"ಮಾಜಿ ನಾಯಕಿ ಮಿಥಾಲಿ ರಾಜ್ ಜೊತೆ ಮದುವೆಯಾಗಲಿದ್ದೇನೆ"- ನಿವೃತ್ತಿ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಶಾಕಿಂಗ್‌ ಹೇಳಿಕೆ ವೈರಲ್‌

Shikhar Dhawan and Mithali Raj Marriage Rumour: ಟೀಂ ಇಂಡಿಯಾದ ಗಬ್ಬರ್‌ ಸಿಂಗ್‌ ಎಂದೇ ಖ್ಯಾತಿ ಪಡೆದಿದ್ದ ಆರಂಭಿಕ ಬ್ಯಾಟ್ಸ್‌ʼಮನ್ ಶಿಖರ್ ಧವನ್ ಇಂದು ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /8

ಟೀಂ ಇಂಡಿಯಾದ ಗಬ್ಬರ್‌ ಸಿಂಗ್‌ ಎಂದೇ ಖ್ಯಾತಿ ಪಡೆದಿದ್ದ ಆರಂಭಿಕ ಬ್ಯಾಟ್ಸ್‌ʼಮನ್ ಶಿಖರ್ ಧವನ್ ಇಂದು ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

2 /8

ಶಿಖರ್ ಧವನ್ ಇಂದು ಬೆಳಿಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಶೇರ್‌ ಮಾಡುವ ಮೂಲಕ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿರುವುದಾಗಿ ತಿಳಿಸಿದ್ದಾರೆ. ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದ ಅವರು 269 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 24 ಶತಕ ಗಳಿಸಿದ್ದಾರೆ.  

3 /8

"ಜೀವನದಲ್ಲಿ ಮುನ್ನಡೆಯಬೇಕೆಂದರೆ ಪುಟವನ್ನು ತಿರುಗಿಸುವುದು ಮುಖ್ಯ. ಇದೇ ಕಾರಣದಿಂದ ನಾನು ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ" ಎಂದು ಧವನ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.  

4 /8

"ಭಾರತದ ಪರ ಇಷ್ಟು ದಿನ ಆಡಿದ್ದೇನೆ ಎಂಬ ಸಂತಸದ ಭಾವದಿಂದ ಇಂದು ನಿವೃತ್ತಿ ಪಡೆಯುತ್ತಿದ್ದೇನೆ. ಇನ್ನು ಮುಂದೆ ಭಾರತಕ್ಕಾಗಿ ಆಡುವುದಿಲ್ಲ ಎಂದು ದುಃಖಿಸಬೇಡಿ, ಬದಲಾಗಿ ಇಷ್ಟು ದಿನ ಭಾರತದ ಪರ ಆಡಿದ್ದೀರಿ ಎಂಬ ಸಂತೋಷವನ್ನು ಅನುಭವಿಸಿ" ಎಂದು ವಿದಾಯ ಘೋಷಿಸಿದ್ದಾರೆ.  

5 /8

2010 ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ಧವನ್, 40 ಪ್ಲಸ್ ಸರಾಸರಿ ಮತ್ತು 90 ಪ್ಲಸ್ ಸ್ಟ್ರೈಕ್ ರೇಟ್‌ʼನಲ್ಲಿ 5000 ಕ್ಕೂ ಹೆಚ್ಚು ರನ್‌ʼ ಗಳಿಸಿದ ಎಂಟು ODI ಬ್ಯಾಟರ್‌ʼಗಳಲ್ಲಿ ಒಬ್ಬರಾಗಿ ನಿವೃತ್ತರಾಗಿದ್ದಾರೆ. ಒಟ್ಟಾರೆಯಾಗಿ, 167 ODIಗಳಲ್ಲಿ 44.11 ರ ಸರಾಸರಿಯಲ್ಲಿ ಮತ್ತು 91.35 ರ ಸ್ಟ್ರೈಕ್ ರೇಟ್‌ನಲ್ಲಿ 6793 ರನ್ ಗಳಿಸಿರುವ ಧವನ್, ಡಿಸೆಂಬರ್ 2022 ರಲ್ಲಿ ಚಟ್ಟೋಗ್ರಾಂನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧ ODIನಲ್ಲಿ ಕೊನೆಯದಾಗಿ ಆಡಿದ್ದರು.  

6 /8

ಇನ್ನು ಈ ನಿವೃತ್ತಿ ಘೋಷಣೆ ಬೆನ್ನಲ್ಲೇ ಧವನ್‌ ಮತ್ತು ಭಾರತದ ಮಾಜಿ ಮಹಿಳಾ ಕ್ರಿಕೆಟ್‌ ಕ್ಯಾಪ್ಟನ್ ಮಿಥಾಲಿ ರಾಜ್ʼಗೆ ಸಂಬಂಧಿಸಿದ ಮಹತ್ವದ ಸುದ್ದಿಯೊಂದು ವೈರಲ್‌ ಆಗುತ್ತಿದೆ. ಈ ಸುದ್ದಿಯಲ್ಲಿ, ʼಶಿಖರ್ ಧವನ್‌, ಮಿಥಾಲಿಯವರನ್ನು ಮದುವೆಯಾಗಲಿದ್ದಾರೆʼ ಎಂಬ ವದಂತಿ ಇದೆ. ಅಷ್ಟಕ್ಕೂ ಇದು ನಿಜ ಸುದ್ದಿಯೇ? ಮುಂದೆ ಓದೋಣ.  

7 /8

ಕಾರ್ಯಕ್ರಮವೊಂದರಲ್ಲಿ ಮಿಥಾಲಿ ಜೊತೆ ಮಾತುಕತೆ ನಡೆಸುತ್ತಿದ್ದ ಧವನ್‌ ಈ ವದಂತಿ ಬಗ್ಗೆ ಪ್ರತಿಕ್ರಿಯಿಸಿದ್ದಲ್ಲದೆ, ಜೋರಾಗಿ ನಕ್ಕಿದ್ದಾರೆ. "ಒಂದು ಕಾಲದಲ್ಲಿ ಮಿಥಾಲಿ ರಾಜ್ ಅವರನ್ನು ಮದುವೆಯಾಗಲಿದ್ದೇನೆ ಎಂಬ ವದಂತಿಗಳು ಇದ್ದವು" ಎಂದು ಧವನ್ ಹೇಳಿದ್ದಾರೆ.  

8 /8

ಭಾರತೀಯ ಕ್ರಿಕೆಟಿಗ ಶಿಖರ್ ಧವನ್ 2012 ರಲ್ಲಿ ಆಯೇಶಾ ಮುಖರ್ಜಿ ಎಂಬವರನ್ನು ವಿವಾಹವಾಗಿದ್ದರು. ಆದರೆ, ಈಗ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಒಂಬತ್ತು ವರ್ಷಗಳ ಕಾಲ ಒಟ್ಟಿಗೆ ಇದ್ದ ಧವನ್ ಮತ್ತು ಆಯೇಶಾ ಬಳಿಕ ಬೇರೆಯಾದರು. ಈಗ ಇಬ್ಬರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದಾರೆ. ಧವನ್ ಅವರ ಪತ್ನಿ ಆಯೇಷಾ ಮುಖರ್ಜಿ ಭಾರತದಲ್ಲಿ ಜನಿಸಿದರೂ ನಂತರ ಆಸ್ಟ್ರೇಲಿಯಾಕ್ಕೆ ತೆರಳಿದರು. ಆಯೇಷಾ ಕಿಕ್ ಬಾಕ್ಸರ್. ಅವರ ತಂದೆ ಬಂಗಾಳಿ ಮತ್ತು ತಾಯಿ ಬ್ರಿಟಿಷ್ ಮೂಲದವರು.