Hair Care Tips: ಚಕ್ರಮಗ್ಗಿ ಅನೇಕ ಔಷಧ ಗುಣಗಳನ್ನು ಹೊಂದಿದೆ.. ಇದನ್ನು ಕೂದಲಿಗೆ ಬಳಸುವುದರಿಂದ ನೆತ್ತಿಯ ಆರೋಗ್ಯ ಸುಧಾರಣೆಯಾಗಿ ಕೂದಲು ಉತ್ತಮವಾಗಿ ಬೆಳೆಯುತ್ತವೆ.. ಹಾಗಾದ್ರೆ ಇದನ್ನು ಬಳಸುವುದೇಗೆ? ಇಲ್ಲಿ ತಿಳಿಯೋಣ..
ಸುಂದರವಾದ ಕೂದಲು ಅಂದವಾಗಿ ಕಾಣುವುದು ಮಾತ್ರವಲ್ಲದೆ ನಿಮ್ಮ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಸಹಾಯಮಾಡುತ್ತದೆ. ಆದರೆ ಇಂದು ಬಿಡುವಿಲ್ಲದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ಕೂದಲು ಉದುರುವಿಕೆ, ಒಣ ಕೂದಲು ಇತ್ಯಾದಿ ಸಮಸ್ಯೆ ಎದುರಿಸುತ್ತಿದ್ದಾರೆ..
ನೀವು ಕಳೆದುಹೋದ ಕೂದಲಿನ ಹೊಳಪನ್ನು ಮರಳಿ ತರಲು ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಬಯಸಿದರೆ, ನಿಮ್ಮ ಅಡುಗೆಮನೆಯಲ್ಲಿ ಇರಿಸಲಾಗಿರುವ ಈ ಮ್ಯಾಜಿಕ್ ಮಸಾಲೆ ನಿಮಗೆ ಸಹಾಯಮಾಡುತ್ತದೆ.
ಹೌದು, ಈ ಮಸಾಲೆಯ ಹೆಸರು ಚಕ್ರಮಗ್ಗಿ..ಕೂದಲ ರಕ್ಷಣೆಗಾಗಿ ಜನರು ಹಿಂದಿನಿಂದಲೂ ಸ್ಟಾರ್ ಸೋಂಪು ಬಳಸುತ್ತಿದ್ದಾರೆ. ಏಕೆಂದರೇ ಇದು ಅನೇಕ ಔಷಧಿಯ ಗುಣಗಳನ್ನು ಹೊಂದಿದೆ.. ಇದೀಗ ಕೂದಲ ರಕ್ಷಣೆಗಾಗಿ ಚಕ್ರಮಗ್ಗಿಯನ್ನು ಬಳಸುವುದು ಹೇಗೆ ಬಳಸುವುದು ಎಂದು ನೋಡೋಣ.
ಚಕ್ರಮಗ್ಗಿ ಎಣ್ಣೆ: ಈ ಎಣ್ಣೆಯನ್ನು ತಯಾರಿಸಲು ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಚಕ್ರಮಗ್ಗಿಯನ್ನು ಹಾಕಿ ಎರಡು ಗಂಟೆಗಳ ಕಾಲ ಕುದಿಯಲು ಬಿಡಿ.. ಇದರಿಂದ ಎಣ್ಣೆ ಗಾಢವಾಗಿ ಮಿಶ್ರಣವಾಗುತ್ತದೆ..
ಬಳಿಕ ಕುದಿಸಿದ ಎಣ್ಣೆಯನ್ನು ಫಿಲ್ಟರ್ ಮಾಡಿ ಗಾಜಿನ ಬಾಟಲಿಯಲ್ಲಿ ಹಾಕಿ.. ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡಬಹುದು..
ಚಕ್ರಮಗ್ಗಿ ನೀರು: ಈ ಚಕ್ರಮಗ್ಗಿಯ ನೀರನ್ನು ಸಹ ಕೂದಲಿಗೆ ಬಳಸಬಹುದು.. ಕುದಿಯುವ ನೀರಿಗೆ ಈ ಪದಾರ್ಥವನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟು ಆ ನೀರನ್ನು ತಕೆಗೆ ಶಾಂಪೂವಿನಂತೆ ಬಳಸಿದರೇ ಕೂದಲು ಹೊಳೆಯುವುದಲ್ಲದೇ ಉದ್ದ.. ದಟ್ಟವಾಗಿ ಬೆಳೆಯುತ್ತವೆ..
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)