Investment Tips: ವರ್ಷಾಂತ್ಯದೊಳಗೆ ಈ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಿ, 2023ರಲ್ಲಿ ಜಬರ್ದಸ್ತ್ ಲಾಭ ಪಡೆಯಿರಿ

Investment Tips: ನೀವೂ ಕೂಡ ಒಳ್ಳೆಯ ಮತ್ತು ಸುರಕ್ಷಿತ ಯೋಜನೆಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ ಒಳ್ಳೆಯ ಆದಾಯ ಗಳಿಸಬೇಕು ಎಂದಾದಲ್ಲಿ ಈ ಸುದ್ದಿ ನಿಮಗಾಗಿ. ಏಕೆಂದರೆ ಇಂದು ನಾವು ನಿಮಗೆ ಅಂತಹ ಕೆಲವು ಹೂಡಿಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, 
 

Investment Tips: ನೀವೂ ಕೂಡ ಒಳ್ಳೆಯ ಮತ್ತು ಸುರಕ್ಷಿತ ಯೋಜನೆಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ ಒಳ್ಳೆಯ ಆದಾಯ ಗಳಿಸಬೇಕು ಎಂದಾದಲ್ಲಿ ಈ ಸುದ್ದಿ ನಿಮಗಾಗಿ. ಏಕೆಂದರೆ ಇಂದು ನಾವು ನಿಮಗೆ ಅಂತಹ ಕೆಲವು ಹೂಡಿಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ವರ್ಷಾಂತ್ಯದ ಮೊದಲು ನೀವು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಹೊಸ ವರ್ಷದಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು. ಇದಕ್ಕಾಗಿ ಸರ್ಕಾರಿ ಯೋಜನೆಗಳಲ್ಲಿ ನೀವು ಈ ಹೂಡಿಕೆಯನ್ನು ಮಾಡಬೇಕು. ಬನ್ನಿ ವಿಸ್ತೃತವಾಗಿ ತಿಳಿದುಕೊಳ್ಳೋಣ,

 

ಇದನ್ನೂ ಓದಿ-Retirement ಬಳಿಕ 1 ಕೋಟಿ, ತಿಂಗಳಿಗೆ 70 ಸಾವಿರ ಪೆನ್ಶನ್ ಒದಗಿಸುತ್ತದೆ ಸರ್ಕಾರದ ಈ ಯೋಜನೆ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಒಂದು ವೇಳೆ ನೀವೂ ಕೂಡ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ಈ ಯೋಜನೆಯಡಿಯಲ್ಲಿ, ನೀವು ಅನೇಕ ಸೌಲಭ್ಯಗಳೊಂದಿಗೆ ಶೇ.7.6% ರಷ್ಟು ಆದಾಯವನ್ನು ಪಡೆಯಬಹುದು. ನಿಮ್ಮ ಮಗಳಿಗೆ 21 ವರ್ಷಗಳು ತುಂಬಿದಾದ ನೀವು ಈ ಮೊತ್ತವನ್ನು ಹಿಂಪಡೆಯಬಹುದು.  

2 /5

2. ಈಗ ಸರ್ಕಾರದ ಇನ್ನೊಂದು ಮಹತ್ವದ ಯೋಜನೆಯಾಗಿರುವ ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆ (ಎಂಐಎಸ್) ಬಗ್ಗೆ ತಿಳಿದುಕೊಳ್ಳೋಣ. ಇದರಲ್ಲಿ ನೀವು ಶೇ. 6.60 ರಷ್ಟು ಆದಾಯವನ್ನು ಪಡೆಯಬಹುದು. ಅಲ್ಲದೆ ಇದು ಸುರಕ್ಷಿತ ಆದಾಯವನ್ನು ನೀಡುತ್ತದೆ. ಇದರಲ್ಲಿ ನೀವು 1,000 ರೂ.ನಿಂದ 9 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.  

3 /5

3. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಕುರಿತು ಹೇಳುವುದಾದರೆ, ಇದು ನಿಮಗೆ ಉತ್ತಮ ಆದಾಯವನ್ನು ನೀಡುತ್ತದೆ. ಇದರ ಅಡಿಯಲ್ಲಿ ನೀವು ನಿಮ್ಮ ವೃದ್ಧಾಪ್ಯವನ್ನು ನೀವು ಸುರಕ್ಷಿತವಾಗಿಸಬಹುದು. ಈ ಹೂಡಿಕೆಯೊಂದಿಗೆ, ನೀವು ನಿವೃತ್ತಿಯ ನಂತರದ ವೆಚ್ಚಗಳನ್ನು ನಿಭಾಯಿಸಬಹುದು. ಇದರಲ್ಲಿ ಪ್ರತಿ ತಿಂಗಳು ಪಿಂಚಣಿ ಕೂಡ ಸಿಗುತ್ತದೆ. ಇದರಲ್ಲಿ, ನೀವು NPS-1 ಮತ್ತು NPS-2 ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.  

4 /5

4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಕೂಡ ಇಂತಹುದೇ ಒಂದು ಸರ್ಕಾರಿ ಯೋಜನೆಯಾಗಿದೆ. ಇದರಲ್ಲಿ ನೀವು ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬೇಕು. ನೀವು ರೂ.1,000 ರಿಂದ ಪ್ರಾರಂಭವಾಗುವ ಯಾವುದೇ ಮೊತ್ತವನ್ನು ಇದರಲ್ಲಿ ಹೂಡಿಕೆ ಮಾಡಬಹುದು. ಇದರ ಹೂಡಿಕೆಯ ಅವಧಿಯು 5 ವರ್ಷಗಳವರೆಗೆ ಇರುತ್ತದೆ.  

5 /5

5.ಭಾರತದಲ್ಲಿ ಅತ್ಯಂತ ಜನಪ್ರಿಯ ಹೂಡಿಕೆ ಆಯ್ಕೆಯಾಗಿರುವ ಸಾರ್ವಜನಿಕ ಭವಿಷ್ಯ ನಿಧಿ (PPF) ಕುರಿತು ಹೇಳುವುದಾದರೆ. ಇದು ವಾರ್ಷಿಕವಾಗಿ ಶೇ.7.1ರಷ್ಟು ಜಬರ್ದಸ್ತ್ ಆದಾಯ ನೀಡುವ ಒಂದು ಸರ್ಕಾರಿ ಯೋಜನೆಯಾಗಿದೆ.  ಇದರಲ್ಲಿ ನೀವು ಒಂದು ಹಣಕಾಸು ವರ್ಷದಲ್ಲಿ 500-1.5 ಲಕ್ಷ ರೂ.ಗಳವರೆಗೆ ಮುಂದಿನ ವರ್ಷಗಳ ಕಾಲ ಹೂಡಿಕೆಯನ್ನು ಮಾಡಬಹುದು.