Expensive Cars: ಭಾರತೀಯ ಕ್ರಿಕೆಟಿಗರ ಗ್ಯಾರೇಜ್‌ನಲ್ಲಿವೆ ದುಬಾರಿ ಬೆಲೆಯ ಕಾರುಗಳು…

ಕೋಟಿ ಕೋಟಿ ರೂ. ಮೌಲ್ಯದ ಅನೇಕ ಲಕ್ಸುರಿ ಕಾರುಗಳು ಭಾರತೀಯ ಕ್ರಿಕೆಟಿಗರ ಗ್ಯಾರೇಜ್‌ನಲ್ಲಿವೆ.

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯಿಂದ ಹಿಡಿದು ಶಿಖರ್ ಧವನ್ ವರೆಗೂ ಭಾರತೀಯ ಕ್ರಿಕೆಟಿಗರು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಕೋಟಿ ಕೋಟಿ ರೂ. ಮೌಲ್ಯದ ಅನೇಕ ಲಕ್ಸುರಿ ಕಾರುಗಳು ಭಾರತೀಯ ಕ್ರಿಕೆಟಿಗರ ಗ್ಯಾರೇಜ್‌ನಲ್ಲಿವೆ. ಯಾವ್ಯಾವ ಕಾರುಗಳನ್ನು ಕ್ರಿಕೆಟಿಗರು ಹೊಂದಿದ್ದಾರೆ ಮತ್ತು ಅವುಗಳ ಬೆಲೆ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ ನೋಡಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ MINI Countryman ದುಬಾರಿ ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಕಾರಿನ ಬೆಲೆ ಭಾರತದಲ್ಲಿ ಸುಮಾರು 38.5 ಲಕ್ಷ ರೂ. ಆಗುತ್ತದೆ.

2 /7

ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ, ಹಿಟ್ ಮ್ಯಾನ್ ರೋಹಿತ್ ಶರ್ಮಾ Lamborghini Urus ದುಬಾರಿ ಬೆಲೆಯ ಕಾರು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು 3 ಕೋಟಿ ರೂ.ನಷ್ಟಿದೆ.

3 /7

ಟೀಂ ಇಂಡಿಯಾದ ಕ್ಯಾಪ್ಟನ್, ರನ್ ಮಷಿನ್ ವಿರಾಟ್ ಕೊಹ್ಲಿ 2018ರಲ್ಲಿ ತಮ್ಮ ಸಹೋದರ ವಿಕಾಸ್ ಹೆಸರಿನಲ್ಲಿ ‘Bentley Continental GT’ ದುಬಾರಿ ಕಾರು ಖರೀದಿಸಿದರು. ಈ ಕಾರಿನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 3.29 ಕೋಟಿ ರೂ.ನಷ್ಟಿದೆ.  

4 /7

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಇತ್ತೀಚೆಗಷ್ಟೇ  BWN M8 ದುಬಾರಿ ಕಾರು ಖರೀದಿಸಿದ್ದಾರೆ. ಇದರ ಬೆಲೆ 2.18 ಕೋಟಿ ರೂ. ಇದೆ.   

5 /7

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ SUV Audi Q5 ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ. ಈ ಕಾರಿನ ಬೆಲೆ 55 ಲಕ್ಷ ರೂ. ಆಗಿದೆ.

6 /7

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿಯವರು Hummer H2 ಕಾರಿನ ಹೆಮ್ಮೆಯ ಒಡೆಯರಾಗಿದ್ದಾರೆ. ಈ ಕಾರಿನ ಬೆಲೆ ಸುಮಾರು 75 ಲಕ್ಷ ರೂ.ನಿಂದ 1 ಕೋಟಿ ರೂ.ನಷ್ಟಿದೆ.  

7 /7

ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಅವರು ದುಬಾರಿ ಬೆಲೆಯ Bentley Continental Flying Spur ಕಾರು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು 3.21 ಕೋಟಿ ರೂ.ನಷ್ಟಿದೆ.