Kiccha Sudeep Remuneration: ಕರ್ನಾಟಕದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಈಗ 10ನೇ ಸೀಸನ್’ಗೆ ಕಾಲಿಟ್ಟಿದೆ. ದೇಶದಲ್ಲಿ ಮೊದಲ ಬಾರಿ ಹಿಂದಿಯಲ್ಲಿ ಆರಂಭವಾದ ಈ ಶೋ, ಇದೀಗ ಬಹುತೇಕ ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್
ಹಿಂದಿ ಬಿಗ್ ಬಾಸ್ ಬಳಿಕ, ಅತೀ ಹೆಚ್ಚು ಫೇಮಸ್ ಆಗಿರೋದು ಕನ್ನಡದ ಬಿಗ್ ಬಾಸ್. ಇನ್ನು ಈ ರಿಯಾಲಿಟಿ ಶೋ ಸಖತ್ ಹಿಟ್ ಆಗಲು ಕಾರಣ ವಿವಾದ, ನಾಟಕ, ಜಗಳ, ಸಂಬಂಧ ಹೀಗೆ ಹತ್ತು ಹಲವು ವಿಷಯಗಳು. ಈ ಎಲ್ಲಾ ವಿಷಯಗಳಿಂದನೇ ಸಖತ್ ಟಿ ಆರ್ ಪಿ ಪಡೆಯುತ್ತೆ ಈ ಕಾರ್ಯಕ್ರಮ.
ಇನ್ನು ಬಿಗ್ ಬಾಸ್ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ವಿಶ್ವಕಪ್ ಪ್ರಾರಂಭವಾದ ದಿನದಂದೇ ಬಿಗ್ ಬಾಸ್ ಕೂಡ ತನ್ನ ಹೊಸ ಸೀಸನ್’ನ್ನು ಬಿಡುಗಡೆ ಮಾಡಿತ್ತು. ಈ ಮಧ್ಯೆಯೂ ಟ್ರೆಂಡಿಂಗ್ ಕ್ರಿಯೆಟ್ ಮಾಡಿತ್ತು ಕನ್ನಡದ ಬಿಗ್ ಬಾಸ್ ಶೋ.
ಕನ್ನಡದ ಬಿಗ್ ಬಾಸ್ ಕೇವಲ ಇವಿಷ್ಟೇ ವಿಷಯದಿಂದ ಹಿಟ್ ಆಗಿಲ್ಲ, ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವ ನಟ ಕಿಚ್ಚ ಸುದೀಪ್’ರಿಂದಲೂ ಪ್ರಸಿದ್ಧಿ ಪಡೆದಿದೆ. ಬೇರೆ ಬೇರೆ ಭಾಷೆಗಳಿಗಿಂತಲೂ ಕನ್ನಡದ ಬಿಗ್ ಬಾಸ್ ಗತ್ತು-ಗಮ್ಮತ್ತನ್ನು ಉಳಿಸಿಕೊಂಡು ಬರುತ್ತಿರೋದು ಕಿಚ್ಚ ಆಡುವ ಮಾತುಗಳು ಎಂದರೆ ತಪ್ಪಾಗಲಾರದು.
ಸ್ಪರ್ಧಿಗಳಿಗೆ ಕಿವಿಮಾತನ್ನು ಹೇಳುವ ರೀತಿ, ತಪ್ಪಾದಾಗ ತಿದ್ದಿ ಮುನ್ನಡೆಸೋ ರೀತಿ, ಉತ್ತಮ ಕೆಲಸ ಮಾಡಿದವರು ಬೆನ್ನು ತಟ್ಟೋದು ಹೀಗೆ ಹಲವಾರು ವಿಷಯಗಳ ಜೊತೆ ಕಿಚ್ಚ ಕಾರ್ಯಕ್ರಮ ನಡೆಸಿಕೊಡೋ ರೀತಿ ಸಖತ್ ಇಂಟರೆಸ್ಟಿಂಗ್.
ಇನ್ನು ಕಿಚ್ಚ ಸುದೀಪ್ ತಮ್ಮ ಸ್ಟಾರ್’ಡಂಗೆ ಒಳಪಟ್ಟು, ರಿಯಾಲಿಟಿ ಷೋ ಹೋಸ್ಟ್ ಮಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?
ಬಿಗ್ ಬಾಸ್ ಕನ್ನಡ ಆವೃತ್ತಿಯ 11 ಸೀಸನ್’ಗಳನ್ನು ಸಹ ಕಿಚ್ಚ ಸುದೀಪ್ ಅವರೇ ಹೋಸ್ಟ್ ಮಾಡಿದ್ದಾರೆ. 2015ರಲ್ಲಿ ಕಲರ್ಸ್ ಕನ್ನಡ ಚಾನೆಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದಾಗ, ಮುಂದಿನ 5 ವರ್ಷಗಳವರೆಗೆ ಒಟ್ಟು 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಇನ್ನು ಕೆಲ ವರದಿಗಳ ಪ್ರಕಾರ, ಕಳೆದ ಸೀಸನ್’ನಲ್ಲಿ ತಮ್ಮ ಶುಲ್ಕದಲ್ಲಿ ಹೆಚ್ಚಳ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿಖರ ಮಾಹಿತಿ ಲಭ್ಯವಿಲ್ಲ.