Importance of Shraddha: ತಾಮಸ ಆಹಾರಗಳನ್ನು ಸೇವಿಸದೇ ಹಿಂದಿನ ದಿನದಿಂದಲೇ ಸಾತ್ವಿಕ ಆಹಾರ, ಬ್ರಹ್ಮಚರ್ಯ ಪಾಲಿಸಿ ವ್ರತ ಮಾಡಿ ಪಿತೃಗಳ ಕಾರ್ಯ ಮಾಡುವುದರಿಂದ ನಮ್ಮ ವಂಶಕ್ಕೇ ಸಮೃದ್ಧಿ ಸಿಗುವುದು.
Importance of Shraddha: ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಗತಿಸಿದ ಪೂರ್ವಜರಿಗೆ ಒಂದು ದಿನ ತರ್ಪಣ ನೀಡುವುದು ಅಥವಾ ಶ್ರಾದ್ಧ ಕಾರ್ಯ ಮಾಡುವುದು ಅತ್ಯಂತ ಶ್ರೇಯಸ್ಕರ ಕೆಲಸವಾಗಿದೆ. ಒಂದು ವೇಳೆ ಪಿತೃಗಳಿಗೆ ಶ್ರಾದ್ಧ ಕಾರ್ಯ ಸರಿಯಾಗಿ ಮಾಡದೇ ಇದ್ದರೆ ಪಿತೃ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಶ್ರಾದ್ಧ ಕಾರ್ಯಗಳನ್ನು ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಶ್ರಾದ್ಧ ಕಾರ್ಯದ ನಿಯಮಗಳನ್ನು ಪಾಲಿಸದಿದ್ದರೆ ಕೆಡುಕುಗಳು ತಪ್ಪಿದ್ದಲ್ಲ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಪಿತೃ ಕೋಪ ಅಥವಾ ಪಿತೃ ಶಾಪ ಎನ್ನುವುದು ಅತ್ಯಂತ ಕೆಟ್ಟದ್ದು. ಮನೆಯಲ್ಲಿ ಶಾಂತಿ, ನೆಮ್ಮದಿ, ಸಂತಾನ, ವಿವಾಹ ಭಾಗ್ಯ, ಸಮೃದ್ಧಿ ನೆಲೆಸಿರಬೇಕಾದರೆ ಶ್ರಾದ್ಧ ಕಾರ್ಯಗಳನ್ನು ಕಾಲಾನುಸಾರವಾಗಿ ಮಾಡುತ್ತಾ ಬರಬೇಕು. ಇಲ್ಲದೇ ಹೋದರೆ ಕುಟುಂಬದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ.
ಶ್ರದ್ಧೆಯಿಂದ ಮಾಡುವುದನ್ನೇ ಶ್ರಾದ್ಧ ಎನ್ನುತ್ತಾರೆ. ಹೀಗಾಗಿ ಶ್ರಾದ್ಧ ಮಾಡುವಾಗ ನಾವು ಸಂಪೂರ್ಣವಾಗಿ ಮಡಿಯಲ್ಲಿದ್ದು ಶ್ರದ್ಧೆಯಿಂದ ಮಾಡುವುದು ಅಗತ್ಯವೆಂದು ಹೇಳಲಾಗಿದೆ.
ಪಿತೃ ಪಕ್ಷದಲ್ಲಿ ಶ್ರಾದ್ಧ ಕಾಲ ಮಾಡಲು ಶ್ರೇಷ್ಠ ಸಮಯವಾಗಿದೆ. ನಮ್ಮ ಗತಿಸಿದ ಹಿರಿಯರಿಗೆ ನೀರಿನಲ್ಲಿ ಪಿಂಡ ಬಿಡುವುದು, ಕಾಗೆಗೆ ನೀಡುವುದು, ಗೋವಿಗೆ ನೀಡುವ ಮೂಲಕ ಅವರಿಗೆ ವರ್ಷಕ್ಕೊಮ್ಮೆಯಾದರೂ ಆಹಾರ ತಲುಪುವಂತೆ ಮಾಡಿದರೆ ನಮ್ಮ ಕುಟುಂಬವೂ ನೆಮ್ಮದಿಯಾಗಿರುವುದು.
ತಾಮಸ ಆಹಾರಗಳನ್ನು ಸೇವಿಸದೇ ಹಿಂದಿನ ದಿನದಿಂದಲೇ ಸಾತ್ವಿಕ ಆಹಾರ, ಬ್ರಹ್ಮಚರ್ಯ ಪಾಲಿಸಿ ವ್ರತ ಮಾಡಿ ಪಿತೃಗಳ ಕಾರ್ಯ ಮಾಡುವುದರಿಂದ ನಮ್ಮ ವಂಶಕ್ಕೇ ಸಮೃದ್ಧಿ ಸಿಗುವುದು.