ಭವ್ಯವಾದ ಪಟೌಡಿ ಅರಮನೆಯು 800 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ ಮತ್ತು 'ವೀರ್-ಜರಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಅರಮನೆ ಶೂಟ್ ಮಾಡಲಾಗಿದೆ. ಪಟೌಡಿ ಅರಮನೆಯಲ್ಲಿ ಸುಮಾರು 150 ಕೊಠಡಿಗಳಿವೆ.
ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್ ಮತ್ತು ಪಟೌಡಿ ಕುಟುಂಬದ ಇತರ ಸದಸ್ಯರು ಪಟೌಡಿ ಅರಮನೆಯಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ, ಇದು ಅವರ ಪಾರಂಪರಿಕ ಆಸ್ತಿಯಾಗಿದೆ. ಭವ್ಯವಾದ ಪಟೌಡಿ ಅರಮನೆಯು 800 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ ಮತ್ತು 'ವೀರ್-ಜರಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಅರಮನೆ ಶೂಟ್ ಮಾಡಲಾಗಿದೆ. ಪಟೌಡಿ ಅರಮನೆಯಲ್ಲಿ ಸುಮಾರು 150 ಕೊಠಡಿಗಳಿವೆ.
ಮುಂಬೈ ಮಿರರ್ ಇಂಟರ್ವ್ಯೂನಲ್ಲಿ ಸೈಫ್ ಗೆ ಈ ಬಗ್ಗೆ ಕೇಳಿದಾಗ, ನನ್ನ ಅಜ್ಜಿಯರು ಮತ್ತು ತಂದೆಯನ್ನು ಅಲ್ಲಿ ಸಮಾಧಿ ಮಾಡಲಾಗಿದೆ, ಅಲ್ಲದೆ, ಭದ್ರತೆ ಇದೆ, ಅಲ್ಲಿ ಪ್ರಶಾಂತತೆ ಮತ್ತು ನನಗೆ ಆಧ್ಯಾತ್ಮಿಕ ನೆಮ್ಮದಿ ಸಿಗುತ್ತದೆ, ಈ ಜಾಗವು ಕೆಲವು ಶತಮಾನಗಳಷ್ಟು ಹಳೆಯದಾಗಿದೆ, ಆದರೆ ನನ್ನ ಅಜ್ಜ ನನ್ನ ಅಜ್ಜಿಗೆ ನಿರ್ಮಿಸಿದ ಅರಮನೆಯು ಸುಮಾರು ನೂರು ವರ್ಷಗಳಷ್ಟು ಹಳೆಯದಾಗಿದೆ.
ಪಟೌಡಿ ಅರಮನೆಯ ಒಳಗಿನ ಫೋಟೋಗಳನ್ನು ನೋಡೋಣ ಬನ್ನಿ..
ಪಟೌಡಿ ಅರಮನೆಯು ಚದುರಂಗ ಫಲಕದ ಹೆಂಚಿನ ಹಾಲು ಮತ್ತು ಎರಡು ಮೆಟ್ಟಿಲುಗಳನ್ನು ಹೊಂದಿದೆ.
ಪಟೌಡಿ ಅರಮನೆಯು ಕೋಣೆಯ ಮಧ್ಯದಲ್ಲಿಯೇ ಊಟದ ಡೈನಿಂಗ್ ಟೇಬಲ್ ನೊಂದಿಗೆ ಒಂದು ದೊಡ್ಡ ಡೈನಿಂಗ್ ಹಾಲ್ ಹೊಂದಿದೆ. ಇದು ಗಾಜಿನ ಕಿಟಕಿಗಳನ್ನು ಹೊಂದಿದ್ದು ಅದು ಕೋಣೆಗೆ ಸರಿಯಾದ ಪ್ರಮಾಣದ ನೈಸರ್ಗಿಕ ಬೆಳಕನ್ನು ಒದಗಿಸುತ್ತದೆ.
ಪಟೌಡಿ ಅರಮನೆಯು ಸೋಫಾ ಮತ್ತು ಮಧ್ಯದ ಮೇಜಿನೊಂದಿಗೆ ವಿಸ್ತಾರವಾದ ಮಾಡ್ರನ್ ಶೈಲಿಯ ಸ್ಟಡಿ ರೂಮ್ ಇದೆ. ಕೋಣೆಯು ನಾಲ್ಕು ಬಾಗಿಲುಗಳನ್ನು ಹೊಂದಿದೆ ಗೋಡೆಯ ಮೇಲೆ ಸುಂದರವಾದ ಫೋಟೋ ಫ್ರೇಮ್ಗಳನ್ನು ನೇತು ಹಾಕಲಾಗಿದೆ.
ಪಟೌಡಿ ಅರಮನೆಯಲ್ಲಿ ಸುಮಾರು 150 ಕೊಠಡಿಗಳಿವೆ ಮತ್ತು ಪ್ರತಿ ಕೊಠಡಿಯೂ ವಿಶಿಷ್ಟವಾಗಿ ಅಲಂಕರಿಸಲಾಗಿದೆ.
ಹೊರಗಿನಿಂದ, ಪಟೌಡಿ ಅರಮನೆಯು ಒಂದು ದೊಡ್ಡ ಬಿಳಿ ಕೋಟೆಯಂತೆ ಕಾಣುತ್ತದೆ. ಅರಮನೆಯ ಆಸ್ತಿ 10 ಎಕರೆ ಪ್ರದೇಶವನ್ನು ಒಳಗೊಂಡಿದೆ.