ಈ ಆರ್‌ಡಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಕನಿಷ್ಠ 100 ರೂ. ಮೊತ್ತವನ್ನು ಜಮಾ ಮಾಡಬಹುದು.
ಹನಿ ಹನಿಗೂಡಿದರೆ ಹಳ್ಳ ಎಂಬಂತೆ ನೀವೂ ಕೂಡ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ಬಳಿ ದೊಡ್ಡ ಮಟ್ಟದ ಬಂಡವಾಳ ಇರುವುದು ಅನಿವಾರ್ಯವಲ್ಲ. ನೀವು ಸಣ್ಣ ಬಂಡವಾಳದೊಂದಿಗೆ ಕೂಡ ಹೂಡಿಕೆ ಮಾಡಿ ದೊಡ್ಡ ಮೊತ್ತವನ್ನು ಪಡೆಯಬಹುದು. ಇದರಿಂದಾಗಿ ನಿಮ್ಮ ಕನಸನ್ನು ಈಡೇರಿಸಬಹುದು. ಪೋಸ್ಟ್ ಆಫೀಸ್ ಇದೇ ರೀತಿಯ ಹೂಡಿಕೆ ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿ ನೀವು ಪ್ರತಿ ತಿಂಗಳು ಕೇವಲ 100 ರೂಪಾಯಿಗಳನ್ನು ಜಮಾ ಮಾಡುವ ಮೂಲಕ ದೊಡ್ಡ ಹಣವನ್ನು ಠೇವಣಿ ಮಾಡಬಹುದು. ಈ ನಿರ್ದಿಷ್ಟ ಯೋಜನೆಯ ಹೆಸರು ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಜಿಟ್ (ಆರ್‌ಡಿ). ನೀವು ಅದರಲ್ಲಿ ಬಹಳ ಕಡಿಮೆ ಹಣದಿಂದ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಇದರಲ್ಲಿ ನಿಮಗೆ ರಿಟರ್ನ್ಸ್ ಸಹ ಉತ್ತಮವಾಗಿದ್ದು ನಿಮ್ಮ ಹಣವೂ ಸುರಕ್ಷಿತವಾಗಿದೆ.
ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಜಿಟ್ (ಆರ್‌ಡಿ) ಖಾತೆಯು ಒಂದು ಸಣ್ಣ ಕಂತು ಠೇವಣಿ, ಉತ್ತಮ ಬಡ್ಡಿದರ ಮತ್ತು ಸರ್ಕಾರದ ಖಾತರಿ ಯೋಜನೆಯಾಗಿದೆ. ರಿಕರಿಂಗ್ ಡಿಪಾಜಿಟ್ ಖಾತೆಯನ್ನು ಅಂಚೆ ಕಚೇರಿಯಲ್ಲಿ ಐದು ವರ್ಷಗಳವರೆಗೆ ತೆರೆಯಲಾಗುತ್ತದೆ. ಇದಕ್ಕಿಂತ ಕಡಿಮೆ ವರ್ಷಕ್ಕೆ ಆರ್‌ಡಿ ಮಾಡಲು ಸಾಧ್ಯವಿಲ್ಲ. ಆದರೆ ಬ್ಯಾಂಕುಗಳು ಆರು ತಿಂಗಳು, ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಇತ್ಯಾದಿಗಳಿಗೆ ಆರ್‌ಡಿ ಖಾತೆ ಸೌಲಭ್ಯವನ್ನು ಒದಗಿಸುತ್ತವೆಯಾದರೂ ಇದರಲ್ಲಿ ಠೇವಣಿ ಮಾಡಿದ ಹಣದ ಬಡ್ಡಿದರ ಪ್ರತಿ ತ್ರೈಮಾಸಿಕದಲ್ಲಿ (ವಾರ್ಷಿಕ ದರದಲ್ಲಿ) ಮತ್ತು ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಅದನ್ನು ನಿಮ್ಮ ಖಾತೆಗೆ (ಸಂಯುಕ್ತ ಬಡ್ಡಿ ಸೇರಿದಂತೆ) ಸೇರಿಸಲಾಗುತ್ತದೆ.
ಇಂಡಿಯಾ ಪೋಸ್ಟ್‌ನ ವೆಬ್‌ಸೈಟ್‌ನ ಪ್ರಕಾರ ಪ್ರಸ್ತುತ ಆರ್‌ಡಿ ಯೋಜನೆಯಲ್ಲಿ ಶೇ 5.8 ರಷ್ಟು ಬಡ್ಡಿ ಪಡೆಯಲಾಗುತ್ತಿದೆ. ಈ ಹೊಸ ದರವು 1 ಏಪ್ರಿಲ್ 2020 ರಿಂದ ಅನ್ವಯಿಸುತ್ತದೆ. ಭಾರತ ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ತನ್ನ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಪ್ರಕಟಿಸುತ್ತದೆ.
ಈ ಆರ್‌ಡಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಕನಿಷ್ಠ 100 ರೂ. ಹೂಡಿಕೆ ಮಾಡಲು ಅವಕಾಶವಿದೆ. ಇದಕ್ಕಿಂತ 10 ಪಟ್ಟು ಹೆಚ್ಚಿನ ಮೊತ್ತವನ್ನೂ ಕೂಡ ನೀವು ಹೂಡಿಕೆ ಮಾಡಬಹುದು. ಗರಿಷ್ಠ ಠೇವಣಿ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಹತ್ತು ಮಲ್ಟಿಪಲ್‌ನಲ್ಲಿರುವ ಯಾವುದೇ ಮೊತ್ತವನ್ನು ಆರ್‌ಡಿ ಖಾತೆಯಲ್ಲಿ ಜಮಾ ಮಾಡಬಹುದು.
ಯಾವುದೇ ವ್ಯಕ್ತಿಯು ತನ್ನ ಹೆಸರಿನಲ್ಲಿ ಆರ್‌ಡಿ ಖಾತೆಯನ್ನು ತೆರೆಯಬಹುದು. ಗರಿಷ್ಠ ಸಂಖ್ಯೆಯ ಖಾತೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಹೌದು ಖಾತೆಯನ್ನು ವೈಯಕ್ತಿಕವಾಗಿ ಮಾತ್ರ ತೆರೆಯಬಹುದಾಗಿದೆ ಎಂದು ತಿಳಿದಿರಲಿ. ಕುಟುಂಬದ ಹೆಸರಿನಲ್ಲಿ (ಎಚ್‌ಯುಎಫ್) ಅಥವಾ ಸಂಸ್ಥೆಯ ಹೆಸರಿನಲ್ಲಿ ತೆರೆಯಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಆದರೆ ಇಬ್ಬರು ವಯಸ್ಕರು ಜಂಟಿ ಆರ್‌ಡಿ ಖಾತೆಯನ್ನು ಒಟ್ಟಿಗೆ ತೆರೆಯಬಹುದು. ಈಗಾಗಲೇ ತೆರೆದಿರುವ ವೈಯಕ್ತಿಕ ಆರ್‌ಡಿ ಖಾತೆಯನ್ನು ಯಾವುದೇ ಸಮಯದಲ್ಲಿ ಜಂಟಿ ಖಾತೆಗೆ ಪರಿವರ್ತಿಸಬಹುದು. ಇದಕ್ಕೆ ವಿರುದ್ಧವಾಗಿ ಈಗಾಗಲೇ ತೆರೆದ ಜಂಟಿ ಆರ್‌ಡಿ ಖಾತೆಯನ್ನು ಯಾವುದೇ ಸಮಯದಲ್ಲಿ ವೈಯಕ್ತಿಕ ಆರ್‌ಡಿ ಖಾತೆಯಾಗಿ ಪರಿವರ್ತಿಸಬಹುದು.
ನೀವು ಆರ್‌ಡಿ ಕಂತನ್ನು ನಿಗದಿತ ದಿನಾಂಕದೊಳಗೆ ಠೇವಣಿ ಮಾಡದಿದ್ದರೆ, ತಡವಾದ ಕಂತಿನೊಂದಿಗೆ, ನೀವು ಪ್ರತಿ ತಿಂಗಳು ಒಂದು ಶೇಕಡಾ ದಂಡವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಅಲ್ಲದೆ ಸತತ ನಾಲ್ಕು ಕಂತುಗಳನ್ನು ಠೇವಣಿ ಮಾಡದಿದ್ದರೆ ನಿಮ್ಮ ಆರ್‌ಡಿ ಖಾತೆಯನ್ನು ಮುಚ್ಚಲಾಗುತ್ತದೆ. ಬಂದ್ ಆಗಿರುವ ಆರ್‌ಡಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು ಹೀಗೆ ಮಾಡಿ ಆದಾಗ್ಯೂ ಖಾತೆಯನ್ನು ಮುಚ್ಚಿದ ನಂತರವೂ, ಮುಂದಿನ ಎರಡು ತಿಂಗಳವರೆಗೆ ಅದನ್ನು ಮತ್ತೆ ಸಕ್ರಿಯಗೊಳಿಸಬಹುದು. ಹೌದು ಇದಕ್ಕಾಗಿ ಖಾತೆದಾರರು ತಮ್ಮ ಶಾಖಾ (ಹೋಮ್) ಪೋಸ್ಟ್ ಆಫೀಸ್‌ಗೆ ಅರ್ಜಿ ಸಲ್ಲಿಸಬೇಕು. ಇದರೊಂದಿಗೆ ಹಿಂದೆ ಬಾಕಿ ಉಳಿದಿರುವ ಕಂತು ಮತ್ತು ದಂಡದ ಮೊತ್ತವನ್ನು ಹೊಸ ಕಂತಿನೊಂದಿಗೆ ಜಮಾ ಮಾಡಬೇಕು. ಇದರೊಂದಿಗೆ ನಿಮ್ಮ ಬಂದ್ ಆಗಿರುವ ಆರ್‌ಡಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.