ಎಸಿ, ಫ್ಯಾನ್ ಬಳಸಿಯೂ ವಿದ್ಯುತ್ ಬಿಲ್ ಕಡಿಮೆ ಮಾಡಲು ಸಿಂಪಲ್ ಟಿಪ್ಸ್

                                  

ಎಲೆಕ್ಟ್ರಿಸಿಟಿ ಬಿಲ್ ಕಡಿಮೆ ಮಾಡಲು ಸರಳ ಸಲಹೆಗಳು:  ಬೇಸಿಗೆ ಕಾಲದಲ್ಲಿ ಒಂದೆಡೆ ಬಿಸಿಲಿನ ತಾಪ ಇನ್ನೊಂದೆಡೆ ವಿದ್ಯುತ್ ಬಿಲ್ ಜನರಿಗೆ ಶಾಕ್ ನೀಡುತ್ತಲೇ ಇರುತ್ತದೆ. ಬಿಸಿಲಿನ ತಾಪದಿಂದ ಪರಿಹಾರ ಪಡೆಯಲು ಜನರು ಮನೆಯಲ್ಲಿ ಫ್ಯಾನ್, ಕೂಲರ್, ಎಸಿಗಳನ್ನು ಬಳಸುತ್ತಾರೆ. ಆದರೆ ಇದರಿಂದಾಗಿ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ ಎಂಬುದು ಹಲವರ ಸಮಸ್ಯೆಯಾಗಿದೆ. ಆದರೆ, ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಮನೆಯಲ್ಲಿ ಎಸಿ, ಕೂಲರ್, ಫ್ಯಾನ್ ಬಳಸಿಯೂ ಕೂಡ ವಿದ್ಯುತ್ ಬಿಲ್ ಅನ್ನು ಶೇ. 50ರಷ್ಟು ಕಡಿಮೆ ಮಾಡಬಹುದು. ಅದಕ್ಕಾಗಿ ಈ ಕೆಳಗಿನ ಟಿಪ್ಸ್ ಅನುಸರಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಬೇಸಿಗೆಯಿಂದ ಪರಿಹಾರ ಪಡೆಯಲು ಮನೆಯಲ್ಲಿ ಎಸಿ, ಕೂಲರ್ ಬಳಸುವುದನ್ನು ಕಡಿಮೆ ಮಾಡಿ ಇವುಗಳ ಬದಲಿಗೆ ಸೀಲಿಂಗ್ ಮತ್ತು ಟೇಬಲ್ ಫ್ಯಾನ್ ಬಳಸಿ.  ಇದರಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. ಬಿಲ್ ಸಹ ಕಡಿಮೆ ಬರುತ್ತದೆ.

2 /6

ಹವಾನಿಯಂತ್ರಣ ಅಂದರೆ ಎಸಿ ಬಳಸಿಯೂ ವಿದ್ಯುತ್ ಬಿಲ್ ಕಡಿಮೆಯಾಗಬೇಕೆಂದರೆ ಉತ್ತಮ ರೇಟಿಂಗ್ ಇರುವ ಎಸಿ ಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಜೊತೆಗೆ ಎಸಿ ಚಲಾಯಿಸುವಾಗ ಅದನ್ನು  25 ಡಿಗ್ರಿಗಳಲ್ಲಿ ಬಳಸಿ. ನೀವು ಹೆಚ್ಚು ವೇಗವಾಗಿ ಎಸಿ ಬಳಸಿದಷ್ಟೂ ಬಿಲ್ ಸಹ ಹೆಚ್ಚು ಬರುತ್ತದೆ.

3 /6

ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಮೈಕ್ರೋವೇವ್ ನಂತಹ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡುತ್ತಾರೆ. ಇದಕ್ಕೆ ಕಾರಣ ಏನೇ ಇರಬಹುದು. ಆದೆರ್, ಇದು ಹೆಚ್ಚಿನ ವಿದ್ಯುತ್ ಬಳಕೆಗೆ ಕಾರಣವಾಗುತ್ತದೆ. ಇದಲ್ಲದೆ ಫ್ರಿಡ್ಜ್ ಸುತ್ತಮುತ್ತಲೂ ಸಾಕಷ್ಟು ಗಾಳಿಯ ಹರಿವನ್ನು ಖಚಿತಪಡಿಸಿಕೊಳ್ಳಿ. 

4 /6

ವಿದ್ಯುತ್ ಬಲಕೆಗಾಗಿ ಮನೆಯ ಛಾವಣಿಯ ಮೇಲೆ ಸೌರ ಫಲಕ ಅಥವಾ ಸೋಲಾರ್ ಅನ್ನು ಸ್ಥಾಪಿಸುವುದು ಕೂಡ ಉತ್ತಮ ಆಯ್ಕೆಯಾದಿದೆ. ಇದರಿಂದ ವಿದ್ಯುತ್ ಬಿಲ್ ನಿಂದಲೂ ಪರಿಹಾರ ಪಡೆಯಬಹುದು.

5 /6

ಮನೆಯಲ್ಲಿ ಎಲ್ಇಡಿ  ಬಲ್ಬ್ ಬಳಸುವುದರಿಂದಲೂ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ಇದಲ್ಲದೆ ಸಿಎಫ್ಎಲ್ ಬಲ್ಬ್ ಮತ್ತು ಟ್ಯೂಬ್ ಲೈಟ್‌ಗಿಂತ ಐದು ಪಟ್ಟು ವಿದ್ಯುತ್ ಉಳಿಸುತ್ತದೆ. 

6 /6

ಇದಲ್ಲದೆ ಬೆಳಕಿನ ಅಗತ್ಯವಿಲ್ಲದಿದ್ದಾಗ ಲೈಟ್ ಅನ್ನು ಆಫ್ ಮಾಡಿ. ಇದಲ್ಲದೆ ಫೋನ್ ಅನ್ನು ಗಂಟೆಗಟ್ಟಲೆ ಚಾರ್ಜ್ ನಲ್ಲಿ ಬಿಡುವುದು, ಟಿವಿ, ಲ್ಯಾಪ್ ಟಾಪ್ ಎಲ್ಲವನ್ನೂ ಅನಾವಶ್ಯಕವಾಗಿ ಆನ್ ಮಾಡಿ ಬಿಡುವುದನ್ನು ಮಾಡಬೇಡಿ. ಅನಾವಶ್ಯಕವಾಗಿ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸುವುದರಿಂದಲೂ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.