ಯಂಗ್ ತ್ವಚೆ ಪಡೆಯಲು ನಿಮ್ಮ ಡಯಟ್ನಲ್ಲಿರಲಿ ಈ ಹಣ್ಣುಗಳು

ನಿಮ್ಮ ಆಹಾರದಲ್ಲಿ ಕೆಲವು ಆಂಟಿ ಏಜಿಂಗ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಹಣ್ಣುಗಳನ್ನು ಸೇರಿಸುವ ಮೂಲಕ ನೀವು ಆರೋಗ್ಯಕರವಾದ ಯಂಗ್ ತ್ವಚೆಯನ್ನು ನಿಮ್ಮದಾಗಿಸಬಹುದು. ಅಂತಹ ಹಣ್ಣುಗಳು ಯಾವುವು ತಿಳಿಯೋಣ...

ವಯಸ್ಸಾದಂತೆ ಅದರ ಲಕ್ಷಣಗಳು ನಮ್ಮ ತ್ವಚೆಯ ಮೇಲೆ ಹೆಚ್ಚಾಗಿ ಕಂಡು ಬರುತ್ತದೆ. ಇದರೊಟ್ಟಿಗೆ ಹೆಚ್ಚು ಎಣ್ಣೆಯುಕ್ತ, ಮಸಾಲೆಯುಕ್ತ ಆಹಾರಗಳು ತ್ವಚೆಯನ್ನು ಇನ್ನಷ್ಟು ಹಾನಿ ಮಾಡುತ್ತವೆ. ಆದರೆ, ನಿಮ್ಮ ಆಹಾರದಲ್ಲಿ ಕೆಲವು ಆಂಟಿ ಏಜಿಂಗ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಹಣ್ಣುಗಳನ್ನು ಸೇರಿಸುವ ಮೂಲಕ ನೀವು ಆರೋಗ್ಯಕರವಾದ ಯಂಗ್ ತ್ವಚೆಯನ್ನು ನಿಮ್ಮದಾಗಿಸಬಹುದು. ಅಂತಹ ಹಣ್ಣುಗಳು ಯಾವುವು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನೇರಳೆ ವಿಟಮಿನ್ ಸಿ, ವಿಟಮಿನ್ ಇ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು ಇದು ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ, ಚರ್ಮದ ಹಲವು ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲವು.  

2 /5

ಪರಂಗಿ ಹಣ್ಣು ಆರೋಗ್ಯದ ಗಣಿ. ಮಾತ್ರವಲ್ಲ, ಇದು ಸೌಂದರ್ಯವರ್ಧಕವೂ ಹೌದು. ಸೌಂದರ್ಯ ತಜ್ಞರ ಪ್ರಕಾರ, ಪರಂಗಿ ಹಣ್ಣಿನ ಸೇವನೆಯಿನ ದೇಹ ಡಿಟಾಕ್ಸ್ ಆಗುತ್ತದೆ. ಮಾತ್ರವಲ್ಲ, ಇದು ಸುಕ್ಕುಗಳು, ಮೊಡವೆಗಳನ್ನೂ ನಿವಾರಿಸುತ್ತದೆ.

3 /5

ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಲ್ಲಿ ಸಮೃದ್ಧವಾಗಿರುವ ಕಿತ್ತಳೆ ಹಣ್ಣು ಚರ್ಮವನ್ನು ಸದಾ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

4 /5

ಸ್ಟ್ರಾಬೆರಿ ಹಣ್ಣು ವಯಸ್ಸಾದ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಚರ್ಮದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು.

5 /5

ದಿನಕ್ಕೊಂದು ಆಪಲ್ ಸೇವನೆಯು ವೈದ್ಯರನ್ನು ನಿಮ್ಮಿಂದ ದೂರ ಉಳಿಸುವುದು ಮಾತ್ರವಲ್ಲ, ನಿಮ್ಮ ಯೌವನವನ್ನೂ ವೃದ್ಧಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.