Identifying Isht Dev: ಒಂದು ವೇಳೆ ನಿಮಗೂ ಕೂಡ ನಿಮ್ಮ ಇಷ್ಟ ದೇವರು (Isht Dev) ತಿಳಿದಿಲ್ಲ ಎಂದಾದರೆ, ನೀವು ನಿಮ್ಮ ರಾಶಿ ಹಾಗೂ ಜನ್ಮಜಾತಕವನ್ನು ಬಳಸಿ ನಿಮ್ಮ ಇಷ್ಟ ದೇವರು ಯಾರು ಎಂಬುದನ್ನು ತಿಳಿದುಕೊಳ್ಳಬಹುದು. ಏಕೆಂದರೆ ಇಷ್ಟ ದೇವರನ್ನು ಪೂಜಿಸಿದರೆ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ನವದೆಹಲಿ: Identifying Isht Dev - ಹಾಗೆ ನೋಡಿದರೆ ಯಾವುದೇ ವ್ಯಕ್ತಿ ತಮ್ಮ ಇಚ್ಛೆ ಹಾಗೂ ಶ್ರದ್ಧೆಗೆ ತಕ್ಕಂತೆ ಯಾವುದೇ ದೇವಿ ಅಥವಾ ದೇವರ ಪೂಜೆ ಸಲ್ಲಿಸಬಹುದು (Worshipping God). ಆದರೆ, ಶಾಸ್ತ್ರಗಳಲ್ಲಿ ಯಾವುದೇ ಓರ್ವ ವ್ಯಕ್ತಿ ಆತನ ಇಷ್ಟ ದೇವರನ್ನು ಪೂಜಿಸುವುದು ವಿಶೇಷವಾಗಿ ಮಹತ್ವದ್ದು ಎಂದು ಹೇಳಲಾಗಿದೆ. ಏಕೆಂದರೆ ಇಷ್ಟದೇವನ ಸಂಬಂಧ ನಮ್ಮ ಕರ್ಮ ಹಾಗೂ ನಮ್ಮ ಜೀವನವನ್ನು ಆಧರಿಸಿ ಇರುತ್ತದೆ. ಧಾರ್ಮಿಕ ನಂಬಿಕೆಗಳ ಅನುಸಾರ ಇಷ್ಟ ದೇವರನ್ನು ಪೂಜಿಸುವುದರಿಂದ ವ್ಯಕ್ತಿ ಉತ್ತಮ ಮತ್ತು ಶುಭ ಫಲಗಳನ್ನು ಪ್ರಾಪ್ತಿ ಮಾಡಬಹುದು. ಇಷ್ಟ ದೇವ ಎಂದರೆ ನಮ್ಮ ನೆಚ್ಚಿನ ದೇವರು. ಆದರೆ, ಯಾರೊಬ್ಬರಿಗೆ ತಮ್ಮ ಇಷ್ಟದೇವರನ್ನು ಹೇಗೆ ಗುರುತಿಸಬೇಕು ಎಂಬುದು ತಿಳಿದೇ ಇಲ್ಲ ಎಂದರೆ? ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಇದನ್ನು ಓದಿ- Surya Rashi Parivartan 2021 : ನಾಳೆ ಕುಂಭ ರಾಶಿಗೆ ಸೂರ್ಯನ ಪ್ರವೇಶ, ಈ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಜೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಜನನ ತಿಥಿ, ನಿಮ್ಮ ಹೆಸರಿನ ಮೊದಲ ಅಕ್ಷರ ಅಥವಾ ಜನ್ಮ ಜಾತಕದ ರಾಶಿಯ ಆಧಾರದ ಮೇಲೆ ನೀವು ನಿಮ್ಮ ಇಷ್ಟದೇವನನ್ನು ಗುರುತಿಸಬಹುದು. ಅರುಣ ಸಂಹಿತೆ (ಇದನ್ನು ಕೆಂಪು ಪುಸ್ತಕ ಎಂದೂ ಕೂಡ ಕರೆಯಲಾಗುತ್ತದೆ) ಅನುಸಾರ ವ್ಯಕ್ತಿ ತನ್ನ ಪೂರ್ವಜನ್ಮದಲ್ಲಿ ಮಾಡಿದ ಕರ್ಮದ ಆಧಾರದ ಮೇಲೆ ಆತನ ಇಷ್ಟದೇವ ಯಾರು ಎಂದು ಹೇಳಲಾಗುತ್ತದೆ. ಕುಂಡಲಿ ಅಥವಾ ಜನ್ಮ ಜಾತಕದ 5 ನೇ ಭಾವ ಅಥವಾ ಸ್ಥಾನ ಇಷ್ಟ ದೇವನ ಸ್ಥಾನವಾಗಿರುತ್ತದೆ. ಈ ಸ್ಥಾನದಲ್ಲಿ ಯಾವ ರಾಶಿ ಇರುತ್ತದೆಯೋ ಆ ರಾಶಿಯ (Zodiac Sign) ಗ್ರಹದ ಅಧಿಪತಿಯೇ ಆ ವ್ಯಕ್ತಿಯ ಇಷ್ಟದೇವ. ನಿಮ್ಮ ಜಾತಕ ಎಷ್ಟೇ ದೋಷದಿಂದ ಕೂಡಿದ್ದರು, ನೀವು ನಿಮ್ಮ ಇಷ್ಟದೇವನನ್ನು ಪ್ರಸನ್ನಗೊಳಿಸಿದರೆ, ಆ ದೋಷಗಳು ನಿಮ್ಮನ್ನು ಹೆಚ್ಚು ಕಾಡುವುದಿಲ್ಲ.
ಮೇಷ ಹಾಗೂ ವೃಶ್ಚಿಕ: ಮೇಷ ಹಾಗೂ ವೃಶ್ಚಿಕ ರಾಶಿಗಳ (Rashi) ಸ್ವಾಮಿ ಗ್ರಹ ಮಂಗಳ ಗ್ರಹ. ಹೀಗಾಗಿ ಈ ಎರಡೂ ರಾಶಿಗಳಿಗೆ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ರಾಮ ಇಷ್ಟ ದೇವರು. ವೃಷಭ ಹಾಗೂ ತುಲಾ: ವೃಷಭ ಹಾಗೂ ತುಲಾ ರಾಶಿಗಳ ಸ್ವಾಮಿ ಗ್ರಹ ಶುಕ್ರ ಗ್ರಹ ಆಗಿದೆ. ಹೀಗಾಗಿ ಇವರ ಇಷ್ಟ ದೇವತೆ ದೇವಿ ದುರ್ಗಾ ಆಗಿದ್ದು, ಇವರು ದೇವಿ ದುರ್ಗೆಯನ್ನು ಆರಾಧಿಸಬೇಕು. ಮಿಥುನ ಹಾಗೂ ಕನ್ಯಾ: ಮಿಥುನ ಹಾಗೂ ಕನ್ಯಾ ರಾಶಿಗಳ ಸ್ವಾಮಿ ಗ್ರಹ ಬುಧ ಗ್ರಹ. ಇವರು ಶ್ರೀಗಣೇಶ ಹಾಗೂ ಶ್ರೀ ವಿಷ್ಣುವನ್ನು ಆರಾಧಿಸಬೇಕು.
ಕರ್ಕ: ಕರ್ಕ ರಾಶಿಯ ಸ್ವಾಮಿ ಗ್ರಹ ಚಂದ್ರ ಹಾಗೂ ದೇವಾಧಿದೇವ ಮಹಾದೇವ ಇವರ ಇಷ್ಟ ದೇವ. ಹೀಗಾಗಿ ಇವರು ಶಿವನನ್ನು ಆರಾಧಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತವೆ. ಸಿಂಹ: ಸಿಂಹ ರಾಶಿಯ ಸ್ವಾಮಿ ಗ್ರಹ ಸೂರ್ಯ. ಇವರ ಇಷ್ಟ ದೇವ ಹನುಮ ಹಾಗೂ ಇಷ್ಟ ದೇವತೆ ಗಾಯತ್ರಿ ದೇವಿ ಆಗಿದ್ದಾರೆ.
ಧನು ಹಾಗೂ ಮೀನ: ಧನು ಹಾಗೂ ಮೀನ ರಾಶಿಯ ಜನರ ಸ್ವಾಮಿ ಗ್ರಹ ಗುರು ಗ್ರಹ. ಇವರ ಇಷ್ಟ ದೇವ ಶ್ರೀವಿಷ್ಣು ಹಾಗೂ ಇಷ್ಟ ದೇವತೆ ಶ್ರೀ ಲಕ್ಷ್ಮಿ ದೇವಿಯಾಗಿದ್ದಾರೆ. ಮಕರ ಹಾಗೂ ಕುಂಭ: ಮಕರ ಹಾಗೂ ಕುಂಭ ರಾಶಿಯ ಜನರ ಸ್ವಾಮಿ ಗ್ರಹ ಶನಿ ಗ್ರಹ. ಹೀಗಾಗಿ ಇವರ ಇಷ್ಟ ದೇವರು ಹನುಮಂತ ಹಾಗೂ ಶಿವನಾಗಿದ್ದಾನೆ. ಇವರ ಪೂಜೆಯಿಂದ ಈ ರಾಶಿಯ ಜನರಿಗೆ ವಿಶೇಷ ಫಲ ಲಭಿಸುತ್ತದೆ.