Crickets rules : ಕ್ರಿಕೆಟ್ ಆಟವನ್ನು ಭಾರತದಲ್ಲಿ ಎಲ್ಲರೂ ಇಷ್ಟಪಡುತ್ತಾರೆ. ಈ ಆಟದಲ್ಲಿ, ಒಂದು ತಂಡವು ಬೌಲಿಂಗ್ ಮಾಡುವಾಗ ಇನ್ನೊಂದು ತಂಡವು ಬ್ಯಾಟಿಂಗ್ ಮಾಡುತ್ತದೆ. ಕ್ರಿಕೆಟ್ ಆಟದಲ್ಲಿ ಹಲವು ನಿಯಮಗಳಿವೆ. ಅದರಂತೆ ನಿಮಗೆ ಒಂದೇ ಎಸೆತದಲ್ಲಿ ಇಬ್ಬರು ಆಟಗಾರರನ್ನು ಔಟ್ ಮಾಡುವ ವಿಧಾನದ ಬಗ್ತಗೆ ಗೊತ್ತಿದೆಯೇ..? ಬನ್ನಿ ತಿಳಿಯೋಣ..
ಕ್ರಿಕೆಟ್ ಆಟವನ್ನು ವಿಶ್ವದಾದ್ಯಂತ ಜನರು ಆಡುತ್ತಾರೆ ಮತ್ತು ಪ್ರೀತಿಸುತ್ತಾರೆ. ಕ್ರಿಕೆಟ್ನಲ್ಲಿ ಎರಡು ತಂಡಗಳು ಸರದಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುತ್ತವೆ.
ಕ್ರಿಕೆಟ್ನಲ್ಲಿ ಬೌಲ್, ಎಲ್ಬಿಡಬ್ಲ್ಯೂ, ಕ್ಯಾಚ್ಔಟ್, ಸ್ಟಂಪಿಂಗ್ನಂತಹ ಹಲವು ನಿಯಮಗಳಿವೆ. ಆದರೆ ಒಂದೇ ಎಸೆತದಲ್ಲಿ ಇಬ್ಬರು ಆಟಗಾರರನ್ನು ಹೇಗೆ ಔಟ್ ಮಾಡಬಹುದು ಎಂಬುವುದು ನಿಮಗೆ ತಿಳಿದಿದೆಯೆ.?
2023ರ ODI ವಿಶ್ವಕಪ್ನಲ್ಲಿ 1 ಎಸೆತದಲ್ಲಿ 2 ಆಟಗಾರರು ಔಟಾಗಿದ್ದರು.
ಕ್ರಿಕೆಟ್ ನಿಯಮವು ಸಂಖ್ಯೆ 31ರ ಪ್ರಕಾರ, ಇಬ್ಬರು ಆಟಗಾರರು 1 ಎಸೆತದಲ್ಲಿ ಔಟ್ ಆಗುತ್ತಾರೆ. ವಾಸ್ತವವಾಗಿ ಸಮಯ ಮೀರಿದರೆ ಆಟಗಾರನನ್ನು ಔಟ್ ಮಾಡಬಹುದು.
ವಿಕೆಟ್ ಪತನದ ನಂತರ ಅಥವಾ ಬ್ಯಾಟ್ಸ್ಮನ್ನ ನಿವೃತ್ತಿಯ ನಂತರ ಒಳಬರುವ ಬ್ಯಾಟ್ಸ್ಮನ್ 3 ನಿಮಿಷ ಒಳಗೆ ಮುಂದಿನ ಚೆಂಡನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. ಇಲ್ಲದಿದ್ದರೆ ಅವರು ಔಟ್
2023 ರ ವಿಶ್ವಕಪ್ನಲ್ಲಿ ಶ್ರೀಲಂಕಾದ ಬ್ಯಾಟ್ಸ್ಮನ್ ಏಂಜೆಲೊ ಮ್ಯಾಥ್ಯೂಸ್ ಈ ನಿಯಮದ ಅಡಿಯಲ್ಲಿ ಮೊದಲ ಮತ್ತು ಕೊನೆಗೆ ಬಲಿಯಾದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಒಬ್ಬ ಆಟಗಾರ ಔಟಾದಾಗ ಮ್ಯಾಥ್ಯೂಸ್ 3 ನಿಮಿಷದಲ್ಲಿ ಕ್ರೀಸ್ಗೆ ಬರದೆ ಔಟಾಗಿದ್ದರು.