ವಾರ್ಷಿಕವಾಗಿ ಕೋಟಿ ಕೋಟಿ ರೂ. ಗಳಿಸುವ ಕೆ.ಎಲ್.ರಾಹುಲ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್. ರಾಹುಲ್(KL Rahul) ಇತ್ತೀಚಿನ ದಿನಗಳಲ್ಲಿ ಭರ್ಜರಿ ಮಿಂಚುತ್ತಿದ್ದಾರೆ. ಆಂಗ್ಲರ ವಿರುದ್ಧ ಭರ್ಜರಿ ಶತಕ ಸಿಡಿಸಿದ ರಾಹುಲ್ ಟೀಂ ಇಂಡಿಯಾ(Team India) ಸ್ಮರಣೀಯ ಗೆಲುವು ದಾಖಲಿಸಲು ನೆರವಾದರು.
ಕೆ.ಎಲ್.ರಾಹುಲ್ ಭಾರತ ಏಕದಿನ ತಂಡದ ಪ್ರಮುಖ ಭಾಗವಾಗಿದ್ದು, ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರೂ ಆಗಿದ್ದಾರೆ. ಈ ಸ್ಥಾನದಿಂದ ರಾಹುಲ್ ವಾರ್ಷಿಕ 11 ಕೋಟಿ ರೂ. ಗಳಿಸುತ್ತಿದ್ದಾರೆ. ಬಿಸಿಸಿಐ(BCCI) ವಾರ್ಷಿಕ ಕಾಂಟ್ರ್ಯಾಕ್ಟ್ ನಲ್ಲಿ ರಾಹುಲ್ ಎ ಗ್ರೇಡ್ ಹೊಂದಿದ್ದಾರೆ. ಹೀಗಾಗಿ ಅವರಿಗೆ ವಾರ್ಷಿಕ 5 ಕೋಟಿ ರೂ. ವೇತನ ಸಿಗುತ್ತದೆ. ಕೋಟಿ ಕೋಟಿ ರೂ. ಗಳಿಸುವ ರಾಹುಲ್ ಐಷಾರಾಮಿ ಜೀವನ(Luxurious Lifestyle) ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಕೆ.ಎಲ್.ರಾಹುಲ್ ಬೆಂಗಳೂರಿನಲ್ಲಿ ಸನ್ ಡೆಕ್ ಹೊಂದಿರುವ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಈ ಸ್ಥಳದಲ್ಲಿ ರಾಹುಲ್ ವರ್ಕೌಟ್ ಕೂಡ ನಡೆಸುತ್ತಿದ್ದಾರೆ. ಇದು ಆಧುನಿಕ ಶೈಲಿ ಮತ್ತು ಅತ್ಯುತ್ತಮ ಪೀಠೋಪಕರಣಗಳೊಂದಿಗೆ ಮಿಶ್ರಣವಾಗಿದೆ.
ಕೆ.ಎಲ್.ರಾಹುಲ್ ಸೊಗಸಾದ ಕೈಗಡಿಯಾರಗಳನ್ನು ಇಷ್ಟಪಡುತ್ತಾರೆ. ಅವರ ಬಳಿ ಲಕ್ಸುರಿಯಸ್ ವಾಚ್ ಗಳ ಸಂಗ್ರಹವೇ ಇದೆ. 27 ಲಕ್ಷ ರೂ. ಮೌಲ್ಯದ ರೋಲೆಕ್ಸ್(Rolex), 8 ಲಕ್ಷ ರೂ. ಮೌಲ್ಯದ ಪನೇರೈ (Panerai), 38 ಲಕ್ಷ ರೂ. ಮೌಲ್ಯದ rose gold Sky-Dweller Rolex ಮತ್ತು 19 ಲಕ್ಷ ರೂ. ಮೌಲ್ಯದ ಔಡೆಮರ್ಸ್ ಪಿಗುಯೆಟ್ ರಾಯಲ್ ಓಕ್(Audemars Piguet Royal Oak) ಸೇರಿದಂತೆ ಅನೇಕ ಲಕ್ಸುರಿಯಸ್ ವಾಚ್ ಗಳನ್ನು ರಾಹುಲ್ ಹೊಂದಿದ್ದಾರೆ.
ಕೆ.ಎಲ್.ರಾಹುಲ್ ಮರ್ಸಿಡಿಸ್ C43 AMG ಸೆಡಾನ್ ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಕಾರು 250kph ಗರಿಷ್ಠ ವೇಗವನ್ನು ಹೊಂದಿದೆ. ಅಲ್ಲದೆ ಕೇವಲ 4.7 ಸೆಕೆಂಡುಗಳಲ್ಲಿ 0-100kph ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ರಾಹುಲ್ ಬಿಎಂಡಬ್ಲ್ಯು ಸ್ಪೀಡ್ ಸ್ಟರ್(Speedster) ಅನ್ನು ಕೂಡ ಹೊಂದಿದ್ದಾರೆ.
ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆ.ಎಲ್.ರಾಹುಲ್ ಹೆಚ್ಚಾಗಿ ರಜಾದಿನಗಳಲ್ಲಿ ಮೋಜು-ಮಸ್ತಿಗಳಲ್ಲಿ ನಿರತರಾಗಿರುತ್ತಾರೆ. ಅವರು ಹೆಚ್ಚು ಜನಸಂದಣಿಯನ್ನು ಇಷ್ಟಪಡುವುದಿಲ್ಲ. ಹೀಗಾಗಿ ಲಂಡನ್, ಆಸ್ಟ್ರೇಲಿಯಾ ಮತ್ತು ಕರಾವಳಿ ತೀರಗಳಿಗೆ ರಜಾಮಜಾ ಆನಂದಿಸಲು ಇಷ್ಟಪಡುತ್ತಾರೆ.