೌಕರ್ಯಗಳನ್ನು ಒದಗಿಸುತ್ತದೆ.