RD ಯಲ್ಲಿ ಹೂಡಿಕೆ ಮಾಡುತ್ತಿದ್ದೀರಾ ? ನಿಮ್ಮ ಒಂದೇ ತಪ್ಪು ದೊಡ್ಡ ನಷ್ಟವನ್ನು ಉಂಟು ಮಾಡಬಹುದು

ಮಾಸಿಕ ಠೇವಣಿಯ ಕಂತು ಮತ್ತು ದಿನಾಂಕವನ್ನು ಆರ್‌ಡಿ ಖಾತೆ ತೆರೆಯುವ ಸಮಯದಲ್ಲಿ ನಿರ್ಧರಿಸಲಾಗುತ್ತದೆ. ಇದರೊಂದಿಗೆ, ಬ್ಯಾಂಕ್ ಕೂಡ ಬಡ್ಡಿದರಗಳನ್ನು ನಿಗದಿಪಡಿಸುತ್ತದೆ

ನವದೆಹಲಿ : ನೀವು ಬ್ಯಾಂಕಿನ ಆರ್‌ಡಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ, ಕೆಲವು ಪ್ರಮುಖ ವಿಷಯಗಳನ್ನು ತಿಳಿದು ಕೊಂಡಿರಬೇಕು. ನಿಮ್ಮಿಂದಾಗುವ ಒಂದು ತಪ್ಪು ಲಾಭದ ಬದಲು ನಷ್ಟವನ್ನು ಉಂಟುಮಾಡಬಹುದು. ಬ್ಯಾಂಕ್‌ಗಳ ಆರ್‌ಡಿ ಸಣ್ಣ ಉಳಿತಾಯವು ಉತ್ತಮ ಆಯ್ಕೆಯಾಗಿದೆ.  ಇದರಲ್ಲಿ ಹಣವು ಸುರಕ್ಷಿತವಾಗಿರುತ್ತದೆ ಅಲ್ಲದೆ, ನೀವು ಗ್ಯಾರಂಟಿಯ ಲಾಭವನ್ನು ಪಡೆಯುತ್ತೀರಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಯಾವಾಗಲೂ ನಿಗದಿತ ದಿನಾಂಕದಂದೇ  RD ಯಲ್ಲಿ ಹಣ ಜಮಾ ಮಾಡಿ. ಇದರಲ್ಲಿ ವಿಫಲವಾದರೆ  ದಂಡವನ್ನು ಪಾವತಿಸಬೇಕಾಗಬಹುದು. ಪ್ರತಿ ಬ್ಯಾಂಕ್ ಈ ಬಗ್ಗೆ ವಿಭಿನ್ನ ನಿಯಮಗಳನ್ನು ಹೊಂದಿದೆ. ಎಸ್‌ಬಿಐನಲ್ಲಿ, ನೀವು 5 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯವರೆಗೆ ಆರ್‌ಡಿ ಮಾಡಿದ್ದರೆ ಮತ್ತು ಕಂತುಗಳನ್ನು ಸಮಯಕ್ಕೆ ಜಮಾ ಮಾಡದಿದ್ದರೆ, 100 ರೂಪಾಯಿಗಳಿಗೆ 1.50 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.  ಆರ್‌ಡಿ 5 ವರ್ಷಕ್ಕಿಂತ ಹೆಚ್ಚಿದ್ದರೆ, ಈ ದಂಡವು ಪ್ರತಿ 100 ರೂಪಾಯಿಗೆ 2 ರೂ.ಆಗಿರುತ್ತದೆ. ಇನ್ನು ಸತತ 6 ಕಂತುಗಳನ್ನು ಜಮಾ ಮಾಡದಿದ್ದರೆ, ಬ್ಯಾಂಕ್ ಖಾತೆಯನ್ನು ಮುಚ್ಚುತ್ತದೆ ಮತ್ತು ಉಳಿದ ಮೊತ್ತವನ್ನು ಖಾತೆದಾರರಿಗೆ ನೀಡುತ್ತದೆ.

2 /4

ಮಾಸಿಕ ಠೇವಣಿಯ ಕಂತು ಮತ್ತು ದಿನಾಂಕವನ್ನು ಆರ್‌ಡಿ ಖಾತೆ ತೆರೆಯುವ ಸಮಯದಲ್ಲಿ ನಿರ್ಧರಿಸಲಾಗುತ್ತದೆ. ಇದರೊಂದಿಗೆ, ಬ್ಯಾಂಕ್ ಕೂಡ ಬಡ್ಡಿದರಗಳನ್ನು ನಿಗದಿಪಡಿಸುತ್ತದೆ. ಬ್ಯಾಂಕಿನೊಂದಿಗೆ, ಗ್ರಾಹಕನು ತನ್ನ ಅನುಕೂಲಕ್ಕೆ ತಕ್ಕಂತೆ, ಎಷ್ಟು ವರ್ಷಗಳವರೆಗೆ RD ಮಾಡುತ್ತಾನೆ ಎನ್ನುವುದನ್ನು ನಿರ್ಧರಿಸುತ್ತಾನೆ. ಎಸ್‌ಬಿಐನ ಆರ್‌ಡಿ ಯೋಜನೆಯ ಬಗ್ಗೆ ಹೇಳುವುದಾದರೆ ಇದು  ಕನಿಷ್ಠ 1 ವರ್ಷ ಮತ್ತು ಗರಿಷ್ಠ 10 ವರ್ಷಗಳವರೆಗೆ ಇರುತ್ತದೆ. 

3 /4

ಆರ್‌ಡಿಯ ದಂಡವನ್ನು ತಪ್ಪಿಸಲು ಅತ್ಯಂತ ನೇರ ಮತ್ತು ಸರಳ ಮಾರ್ಗವೆಂದರೆ ನಿಗದಿತ ದಿನಾಂಕದಂದು ಕಂತನ್ನು ಜಮಾ ಮಾಡುವುದು. ಇದಕ್ಕಾಗಿ, ನೀವು ಬ್ಯಾಂಕಿನ ಆಟೋ ಡೆಬಿಟ್ ಸೌಲಭ್ಯವನ್ನು ಬಳಸಬಹುದು. ಇದರಲ್ಲಿ, ನಿಮ್ಮ ಉಳಿತಾಯ ಖಾತೆಯಿಂದ ಪ್ರತಿ ತಿಂಗಳು ಆರ್‌ಡಿ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಆದರೆ, ಕಂತಿನ ದಿನಾಂಕದಂದು ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರಬೇಕು ಎನ್ನುವುದು ನೆನಪಿರಲಿ. 

4 /4

ಆರ್‌ಡಿ ಖಾತೆಯಿದ್ದರೆ ಅಗತ್ಯವಿದ್ದಾಗ ಸಾಲ ಅಥವಾ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು. RD ಯ ಮುಕ್ತಾಯದ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ, ಖಾತೆದಾರರು ನಮೂನೆ 15G/15H ಸಲ್ಲಿಸುವ ಮೂಲಕ ತೆರಿಗೆ ವಿನಾಯಿತಿ ಪಡೆಯಬಹುದು.