IND vs ENG, 1st T20I: ನಾಳೆ ಟೀಂ ಇಂಡಿಯಾ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ಸಜ್ಜಾಗಿದೆ. ಸೂರ್ಯಕುಮಾರ್ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಗೆಲುವಿಗಾಗಿ ರಣತಂತ್ರ ರೂಪಿಸಿದೆ.
IND vs ENG, 1st T20I: ನಾಳೆ ಅಂದರೆ ಮಂಗಳವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೊದಲ ಟಿ-20 ಪಂದ್ಯವನ್ನು ಆಡಲಿದೆ. ಇಂಗ್ಲಿಷ್‌ರನ್ನ ಮಣಿಸಲು ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ತಂಡವು ಸಕಲ ರೀತಿಯಲ್ಲೂ ಸಜ್ಜಾಗಿದೆ. ಆದರೆ ಆಂಗ್ಲರ ವಿರುದ್ಧ ಗೆಲ್ಲಬೇಕಾದರೆ ಟೀಂ ಇಂಡಿಯಾ ಕೆಲವು ರಣತಂತ್ರಗಳನ್ನು ರೂಪಿಸಬೇಕು. ಗೆಲುವು ಸಾಧಿಸಬೇಕಾದರೆ ಇಂಗ್ಲೆಂಡ್‌ನ ಐವರು ಆಟಗಾರರನ್ನು ಭಾರತೀಯರು ಕಟ್ಟಿಹಾಕಬೇಕಿದೆ. ಇವರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಮೊದಲನೆಯದಾಗಿ ಭಾರತ ತಂಡವು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬಗ್ಗೆ ಹೆಚ್ಚಿಗೆ ಜಾಗರೂಕರಾಗಿರಬೇಕು. ಜೋಸ್ ಬಟ್ಲರ್ ಟೀಂ ಇಂಡಿಯಾ ವಿರುದ್ಧ ಆಡುವಾಗಲೆಲ್ಲಾ ಹೆಚ್ಚು ಆಕ್ರಮಣಕಾರಿಯಾಗುತ್ತಾರೆ. ಈ ಪಂದ್ಯದಲ್ಲಿ ಅವರು ಕೆಲವು ದಾಖಲೆಗಳನ್ನೂ ಮಾಡಲು ಸಜ್ಜಾಗಿದ್ದಾರೆ. ಐಸಿಸಿ ಟಿ-20 ಶ್ರೇಯಾಂಕದ ಬಗ್ಗೆ ಹೇಳುವುದಾರೆ, ಅವರು ಪ್ರಸ್ತುತ 5ನೇ ಸ್ಥಾನದಲ್ಲಿದ್ದಾರೆ. ಅವರ ರೇಟಿಂಗ್ ಪ್ರಸ್ತುತ 717ರಷ್ಟಿದೆ. ಈ ಆಟಗಾರ ಉತ್ತಮ ಆರಂಭ ನೀಡಿದರೆ ಭಾರತಕ್ಕೆ ಗೆಲುವು ಕಷ್ಟವಾಗಬಹುದು.
ಜೋಸ್ ಬಟ್ಲರ್ ಹೊರತುಪಡಿಸಿ ಇನ್ನೋರ್ವ ಇಂಗ್ಲಿಷ್ ಬ್ಯಾಟ್ಸ್‌ಮನ್ ಟೀಂ ಇಂಡಿಯಾಕ್ಕೆ ಸಮಸ್ಯೆ ಸೃಷ್ಟಿಸಬಹುದು. ಅವರೇ ಫಿಲ್ ಸಾಲ್ಟ್. ಸದ್ಯ ಐಸಿಸಿ ಟಿ-20 ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇವರ ರೇಟಿಂಗ್ 829 ಆಗಿದೆ. ಈ ಆಟಗಾರ ಟ್ರಾವಿಸ್ ಹೆಡ್‌ಗಿಂತ ಹಿಂದಿದ್ದು, ಟೀಂ ಇಂಡಿಯಾದ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರಿಗಿಂತ ಮುಂದಿದ್ದಾರೆ. ಇವರು ಐಪಿಎಲ್‌ನಲ್ಲೂ ಹಲವು ಅಮೋಘ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟನ್ ಪ್ರಸ್ತುತ ವಿಶ್ವದ ಅತ್ಯುತ್ತಮ ಫಿನಿಶರ್ ಎಂದು ಗುರುತಿಸಲ್ಪಟ್ಟಿರುವ ಆಟಗಾರ. ಐಸಿಸಿ ಟಿ-20 ಶ್ರೇಯಾಂಕದಲ್ಲಿ ಆಲ್‌ರೌಂಡರ್‌ಗಳ ಪಟ್ಟಿಯನ್ನು ಗಮನಿಸಿದರೆ, ಅವರು ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದಾರೆ. ಅವರ ರೇಟಿಂಗ್ 230 ಇದೆ. ಸ್ಫೋಟಕ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್‌ನಲ್ಲೂ ಅದ್ಭುತ ಮಾಡುವ ಸಾಮರ್ಥ್ಯವನ್ನ ಹೊಂದಿದ್ದಾರೆ. ಹೀಗಾಗಿ ಕೋಲ್ಕತ್ತಾದ ಪಿಚ್ ಅವರಿಗೆ ಸೂಕ್ತವೆನಿಸಬಹುದು.
ನಾವು ಬೌಲಿಂಗ್ ಬಗ್ಗೆ ಮಾತನಾಡುವುದಾದರೆ, ಸ್ಪಿನ್ ಬೌಲರ್ ಆದಿಲ್ ರಶೀದ್ ಕೂಡ ಭಾರತ ತಂಡಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಐಸಿಸಿ ಟಿ-20 ರ್ಯಾಂಕಿಂಗ್‌ನಲ್ಲಿ ಬೌಲರ್‌ಗಳ ಪಟ್ಟಿಯಲ್ಲಿ ಇವರು ಎರಡನೇ ಸ್ಥಾನದಲ್ಲಿದ್ದಾರೆ. ಅವರ ರೇಟಿಂಗ್ 701 ಆಗಿದೆ. ಕೋಲ್ಕತ್ತಾದ ಪಿಚ್ ಅವರ ಬೌಲಿಂಗ್‌ಗೆ ಸ್ವಲ್ಪ ಸಹಕಾರಿಯಾದರೆ ಟೀಂ ಇಂಡಿಯಾಗೆ ಮಾರಕವಾಗಬಹುದು.
ಜೋಫ್ರಾ ಆರ್ಚರ್ ಯಾರಿಗೆ ಗೊತ್ತಿಲ್ಲ ಹೇಳಿ.. ಸದ್ಯ ಐಸಿಸಿ ಟಿ-20 ಶ್ರೇಯಾಂಕದಲ್ಲಿ ಹಿಂದುಳಿದಿದ್ದರೂ, ಕೆಲ ದಿನಗಳಿಂದ ಅವರಿಗೆ ಗಾಯದ ಸಮಸ್ಯೆಯೂ ಕಾಡುತ್ತಿದೆ. ಚಾಂಪಿಯನ್ಸ್ ಟ್ರೋಫಿಗೂ ಮೊದಲು ಅವರು ತಮ್ಮ ಅಕ್ರಮಣಕಾರಿ ಬೌಲಿಂಗ್ ಪ್ರದರ್ಶನಕ್ಕಾಗಿ ಕಾಯುತ್ತಿದ್ದಾರೆ. ಮಾರಕ ಬೌಲಿಂಗ್‌ನಿಂದಲೇ ಅವರು ಪ್ರಪಂಚದಾದ್ಯಂತ ಪರಿಚಿತರಾಗಿ ಗುರುತಿಸಿಕೊಂಡಿದ್ದಾರೆ. ಅವರ ಬೌಲಿಂಗ್‌ನಿಂದ ಭಾರತದ ಅಗ್ರ ಕ್ರಮಾಂಕವು ಸುಲಭವಾಗಿ ರನ್ ಗಳಿಸುವುದು ಸಾಧ್ಯವಿಲ್ಲ.