Hyundai ಲಾಂಚ್ ಮಾಡಲಿದೆ ಹೊಸ i20 N Line, ಕೇವಲ 25,000 ರೂ.ಗಳಿಗೆ ಬುಕ್ ಮಾಡಬಹುದು ಕಾರು

ಈ ಕಾರಿನ ಬುಕಿಂಗ್ ಅನ್ನು ಕಂಪನಿಯು ಆರಂಭಿಸಿದೆ. ನೀವು ಹುಂಡೈ i20 N ಲೈನ್ ಅನ್ನು ರೂ. 25,000 ಕ್ಕೆ ಬುಕ್ ಮಾಡಬಹುದು.
 

ನವದೆಹಲಿ : Hyundai i20 N Line: ದಕ್ಷಿಣ ಕೊರಿಯಾದ ಕಾರು ತಯಾರಕ ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಐ 20 ಎನ್ ಲೈನ್ ಅನ್ನು ಅನಾವರಣಗೊಳಿಸಿದೆ. ಕಾರ್ಯಕ್ಷಮತೆ ಆಧಾರಿತ ಎನ್ ಲೈನ್ ಶ್ರೇಣಿಯ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿಯು ಕೆಲವು ದಿನಗಳ ಹಿಂದೆ ಘೋಷಿಸಿತ್ತು. ಹ್ಯುಂಡೈ i20 N ಭಾರತೀಯ ಮಾರುಕಟ್ಟೆಯಲ್ಲಿ ಈ ಸಾಲಿನ ಮೊದಲ ಕಾರ್ ಆಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಐ 20 ಎನ್ ಲೈನ್ ಕಾರನ್ನು ಅನಾವರಣಗೊಳಿಸುವ ಮೂಲಕ,  ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಕೆಲವೇ ವಾರಗಳಲ್ಲಿ ಈ ಕಾರಿನ ಮಾರಾಟ ಆರಂಭವಾಗಬಹುದು ಎನ್ನಲಾಗಿದೆ.    

2 /5

ಈ ಕಾರಿನ ಬುಕಿಂಗ್ ಅನ್ನು ಕಂಪನಿಯು ಆರಂಭಿಸಿದೆ. ನೀವು ಹುಂಡೈ i20 N ಲೈನ್ ಅನ್ನು ರೂ. 25,000 ಕ್ಕೆ ಬುಕ್ ಮಾಡಬಹುದು.  

3 /5

ಸ್ಟ್ಯಾಂಡರ್ಡ್  i 20ಯಿಂದ N Line ಅನ್ನು ಪ್ರತ್ಯೇಕಿಸಲು ವಿವಿಧ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. Hyundai i20 N Line ಮೋಟಾರ್ ಸ್ಪೋರ್ಟ್, ಅತ್ಯುತ್ತಮ ಕಾರ್ ಆಗಿದೆ.  1.0 Turbo GDI Engine ಅನ್ನು ನೀಡಲಾಗಿದೆ.    

4 /5

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಫೀಚರ್ ಲೋಡ್ ಆಗಿರುವ ಕಾರ್ ಆಗಿರುತ್ತದೆ. Hyundai i20 N Line 58 ಕನೆಕ್ಟೆಡ್ ಫೀಚರ್ ಅನ್ನು ಹೊಂದಿದೆ. ಈ ಕಾರಿಗೆ ಸ್ಪೋರ್ಟಿ ಲುಕ್ ನೀಡಲಾಗಿದೆ. ಇದು ವಿಶೇಷ 3 ಸ್ಪೋಕ್ ಸ್ಟೀರಿಂಗ್ ವೀಲ್ ಹೊಂದಿದೆ. 

5 /5

ಈ ಕಾರಿನ ಬೆಲೆ ಎಷ್ಟು ಇರಲಿದೆ ಎನ್ನುವುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ, ಇದರ ಬೆಲೆ i20 ಟರ್ಬೊಕ್ಕಿಂತ ಹೆಚ್ಚಾಗಿರಲಿದೆ ಎನ್ನಲಾಗಿದೆ. ಅಲ್ಕಾಜಾರ್ ಮಾರಾಟವಾಗುವ ದೇಶದ 97 ನಗರಗಳಲ್ಲಿ 188 ಸಿಗ್ನೇಚರ್ ಮಳಿಗೆಗಳಲ್ಲಿ ಮಾತ್ರ ಹುಂಡೈ ಐ 20 ಎನ್ ಲೈನ್ ಲಭ್ಯವಿರುತ್ತದೆ.