ಚಳಿಗಾಲದಲ್ಲಿ ಕೇವಲ 12 ದಿನಗಳಲ್ಲಿ ತೂಕ ಇಳಿಸುತ್ತೆ ಈ ಅದ್ಭುತ ಜಹಾ..!

Winter weight loss diet plan : ಚಳಿಗಾಲದಲ್ಲಿ ಮನೆಯಲ್ಲಿದ್ದು ತೂಕ ಹೆಚ್ಚಾಗುತ್ತದೆ. ಇದರಿಂದಾಗಿ ತೀವ್ರವಾದ ದೀರ್ಘಕಾಲದ ಕಾಯಿಲೆಗಳನ್ನು ಅನುಭವಿಸಬೇಕಾಗುತ್ತದೆ. ಇದರಿಂದಾಗಿ ಅನೇಕ ಜನರು ತೂಕವನ್ನು ಕಳೆದುಕೊಳ್ಳಲು ಹಲವು ವಿಧಾನಗಳನ್ನು  ಅನುಸರಿಸುತ್ತಾರೆ. ಆದ್ರೆ ಕೊನೆಗೆ ಯಾವುದೇ ಫಲಿತಾಂಶವನ್ನು ಪಡೆಯುವುದಿಲ್ಲ. ಇಲ್ಲಿ ನೀಡಿರುವ ಟಿಪ್ಸ್‌ಗಳನ್ನು ಬಳಸಿ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು..
 

Winter weight loss Tea : ಚಳಿಗಾಲದಲ್ಲಿ ಚಳಿಯ ತೀವ್ರತೆಗೆ ಬೆಳಗ್ಗೆ ಬೇಗ ಏಳಲು ಹೆಚ್ಚಿನ ಜನ ಆಸಕ್ತಿ ತೋರುವುದಿಲ್ಲ. ಅಲ್ಲದೆ, ಕೆಲವರು ಈ ಸಮಯದಲ್ಲಿ ವ್ಯಾಯಾಮ ಮತ್ತು ನಡೆಯುವುದನ್ನು ನಿಲ್ಲಿಸುತ್ತಾರೆ. ಈ ಕಾರಣದಿಂದಾಗಿ ಅವರ ತೂಕ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಆಹಾರದ ಮೂಲಕ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

1 /5

ವಿಶೇಷವಾಗಿ ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬಯಸುವವರು ಅನಾರೋಗ್ಯಕರ ಆಹಾರವನ್ನು ತ್ಯಜಿಸಬೇಕು. ಮುಂಜಾನೆ ಬೇಗ ಎದ್ದು ಮನೆಯಲ್ಲೇ ನಡೆಯುವುದು ಉತ್ತಮ ಎನ್ನುತ್ತಾರೆ ವೈದ್ಯಕೀಯ ತಜ್ಞರು.

2 /5

ಚಳಿಗಾಲದಲ್ಲಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಆಹಾರಕ್ರಮವನ್ನು ಅನುಸರಿಸಬೇಕು. ಇದಲ್ಲದೇ ಯೋಗಾಸನಗಳನ್ನು ಮಾಡುವುದರಿಂದಲೂ ಸುಲಭವಾಗಿ ಉತ್ತಮ ಫಲಿತಾಂಶ ಪಡೆಯಬಹುದು. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸಲು ಸಹಾಯ ಮಾಡುತ್ತದೆ.

3 /5

ಚಳಿಗಾಲದಲ್ಲಿ ಪ್ರತಿದಿನ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಈ ಚಹಾವು ಅನೇಕ ಪೋಷಕಾಂಶಗಳಿಂದ ತುಂಬಿದೆ. ಹಾಗಾಗಿ ಈ ಟೀ ಕುಡಿಯುವುದರಿಂದ ಆರೋಗ್ಯ ಸುಧಾರಿಸುವುದಲ್ಲದೆ ದೀರ್ಘಕಾಲದ ಕಾಯಿಲೆಗಳು ದೂರವಾಗುತ್ತವೆ.

4 /5

ಚಳಿಗಾಲದಲ್ಲಿ ಬೇಗ ತೂಕ ಇಳಿಸಿಕೊಳ್ಳಲು ಬಯಸುವವರು ಗ್ರೀನ್ ಟೀ ಕುಡಿಯಲೇಬೇಕು. ಇದರಲ್ಲಿರುವ ಕೆಲವು ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಅಲ್ಲದೆ, ಅವು ದೇಹದಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಹೊರಹಾಕುತ್ತವೆ.

5 /5

ಕಪ್ಪು ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ದಿನಕ್ಕೆರಡು ಬಾರಿ ಈ ಟೀ ಕುಡಿಯುವುದರಿಂದ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದಲ್ಲದೆ, ಇದು ಹೃದಯಾಘಾತದ ಸಮಸ್ಯೆಗಳನ್ನು ಸಹ ತಡೆಯುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಕಪ್ಪು ಚಹಾವನ್ನು ಸೇರಿಸಿಕೊಳ್ಳಬೇಕು.