Photo Gallery: ಅರಮನೆಯಂತಿರುವ ಎಂ.ಎಸ್.ಧೋನಿ ಲಕ್ಷುರಿಯಸ್‌ ಬಂಗಲೆ ಹೇಗಿದೆ ನೋಡಿ

ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ತನ್ನ ತವರು ರಾಂಚಿಯಲ್ಲಿ ಬಿಡುವಿನ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.

ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ತನ್ನ ತವರು ರಾಂಚಿಯಲ್ಲಿ ಬಿಡುವಿನ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಅವರು ತಮ್ಮ ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಜೀವಾರೊಂದಿಗೆ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಾರೆ. ಮಾಹಿ ಬಂಗಲೆ ಯಾವುದೇ ಅರಮನೆಗಿಂತಲೂ ಕಡಿಮೆಯಿಲ್ಲ. ಸಕಲ ಸೌಲಭ್ಯಗಳನ್ನು ಹೊಂದಿರುವ ಧೋನಿ ಬಂಗಲೆ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಅವರ ಮನೆಯ ಮುಂಭಾಗದ ವಿನ್ಯಾಸವು ಅದ್ಭುತವಾಗಿದೆ. ಛಾವಣಿಯ ಬಣ್ಣ ಕಪ್ಪಾಗಿದ್ದು, ನೋಡಲು ಸುಂದರವಾಗಿದೆ. ಮಾಹಿ ಬಂಗಲೆ 7 ಎಕರೆಗಳಲ್ಲಿ ಹರಡಿಕೊಂಡಿದೆ. ಈ ಐಷಾರಾಮಿ ಬಂಗಲೆ ರಾಂಚಿಯಲ್ಲಿದೆ.

2 /5

ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ಬೈಕ್‌ಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ತಿಳಿದಿದೆ. ಅವರ ಬಳಿ ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಬಹುದೊಡ್ಡ ಸಂಗ್ರಹವಿದೆ. ಹೀಗಾಗಿ ತಮ್ಮ ಬಂಗಲೆಯಲ್ಲಿ ಬೈಕ್‌ಗಳಿಗಾಗಿಯೇ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಿಕೊಂಡಿದ್ದಾರೆ.

3 /5

ಎಂ.ಎಸ್.ಧೋನಿಯ ಐಷಾರಾಮಿ ಬಂಗಲೆಯಲ್ಲಿ ಜಿಮ್, ಈಜುಕೊಳ ಮತ್ತು ಪಾರ್ಕ್ ಹಾಗೂ ಅನೇಕ ಒಳಾಂಗಣ ಆಟಗಳನ್ನು ಆಡಲು ಸಾಕಷ್ಟು ಸ್ಥಳಾವಕಾಶವಿದೆ.

4 /5

ಎಂ.ಎಸ್.ಧೋನಿಯ ಬಂಗಲೆಯ ಒಳಭಾಗವು ತುಂಬಾ ಅದ್ಭುತವಾಗಿದೆ. ಅವರ ಲಿವಿಂಗ್ ರೂಮಿನಲ್ಲಿ ಬ್ರೌನ್ ವೆಲ್ವೆಟ್ ಸೋಫಾ ಮತ್ತು ಕಾಫಿ ಟೇಬಲ್ ಕೂಡ ಇದೆ. ಈ ಭವ್ಯವಾದ ಒಳಾಂಗಣವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.  

5 /5

ಎಂ.ಎಸ್.ಧೋನಿಯವರ ಐಷಾರಾಮಿ ಬಂಗಲೆಯಲ್ಲಿ ಮಲಗುವ ಕೋಣೆಯು ಸಾಕಷ್ಟು ಆಧುನಿಕವಾಗಿದೆ. ಅವರ ಹಾಸಿಗೆಯ ಭಾಗವು ಬಹುತೇಕ ಚಾವಣಿಯನ್ನು ಮುಟ್ಟುವಂತಿದೆ. ಅತ್ಯುತ್ತಮವಾಗಿ ಮನೆಯ ಮಲಗುವ ಕೋಣೆಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಸಕಲ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.