ಪದೇ ಪದೇ ಈ ವಸ್ತುಗಳು ಚೆಲ್ಲುತ್ತಿದ್ದರೆ ಅದು ಸಂಕಷ್ಟ ಆಗಮನದ ಸಂಕೇತ

 ಶುಭ ಘಟನೆಗಳನ್ನು ಸೂಚಿಸುವ ಘಟನೆಗಳನ್ನು ಶುಭ  ಶಕುನ ಮತ್ತು ಅಶುಭ ಘಟನೆಗಳನ್ನು ಸೂಚಿಸುವ ಘಟನೆಗಳನ್ನು ಅಶುಭ ಶಕುನ ಎಂದು ಕರೆಯಲಾಗುತ್ತದೆ. 

ಬೆಂಗಳೂರು : ದೈನಂದಿನ ಜೀವನದಲ್ಲಿ ಘಟಿಸುವ ಕೆಲವು ಘಟನೆಗಳ ಬಗ್ಗೆ ನಾವು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.  ಆದರೆ ಈ ಘಟನೆಗಳು ಕೆಲವು ವಿಶೇಷ ಸೂಚನೆಗಳನ್ನು ನೀಡುತ್ತವೆ. ಈ ಚಿಹ್ನೆಗಳು ಭವಿಷ್ಯದಲ್ಲಿ ಎದುರಾಗಬಹುದಾದ ಸಂಕಷ್ಟದ ಮುನ್ಸೂಚನೆಯನ್ನು ನೀಡುತ್ತದೆ.  ಬೆಳವಣಿಗೆಗಳ ಸೂಚನೆಗಳಾಗಿವೆ. ಇವುಗಳನ್ನು ಶಕುನ ಎಂದು ಕರೆಯಲಾಗುತ್ತದೆ. ಶುಭ ಘಟನೆಗಳನ್ನು ಸೂಚಿಸುವ ಘಟನೆಗಳನ್ನು ಶುಭ  ಶಕುನ ಮತ್ತು ಅಶುಭ ಘಟನೆಗಳನ್ನು ಸೂಚಿಸುವ ಘಟನೆಗಳನ್ನು ಅಶುಭ ಶಕುನ ಎಂದು ಕರೆಯಲಾಗುತ್ತದೆ. ಕೈಯಿಂದ ಪದೇ ಪದೇ ಕೆಲವು ವಸ್ತುಗಳು ಬೀಳುತ್ತಿದ್ದರೆ, ಅವು ಕೆಟ್ಟ ಶಕುಣವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಯಾವುದೇ ಪೂಜಾ ಸಾಮಗ್ರಿಗಳು ಅಥವಾ ಪೂಜೆಯ ಸಂಪೂರ್ಣ ತಟ್ಟೆಯು ನಿಮ್ಮ ಕೈಯಿಂದ  ಪದೇ ಪದೇ ಬೀಳುತ್ತಿದ್ದರೆ, ಅದನ್ನು ಶುಭ ಸಂಕೇತ ಎಂದು ಕರೆಯಲಾಗುವುದಿಲ್ಲ. ಶಕುನ ಶಾಸ್ತ್ರದ ಪ್ರಕಾರ ಹೀಗಾದಾಗ ದೇವರ ಕೃಪೆ ನಿಮ್ಮ ಮೇಲಿಲ್ಲ ಎಂದು ಹೇಳಲಾಗುತ್ತದೆ.

2 /5

ಜ್ಯೋತಿಷ್ಯದಲ್ಲಿ ಉಪ್ಪಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ದೋಷ ಮತ್ತು ಕುಂಡಲಿ ದೋಷಗಳಿಗೆ ಉಪ್ಪಿನ ಪರಿಹಾರಗಳನ್ನು ಸಹ ಸೂಚಿಸಲಾಗಿದೆ. ಉಪ್ಪು ಪದೇ ಪದೇ ಕೈ ತಪ್ಪಿ ಬೀಳುತ್ತಿದ್ದರೆ, ಅದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವ ಸಂಕೇತವಾಗಿದೆ. 

3 /5

ಎಣ್ಣೆ ಶನಿಗೆ ಸಂಬಂಧಿಸಿದ ವಸ್ತುವಾಗಿದೆ, ನಿಮ್ಮ ಕೈಯಿಂದ ಎಣ್ಣೆಯು ಮತ್ತೆ ಮತ್ತೆ ಬೀಳುತ್ತಿದ್ದರೆ ಅದು ಒಳ್ಳೆಯ ಸಂಕೆತವಲ್ಲ. ಇದು ಜೀವನದಲ್ಲಿ ಬರುವ ಕೆಲವು ದೊಡ್ಡ ಸಮಸ್ಯೆಗಳ ಸೂಚನೆಯಾಗಿರುತ್ತದೆ.  

4 /5

ಆಹಾರದ ಪೋಲು ಮಾಡುವುದೆಂದರೆ ತಾಯಿ ಅನ್ನಪೂರ್ಣ ಮತ್ತು  ಲಕ್ಷ್ಮೀ ಯನ್ನು ಕೆರಳಿಸುತ್ತದೆ. ಅನ್ನ ಬಡಿಸುವಾಗ ಪದೇ ಪದೇ ವ್ಯಕ್ತಿಯ ಕೈಯಿಂದ ಆಹಾರ ಬಿದ್ದರೆ, ಅದು ಬಡತನ ಎದುರಾಗುವ ಸಂಕೇತವಾಗಿದೆ. 

5 /5

ಹಸುವಿನ ಹಾಲನ್ನು ಮಕರಂದ ಎಂದು ಪರಿಗಣಿಸಲಾಗುತ್ತದೆ. ಪದೇ ಪದೇ ಯಾರ ಕೈಯಿಂದಲಾದರೂ ಹಾಲು ಚೆಲ್ಲುತ್ತಿದ್ದರೆ ಅದು ಒಳ್ಳೆಯ ಶಕುನವಲ್ಲ. ಇದಲ್ಲದೆ, . ಹಾಲನ್ನು ಮತ್ತೆ ಮತ್ತೆ ಕುದಿಸುವುದು ಕೂಡಾ ಒಳ್ಳೆಯದಲ್ಲ ಎನ್ನಲಾಗುತ್ತದೆ.  ( ಸೂಚನೆ : ಮೇಲಿನ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)