ವಾರ್ಷಿಕವಾಗಿ ಕೇವಲ 25,000 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಈ ವಿಶೇಷ ವ್ಯವಹಾರವನ್ನು ಪ್ರಾರಂಭಿಸಬಹುದು
ಬೆಂಗಳೂರು : ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಅದ್ಭುತವಾದ ಲಾಭವನ್ನು ಗಳಿಸುವ ವ್ಯವಹಾರದ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ನೀವು ವಾರ್ಷಿಕವಾಗಿ ಕೇವಲ 25,000 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಈ ವಿಶೇಷ ವ್ಯವಹಾರವನ್ನು ಪ್ರಾರಂಭಿಸಬಹುದು. ಇದರ ಮೂಲಕ ಮಾಸಿಕ 1.75 ಲಕ್ಷದವರೆಗೆ ಆದಾಯವನ್ನು ಗಳಿಸಬಹುದು. .
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಇತ್ತೀಚಿನ ದಿನಗಳಲ್ಲಿ ಮೀನು ಸಾಕಣೆಯ ವ್ಯವಹಾರವು ಬಹಳ ಜನಪ್ರಿಯವಾಗುತ್ತಿದೆ. ಸರಕಾರದ ನೆರವಿನಿಂದ ಆರಂಭವಾದ ಈ ವ್ಯಾಪಾರದಿಂದ 2 ಲಕ್ಷಕ್ಕೂ ಅಧಿಕ ಆದಾಯ ಬರುತ್ತದೆ. ಈ ವ್ಯಾಪಾರಕ್ಕಾಗಿ, ಕೇಂದ್ರ ಸರಕಾರವೂ ಹಲವು ಸೌಲಭ್ಯಗಳನ್ನು ನೀಡುತ್ತಿರುವುದು ಗಮನಿಸಬೇಕಾದ ಸಂಗತಿ.
ನೀವು ಮೀನು ಸಾಕಾಣಿಕೆ ವ್ಯವಹಾರವನ್ನು ಮಾಡುತ್ತಿದ್ದರೆ ಅಥವಾ ಅದನ್ನು ಪ್ರಾರಂಭಿಸಲು ಬಯಸಿದರೆ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಇದರಿಂದ ನಿಮಗೆ ಬಂಪರ್ ಲಾಭ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಯೋಫ್ಲಾಕ್ ಟೆಕ್ನಿಕ್ ಮೀನು ಸಾಕಣೆಗೆ ಬಹಳ ಪ್ರಸಿದ್ಧವಾಗಿದೆ.
ಬಯೋಫ್ಲೋಕ್ ಟೆಕ್ನಿಕ್ ಮೂಲಕ ಮೀನು ಸಾಕಾಣಿಕೆಯ ವ್ಯವಹಾರವು ತುಂಬಾ ಸುಲಭವಾಗುತ್ತದೆ. ಇದರಲ್ಲಿ, ಮೀನುಗಳನ್ನು ದೊಡ್ಡ ತೊಟ್ಟಿಗಳಲ್ಲಿ ಹಾಕಲಾಗುತ್ತದೆ. ಈ ತೊಟ್ಟಿಗಳಿಗೆ ನೀರು ಹಾಕುವುದು, ತೆಗೆಯುವುದು, ಆಮ್ಲಜನಕ ಪೂರೈಸುವುದು ಇತ್ಯಾದಿಗಳಿಗೆ ಉತ್ತಮ ವ್ಯವಸ್ಥೆ ಮಾಡಲಾಗುತ್ತದೆ. ಬಯೋಫ್ಲೋಕ್ ಬ್ಯಾಕ್ಟೀರಿಯಾವು ಮೀನಿನ ಮಲವನ್ನು ಪ್ರೋಟೀನ್ ಆಗಿ ಪರಿವರ್ತಿಸುತ್ತದೆ. ಇದನ್ನೇ ಮೀನು ಮತ್ತೆ ತಿನ್ನುತ್ತದೆ. ಇದರಿಂದ ಮೀನಿಗೆ ನೀಡುವ ಫೀಡ್ ಖರ್ಚು ಕೂಡಾ ಕಡಿಮೆಯಾಗುತ್ತದೆ. ನೀರು ಕೊಳೆಯಾಗದಂತೆ ಇದು ತಡೆಯುತ್ತದೆ.
ಮೀನು ಸಾಕಣೆಯು ವ್ಯವಹಾರದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಸರ್ಕಾರವೂ ಮೀನುಗಾರಿಕೆಗೆ ಉತ್ತೇಜನ ನೀಡುತ್ತಿದೆ. ಈ ಉದ್ಯಮಕ್ಕೆ ಸರ್ಕಾರದಿಂದ ಮೀನುಗಾರರಿಗೆ ವಿಮಾ ಯೋಜನೆ ಮತ್ತು ಸಹಾಯಧನವೂ ದೊರೆಯುತ್ತದೆ.